ವಾಷಿಂಗ್ಟನ್(ಅಮೆರಿಕ): ಎರಡು ದಿನಗಳ ಪ್ರವಾಸ ಮುಗಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಹಿಂತಿರುಗಿದ್ದಾರೆ. ಈ ಪ್ರವಾಸ ಉಭಯ ದೇಶಗಳ ಮೌಲ್ಯಯುತ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.
ಐತಿಹಾಸಿಕ ಭಾರತ ಪ್ರವಾಸ ಮುಗಿಸಿ ಟ್ರಂಪ್ ಹಿಂತಿರುಗಿದ ನಂತರ ಮೈಕ್ ಪಾಂಪಿಯೊ ಟ್ವೀಟ್ ಮಾಡಿದ್ದಾರೆ.
-
President @realDonaldTrump's first official trip to India this week demonstrates the value the U.S. places on the #USIndia partnership. Democratic traditions unite us, shared interests bond us, and under the President's leadership our partnership has and will only grow stronger. https://t.co/FbmOenZB26
— Secretary Pompeo (@SecPompeo) February 27, 2020 " class="align-text-top noRightClick twitterSection" data="
">President @realDonaldTrump's first official trip to India this week demonstrates the value the U.S. places on the #USIndia partnership. Democratic traditions unite us, shared interests bond us, and under the President's leadership our partnership has and will only grow stronger. https://t.co/FbmOenZB26
— Secretary Pompeo (@SecPompeo) February 27, 2020President @realDonaldTrump's first official trip to India this week demonstrates the value the U.S. places on the #USIndia partnership. Democratic traditions unite us, shared interests bond us, and under the President's leadership our partnership has and will only grow stronger. https://t.co/FbmOenZB26
— Secretary Pompeo (@SecPompeo) February 27, 2020
ಪ್ರಜಾಪ್ರಭುತ್ವದ ಸಂಪ್ರದಾಯಗಳು ನಮ್ಮನ್ನು ಒಂದುಗೂಡಿಸುತ್ತವೆ, ಪರಸ್ಪರ ಹಂಚಿಕೊಳ್ಳಲಾಗುವ ಹಿತಾಸಕ್ತಿಗಳು ನಮ್ಮನ್ನು ಕೂಡಿಸುತ್ತವೆ ಮತ್ತು ನಮ್ಮ ಅಧ್ಯಕ್ಷರ ನಾಯಕತ್ವದಲ್ಲಿ ನಮ್ಮ ಸಹಭಾಗಿತ್ವವು ಬಲಶಾಲಿಯಾಗಿ ಬೆಳೆಯುತ್ತದೆ ಎಂದು ಟ್ರಂಪ್ ಹೇಳಿಕೆಗಳ ಶ್ವೇತಭವನದ ಪೋಸ್ಟ್ ಅನ್ನು ಮರು-ಟ್ವೀಟ್ ಮಾಡಿ ಪೊಂಪಿಯೊ ಬರೆದುಕೊಂಡಿದ್ದಾರೆ.
-
As @POTUS announced, we concluded over $3B in defense sales to provide our finest military helicopters to Indian Armed Forces. We're proud to be #India’s premier defense partner. Together, we defend our sovereignty & protect a free & open #IndoPacific region for both our peoples.
— State_SCA (@State_SCA) February 27, 2020 " class="align-text-top noRightClick twitterSection" data="
">As @POTUS announced, we concluded over $3B in defense sales to provide our finest military helicopters to Indian Armed Forces. We're proud to be #India’s premier defense partner. Together, we defend our sovereignty & protect a free & open #IndoPacific region for both our peoples.
— State_SCA (@State_SCA) February 27, 2020As @POTUS announced, we concluded over $3B in defense sales to provide our finest military helicopters to Indian Armed Forces. We're proud to be #India’s premier defense partner. Together, we defend our sovereignty & protect a free & open #IndoPacific region for both our peoples.
— State_SCA (@State_SCA) February 27, 2020
ಟ್ರಂಪ್ ಪ್ರವಾಸ ಎರಡೂ ದೇಶದ ಮುಂದಿನ ಅಭಿವೃದ್ದಿ ಗುರಿಗಳಿಗೆ ಮುನ್ನುಡಿ ಬರೆದಿರುವುದು ಮಾತ್ರವಲ್ಲ, ಶಕ್ತಿ, ರಕ್ಷಣಾ ಕ್ಷೇತ್ರ, ಜನರ ನಡುವಿನ ಪರಸ್ಪರ ಸಂಬಂಧ ಮತ್ತು ಇಂಡೋ-ಪೆಸಿಫಿಕ್ ಸಮನ್ವಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ರಾಷ್ಟ್ರ ಕಾರ್ಯದರ್ಶಿ ಆಸಿಯಾ ಆಲಿಸ್ ಜಿ. ವೆಲ್ಸ್ ಟ್ವೀಟ್ ಮಾಡಿ ಹೇಳಿದ್ದಾರೆ.
ಅಮೆರಿಕದ ಅತ್ಯುತ್ತಮ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಒದಗಿಸಲು ಅಮೆರಿಕ, 3 ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟು ರಕ್ಷಣಾ ಮಾರಾಟ ವ್ಯವಹಾರಕ್ಕೆ ವ್ಯಯಮಾಡಲು ತಯಾರಿದೆ ಎಂದು ಅಧ್ಯಕ್ಷರು ಘೋಷಿಸಿದ್ದಾರೆ. ಭಾರತದ ಪ್ರಧಾನ ರಕ್ಷಣಾ ಪಾಲುದಾರರಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ. ಒಟ್ಟಾಗಿ, ನಾವು ನಮ್ಮ ಸಾರ್ವಭೌಮತ್ವವನ್ನು ಕಾಪಾಡುತ್ತೇವೆ ಮತ್ತು ನಮ್ಮ ಎರಡೂ ದೇಶದ ಜನರಿಗೆ ಸಂಬಂಧಿಸಿದ ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ರಕ್ಷಿಸುತ್ತೇವೆ ಎಂದು ವೆಲ್ಸ್ ಉಲ್ಲೇಖಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ವೇಲ್ಸ್ ತಮ್ಮ ಮತ್ತೊಂದು ಟ್ವೀಟ್‌ನಲ್ಲಿ, ನವದೆಹಲಿಯ ಮೃತ ಮತ್ತು ಗಾಯಗೊಂಡವರ ಕುಟುಂಬಗಳಿಗೆ ನಮ್ಮ ಹೃದಯಗಳು ಮಿಡಿಯುತ್ತಿವೆ. ನಾವು ಪ್ರಧಾನಮಂತ್ರಿಯವರಿಗೆ ಕರೆ ಮಾಡಿ ಹಿಂಸಾಚಾರ ನಿಯಂತ್ರಿಸಿ ಶಾಂತಿ ಕಾಪಾಡಿಕೊಳ್ಳಲು ಕೇಳಿಕೊಂಡಿದ್ದೇವೆ. ಜೊತೆಗೆ ಈ ವಿಚಾರವಾಗಿ ಸಹಕರಿಸುವಂತೆ ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.