ETV Bharat / international

ಕೊರೊನಾ ಪರೀಕ್ಷೆಗೆ ಒಳಗಾದ ಡೊನಾಲ್ಡ್​ ಟ್ರಂಪ್ ​ - ಕೊರೊನಾ ವೈರಸ್​ ಅಪ್​ಡೇಟ್​

ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾ ಕೂಡ ಕೊರೊನಾ ನಿಯಂತ್ರಣಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಅನುಸರಿಸುತ್ತಿದ್ದು, ಸ್ವತಃ ಟ್ರಂಪ್​ ಕೂಡ ವೈರಸ್​ ಪರೀಕ್ಷೆಗೆ ಒಳಾಗಾಗುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ.

oronavirus test
ಡೊನಾಲ್ಡ್​ ಟ್ರಂಪ್​
author img

By

Published : Mar 15, 2020, 5:17 AM IST

ವಾಷಿಂಗ್ಟನ್‌: ಜಗತ್ತನ್ನೇ ಭೀತಿಗೊಳಪಡಿಸಿರುವ ಕೊರೊನಾಗೆ ಹೆದರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಕೊರೊನಾ ವೈರಸ್​ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾ ಕೂಡ ಕೊರೊನಾ ನಿಯಂತ್ರಣಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಅನುಸರಿಸುತ್ತಿದ್ದು, ಸ್ವತಃ ಟ್ರಂಪ್​ ಕೂಡ ವೈರಸ್​ ಪರೀಕ್ಷೆಗೆ ಒಳಾಗಾಗುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ.

ಡೊನಾಲ್ಡ್​ ಟ್ರಂಪ್​

ಅಲ್ಲದೆ ವೈಟ್​ಹೌಸ್​ಗೆ ತಮ್ಮನ್ನು ಹಾಗೂ ಉಪಾಧ್ಯಕ್ಷ ಮೈಕ್​ ಪೆನ್ಸ್​ರನ್ನು ಭೇಟಿಯಾಗಲು​ ಆಗಮಿಸುವವರೂ ಕಡಾ ಖಂಡಿತವಾಗಿ ಟೆಂಪರೇಚರ್​ ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಆಜ್ಞೆ ಹೊರಡಿಸಿದ್ದಾರೆ.

ವೈಟ್​ ವೈಸ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಕುರಿತು ಆತಂಕಕ್ಕೊಳಗಾದ ಅಮೆರಿಕನ್ನರಿಗೆ ದೈರ್ಯ ತುಂಬಿದ್ದು, ತಾವೂ ಕೂಡ ಪರೀಕ್ಷೆಗೆ ಒಳಗಾಗಿದ್ದು ಒಂದೆರಡು ದಿನದಲ್ಲಿ ಪರೀಕ್ಷೆಯ ವರದಿ ಬರಲಿದೆ. ಕೊರೊನಾ ವೈರಸ್​ಗೆ ಸಂಬಂಧಿಸಿದ ಯಾವುದಾದರೂ ಒಂದು ಲಕ್ಷಣ ಕಂಡು ಬಂದರು ಅವರನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಮಹಾಮಾರಿಯನ್ನು ಎದುರಿಸಲು ಫೆಡರಲ್​ ನಿಧಿಯಲ್ಲಿ 50 ಬಿಲಿಯನ್​ ಡಾಲರ್​(3.65 ಲಕ್ಷ ಕೋಟಿ)ಯನ್ನು ಮೀಸಲಿಡುವುದಾಗಿ ಟ್ರಂಪ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.