ವಾಷಿಂಗ್ಟನ್: ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ನಲ್ಲಿ ವಾಗ್ದಂಡನೆಗೆ ಒಳಗಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದೋಷಾರೋಪದ ಎರಡು ಆರ್ಟಿಕಲ್ಗಳನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ. ಈ ಮೂಲಕ ವಾಗ್ದಂಡನೆಗೆ ಗುರಿಯಾದ ಅಮೆರಿಕದ ಮೂರನೇ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.
ಟ್ರಂಪ್ ವಾಗ್ದಂಡನೆ ಸಂಬಂಧ ಯುಎಸ್ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ನಲ್ಲಿ 2 ಆರ್ಟಿಕಲ್ಗಳನ್ನು ಮತಕ್ಕೆ ಹಾಕಲಾಯ್ತು. ಇದರಲ್ಲಿ ಟ್ರಂಪ್ ವಾಗ್ದಂಡನೆ ಪರವಾಗಿ ಹೆಚ್ಚು ಮತಗಳು ಬಂದವು. ಇಲ್ಲಿನ ಪ್ರತಿಪಕ್ಷವಾದ ಡೆಮಾಕ್ರಟಿಕ್ ಪಕ್ಷದ 217 ಮತಗಳು ಹಾಗೂ ಒಂದು ಇತರ ಮತ ಸೇರಿ ಒಟ್ಟು 218 ಮತಗಳು ಟ್ರಂಪ್ ವಾಗ್ದಂಡನೆ ಪರವಾಗಿ ಬಂದಿವೆ. ಉಳಿದಂತೆ ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷದ 160 ಮತಗಳು ಟ್ರಂಪ್ ವಾಗ್ದಂಡನೆ ವಿರುದ್ಧವಾಗಿ ಬಂತು. ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಮೂವರು ಸದಸ್ಯರು ಟ್ರಂಪ್ ವಾಗ್ದಂಡನೆ ವಿರೋಧಿಸಿದ್ದು, ಒಟ್ಟು 163 ಮತಗಳು ಟ್ರಂಪ್ ವಾಗ್ದಂಡನೆ ವಿರೋದ್ಧವಾಗಿ ಬಂದಿವೆ. ಆದರೆ ವಾಗ್ದಂಡನೆ ಪರವಾಗಿ ಅಧಿಕ ಮತಗಳು ಬಂದ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ವಾಗ್ದಂಡನೆಗೆ ಗುರಿಯಾಗಿದ್ದಾರೆ.
-
Majority in House has voted for second impeachment charge against US President Donald Trump for obstruction of Congress. Voting is still underway: AP pic.twitter.com/vE9BRD8T9Q
— ANI (@ANI) December 19, 2019 " class="align-text-top noRightClick twitterSection" data="
">Majority in House has voted for second impeachment charge against US President Donald Trump for obstruction of Congress. Voting is still underway: AP pic.twitter.com/vE9BRD8T9Q
— ANI (@ANI) December 19, 2019Majority in House has voted for second impeachment charge against US President Donald Trump for obstruction of Congress. Voting is still underway: AP pic.twitter.com/vE9BRD8T9Q
— ANI (@ANI) December 19, 2019
ಇನ್ನೊಂದೆಡೆ, ಸೆನೆಟ್ನಲ್ಲಿ ತಾನು ಸುಲಭವಾಗಿ ಪಾರಾಗುತ್ತೇನೆ ಹಾಗೂ ಸೆನೆಟ್ನಲ್ಲಿ ತಮ್ಮ ವಾಗ್ದಂಡನೆಗೆ ವಿರೋಧ ವ್ಯಕ್ತವಾಗುತ್ತದೆ ಎಂದು ಟ್ರಂಪ್ ವಿಶ್ವಾಸದಲ್ಲಿದ್ದಾರೆ ಎಂಬ ಮಾಹಿತಿ ಶ್ವೇತಭವನದ ಮೂಲಗಳಿಂದ ಲಭಿಸಿದೆ. ಅಲ್ಲದೆ ಟ್ರಂಪ್ ಸಂಪೂರ್ಣವಾಗಿ ದೋಷಮುಕ್ತರಾಗುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.
ಟ್ರಂಪ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷ ಆರೋಪಿಸಿತ್ತು. ಕಳೆದ ಜುಲೈ 25 ರಂದು ಉಕ್ರೇನ್ ಆಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿಗೆ ಕರೆ ಮಾಡಿದ್ದ ಟ್ರಂಪ್, ಅಮೆರಿಕ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬಿಡೆನ್ ಮತ್ತು ಅವರ ಮಗ ಹಂಟರ್ ಬಿಡೆನ್, ಉಕ್ರೇನ್ನಲ್ಲಿ ಪಾಲುದಾರರಾಗಿರುವ ಉದ್ಯಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಡೆಮಾಕ್ರಟಿಕ್ ಪಕ್ಷ, ರಿಪಬ್ಲಿಕ್ ಪಕ್ಷದ ಟ್ರಂಪ್ ವಾಗ್ದಂಡನೆಗೆ ಒತ್ತಾಯಿಸಿತ್ತು.
-
White House: US President Donald Trump is confident the Senate will restore regular order, fairness, and due process, all of which were ignored in the House proceedings. He is prepared for the next steps and confident that he will be fully exonerated. pic.twitter.com/DMFI5bu6G2
— ANI (@ANI) December 19, 2019 " class="align-text-top noRightClick twitterSection" data="
">White House: US President Donald Trump is confident the Senate will restore regular order, fairness, and due process, all of which were ignored in the House proceedings. He is prepared for the next steps and confident that he will be fully exonerated. pic.twitter.com/DMFI5bu6G2
— ANI (@ANI) December 19, 2019White House: US President Donald Trump is confident the Senate will restore regular order, fairness, and due process, all of which were ignored in the House proceedings. He is prepared for the next steps and confident that he will be fully exonerated. pic.twitter.com/DMFI5bu6G2
— ANI (@ANI) December 19, 2019
ಈ ಮೂಲಕ ವಾಗ್ದಂಡನೆ ಎದುರಿಸಿದ ಅಮೆರಿಕದ 4ನೇ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾಗಿದ್ದರೆ. ಇದಕ್ಕೂ ಮೊದಲು ಆಂಡ್ರೂ ಜಾನ್ಸನ್, ರಿಚರ್ಡ್ ನಿಕ್ಸನ್ ಮತ್ತು ಬಿಲ್ ಕ್ಲಿಂಟನ್ ವಾಗ್ದಂಡನೆ ವಿಚಾರಣೆ ಎದುರಿಸಿದ್ದರು.
ಒಂದು ವೇಳೆ ಸೆನೆಟ್ನಲ್ಲಿ ವಾಗ್ದಂಡನೆ ಪರ ಹೆಚ್ಚಿನ ಮತಗಳು ಬಂದರೆ ಟ್ರಂಪ್ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಆದರೆ ಸೆನೆಟ್ನಲ್ಲಿ ಟ್ರಂಪ್ರ ರಿಪಬ್ಲಿಕನ್ ಪಕ್ಷದ ಸದಸ್ಯರೇ ಜಾಸ್ತಿ ಇರುವುದರಿಂದ ಟ್ರಂಪ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ.