ETV Bharat / international

ಬೈಡನ್​ ಅಧ್ಯಕ್ಷ ಗದ್ದುಗೆ ಏರುವ ದಿನವೂ ಶ್ವೇತಭವನ ಬಿಡಲೊಪ್ಪದ ಡೊನಾಲ್ಡ್​ ಟ್ರಂಪ್! - ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸೋಲಿನ ಹತಾಶೆಯಲ್ಲಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷ ಬೈಡನ್​ ಅಧಿಕಾರ ವಹಿಸಿಕೊಳ್ಳುವ ದಿನವೂ ಕಾದು ನೋಡುವ ತಂತ್ರಗಾರಿಕೆ ರೂಪಿಸಿಕೊಂಡಿದ್ದಾರೆ. ಬೈಡನ್ ಅಧಿಕಾರ ವಹಿಸಿಕೊಳ್ಳುವ ದಿನದಂದು ಟ್ರಂಪ್ ಶ್ವೇತಭವನವನ್ನು ಬಿಟ್ಟು ಸರಿಯುವುದಿಲ್ಲ ಎಂದು ಅವರ ಆಪ್ತ ಸಲಹೆಗಾರರು ತಿಳಿಸಿದ್ದಾರೆ.

Trump tells advisers he may not leave WH on Biden Inauguration Day
ಡೊನಾಲ್ಡ್ ಟ್ರಂಪ್
author img

By

Published : Dec 17, 2020, 9:35 PM IST

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬಳಿಕವೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲಿನ ಹತಾಶೆಯಿಂದ ಇನ್ನೂ ಹೊರ ಬಂದಿಲ್ಲ. ಕಾರಣ, ಶ್ವೇತಭವನವನ್ನು ಬಿಟ್ಟು ಕೊಡಲು ಅವರು ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.

ಕೆಲವು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಟ್ರಂಪ್​, ನ್ಯಾಯಾಲಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯಗಳು, ಅವರ ಅರ್ಜಿಗಳನ್ನು ತಿರಸ್ಕೃತಗೊಳಿಸಿವೆ. ಈ ಕಾನೂನಾತ್ಮಕ ಹೋರಾಟದ ಬಳಿಕ ಅಮೆರಿಕದ ಚುನಾವನಣೆ ಆಯೋಗ ಅಮೆರಿಕದ ಅಧ್ಯಕ್ಷರಾಗುವಂತೆ ಜೋ ಬೈಡನ್​ಗೆ ಅನುಮತಿ ನೀಡಿದೆ. ಹಾಗಾಗಿ ಟ್ರಂಪ್ ಇದೀಗ ಶ್ವೇತ ಭವನ ಬಿಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.

ಜನವರಿ 20 ರಂದು ಜೋ ಬೈಡನ್​ ಅಧ್ಯಕ್ಷರಾಗಿ ಶ್ವೇತ ಭವನ ಪ್ರವೇಶ ಮಾಡಲಿದ್ದಾರೆ ಎಂದು ಅಲ್ಲಿನ ಅಧಿಕಾರಿ ವರ್ಗ ಖಚಿಪಡಿಸಿದೆ. ಆದರೆ, ನಿರ್ಗಮಿತ ಅಧ್ಯಕ್ಷ ಟ್ರಂಪ್ ಆ ದಿನ ಶ್ವೇತ ಭವನ ತೊರೆಯಲು ನಿರಾಕರಿಸಬಹುದು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇದನ್ನೂ ಓದಿ: 'ಗೆದ್ದಿದ್ದು ನಾನೇ'..ಬೈಡನ್ ಗೆಲುವು ಒಪ್ಪಲು ಮತ್ತೆ ಟ್ರಂಪ್ ನಕಾರ

ಟ್ರಂಪ್​ ಅವರು ಸೋಲಿನ ನಿರಾಕರಣೆಯಲ್ಲಿ ಮುಳಿಗಿದ್ದಾರೆ. ಅವರ ಆಪ್ತ ಸಲಹೆಗಾರರ ಪೈಕಿ ಕೆಲವರು ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೆ, ಇನ್ನೂ ಕೆಲವರು ಅವರ ಹೇಳಿಕೆಯನ್ನೇ ಅನುಸರಿಸುತ್ತಿದ್ದಾರೆ. ಹೀಗಾಗಿ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲಾಗುತ್ತಿಲ್ಲ. ಟ್ರಂಪ್​ ಆರೋಪ ತಂತ್ರದ ಮೊರೆ ಹೋಗುತ್ತಿದ್ದಾರೆ ಎಂದು ಅವರ ಸಲಹೆಗಾರರು ಹೇಳಿದ್ದನ್ನು ಪತ್ರಿಕೆ​ ಉಲ್ಲೇಖಿಸಿದೆ. ಆದರೆ, ಈ ಬಗ್ಗೆ ಶ್ವೇತ ಭವನವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಸೆನೆಟ್ ಮೆಜಾರಿಟಿ ಲೀಡರ್ ಮಿಚ್ ಮೆಕ್‌ಕಾನ್ನೆಲ್ ಅವರು ಬಿಡೆನ್‌ ಅವರನ್ನು "ಮೊದಲ ಬಾರಿಗೆ" ಚುನಾಯಿತ ಅಧ್ಯಕ್ಷರೆಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ಟ್ರಂಪ್​ಗೆ ಮತ್ತೊಂದು ಹಿನ್ನಡೆಯಾದಂತಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪಡೆದ 232 ಮತಗಳಿಗೆ ವಿರುದ್ಧವಾಗಿ ಬೈಡನ್​ 306 ಎಲೆಕ್ಟ್ರೋಲ್​ ಮತಗಳನ್ನು ಪಡೆದಿದ್ದಾರೆ. ಯುಎಸ್ ಕಾಂಗ್ರೆಸ್ ಜನವರಿ 6 ರಂದು ಫಲಿತಾಂಶಗಳನ್ನು ಪ್ರಮಾಣೀಕರಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.