ವಾಷಿಂಗ್ಟನ್ : ಅವರಿಗೆ ಯಾವುದೇ ವೈದ್ಯಕೀಯ ಅನುಭವವಿಲ್ಲ. ಯಾವುದೇ ಚುನಾವಣೆಗೆ ನಿಂತು ಚುನಾಯಿತರಾಗಿಲ್ಲ. ಮಿಲಿಟರಿ ಸೇವೆ ನೋಡೇ ಇಲ್ಲ. ಆದರೆ, ಅಮೆರಿಕಾ ಅಧ್ಯಕ್ಷರ ಅಳಿಯನಾಗಿ ತಾನಾಗಿಯೇ ಮಹತ್ತರ ಜವಾಬ್ದಾರಿ ಹೊತ್ತ ಜೇರೆಡ್ ಕುಶ್ನರ್, ಕೊರೊನಾ ವೈರಸ್ ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ ಅಮೆರಿಕಾದ ಶ್ವೇತಭವನದ ಪ್ರಮುಖನಾಗಿ ಕಾರ್ಯ ಪ್ರವೃತರಾಗಿದ್ದಾರೆ.
‘39ರ ಹರೆಯದ ಯುವಕ ಕುಶ್ನರ್ ವಾಷಿಂಗ್ಟನ್‌ಗೆ ಹೊಸಬರೇನಲ್ಲ. ಈ ಮೊದಲು ಅವರು ಸರ್ಕಾರದ ಮಟ್ಟದಲ್ಲಿ ಸೇವೆ ಸಲ್ಲಿಸಲಿಲ್ಲವಾದರೂ, ಟ್ರಂಪ್ ಅವರ ಪುತ್ರಿ ಇವಾಂಕಾ ಅವರೊಂದಿಗೆ ವಿವಾಹವಾಗಿ 2016ರ ಚುನಾವಣೆಯ ನಂತರ ಅವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಯಿತು. ಕೊರೊನಾ ವೈರಸ್ ಸಂಬಂಧ ಟ್ರಂಪ್ ಅವರ ದೈನಂದಿನ ಕಿರು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಕುಶ್ನರ್ ಅವರ ಆಶ್ಚರ್ಯಕರ ಉಪಸ್ಥಿತಿ ಅಚ್ಚರಿಗೆ ಕಾರಣವಾಗಿತ್ತು. ಅಮೆರಿಕಾ ಇತಿಹಾಸದಲ್ಲಿ ದೇಶಕ್ಕೆ ಬಡಿದ ದೊಡ್ಡ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಕುಶ್ನರ್ ಅವರ ಆಶ್ಚರ್ಯಕರ ಉಪಸ್ಥಿತಿ ಖಚಿತಪಡಿಸಿತು.
ಕ್ರಿಯಾತ್ಮಕ ಚಿಂತಕನಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ರಿಯಲ್ ಎಸ್ಟೇಟ್ ಕುಡಿ ಕುಶ್ನರ್, ಒಂದು ಗುಪ್ತ ತಂಡ ಮುನ್ನಡೆಸುತ್ತಿದ್ದಾರೆ ಎಂದು ಕೆಲದಿನಗಳಿಂದ ಗಾಳಿಸುದ್ದಿ ಕೇಳಿ ಬರುತ್ತಿದ್ದವು. ಆದರೆ, ಟ್ರಂಪ್ ಕೊರೊನಾ ವೈರಸ್ ಕುರಿತ ದಿನನಿತ್ಯದ ಮಾಧ್ಯಮಗೋಷ್ಠಿ ನೀಡುವ ವೇದಿಕೆಯಲ್ಲಿ ಕುಶ್ನರ್ ಅವರ ಉಪಸ್ಥಿತಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಟ್ರಂಪ್ ಅವರ ಉಪಾಧ್ಯಕ್ಷ ಮೈಕ್‌ಪೆನ್ಸ್‌ಗೆ ಸಹಾಯ ಮಾಡಲು ಅವರು ಅಲ್ಲಿದ್ದರು ಎಂದು ಖಚಿತಪಡಿಸಿದಾಗ ಕುಶ್ನರ್ ಆತ್ಮವಿಶ್ವಾಸದಿಂದ ಮಾತನಾಡಿದರು. ಆದರೂ ಕೆಲ ವಿಮರ್ಶಕರು ಇದನ್ನು ಸಾಮಾನ್ಯವಾಗಿ ಆತನ ಸೊಕ್ಕು ಎಂದೇ ಕರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕುಶ್ನರ್, ದೇಶದಾದ್ಯಂತ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭೀಕರ ಸವಾಲಿನೊಂದಿಗೆ ಸಮರ್ಥವಾಗಿ ಹೋರಾಡುವ ತಂಡವನ್ನು ಪುನರುಜ್ಜೀವನಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಟ್ರಂಪ್ ಅವರ ಸಲಹೆ ಮೇರೆಗೆ ಈ ವಿಚಾರವಾಗಿ ದೇಶದ ಉತ್ತಮ ಚಿಂತಕರ ಅಮೂಲ್ಯ ಸಲಹೆಗಳನ್ನು ಕುಶ್ನರ್ ಕೇಳಿದ್ದಾರೆ.