ETV Bharat / international

ಸಿಹಿ ಸುದ್ದಿ : ಅಮೆರಿಕಾ ಪ್ರಜೆಗಳಿಗೆ ಕೋವಿಡ್​​-19 ಲಸಿಕೆ ಉಚಿತ!

ಅಮೆರಿಕದ ಪ್ರಜೆಗಳಿಗೆ ಉಚಿತವಾಗಿ ಕೋವಿಡ್​-19 ಲಸಿಕೆ ನೀಡಲು ಟ್ರಂಪ್​ ಸರ್ಕಾರವು ಯೋಜನೆ ಸಿದ್ಧಪಡಿಸಿದೆ. ಒಟ್ಟು 7 ಔಷಧ ತಯಾರಿಕಾ ಕಂಪನಿಗಳಿಗೆ ಸರ್ಕಾರ ಕೋವಿಡ್​-19 ಲಸಿಕೆಯ ಅಭಿವೃದ್ಧಿ ಮತ್ತು ಉತ್ಪಾದನೆಯ ಹೊಣೆ ನೀಡಿದೆ.

covid-19-vaccine
ಕೋವಿಡ್​-19 ಲಸಿಕೆ
author img

By

Published : Sep 17, 2020, 7:59 AM IST

ವಾಷಿಂಗ್ಟನ್​: ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಅಮೆರಿಕಾದಲ್ಲೂ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಆತಂಕದ ಪರಿಸ್ಥಿತಿಯ ನಡುವೆಯೇ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಮೆರಿಕನ್ನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೋವಿಡ್​-19 ಲಸಿಕೆಯನ್ನು ದೇಶದ ಪ್ರಜೆಗಳಿಗೆ ಉಚಿತವಾಗಿ ನೀಡುವುದಾಗಿ ಅಮೆರಿಕಾದ ಟ್ರಂಪ್​ ಸರ್ಕಾರ ಘೋಷಿಸಿದೆ.

ಮುಂದಿನ ಜನವರಿ ವೇಳೆಗೆ ಅಮೆರಿಕಾದ ಎಲ್ಲರಿಗೂ ಉಚಿತ ಲಸಿಕೆ ಸಿಗಲಿದೆ ಎಂದು ಅಮೆರಿಕಾ ಸರ್ಕಾರ ಹೇಳಿದೆ. ಕೊರೊನಾ ವೈರಸ್​ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಟ್ರಂಪ್​ ಸರ್ಕಾರದ ಲಸಿಕೆ ವಿತರಣೆ ಕಾರ್ಯಕ್ರಮದ ರೂಪುರೇಷೆಯನ್ನು ಅಮೆರಿಕಾದ ಆರೋಗ್ಯ ಮತ್ತು ರಕ್ಷಣಾ ಇಲಾಖೆ ಜಂಟಿಯಾಗಿ ಬಿಡುಗಡೆಗೊಳಿಸಿದವು.

ಪ್ರತಿ ಮನೆ ಮನೆಗೂ ಲಸಿಕೆಯನ್ನು ಸುರಕ್ಷಿತವಾಗಿ ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೋವಿಡ್​-19 ಲಸಿಕೆ ಪೂರೈಸುವ ಔಷಧ ಕಂಪನಿಗಳ ವೆಚ್ಚ ಭರಿಸುವುದಾಗಿ ಮತ್ತು ಲಸಿಕೆ ತೆಗೆದುಕೊಳ್ಳುವ ಜನರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಟ್ರಂಪ್​ ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ಆರಂಭಿಕ ಹಂತದಲ್ಲಿ ಲಸಿಕೆ ಪೂರೈಕೆ ಸೀಮಿತವಾಗಿರಲಿದೆ. ಆರೋಗ್ಯ ಕಾರ್ಯಕರ್ತರು, ತುರ್ತು ಸೇವೆಯಲ್ಲಿ ನಿರತರಾಗಿರುವ ನೌಕರರು ಹಾಗೂ ಬಡವರಿಗೆ ಟ್ರಂಪ್​ ಸರ್ಕಾರ ಮೊದಲ ಆದ್ಯತೆ ನೀಡಲು ನಿರ್ಧರಿಸಿದೆ.

ಒಟ್ಟು 7 ಔಷಧ ತಯಾರಿಕಾ ಕಂಪನಿಗಳಿಗೆ ಸರ್ಕಾರ ಕೋವಿಡ್​-19 ಲಸಿಕೆಯ ಅಭಿವೃದ್ಧಿ ಮತ್ತು ಉತ್ಪಾದನೆಯ ಹೊಣೆ ನೀಡಿದೆ. ಈಗಾಗಲೇ ಅಮೆರಿಕಾದಲ್ಲಿ ಮುಂಚೂಣಿಯಲ್ಲಿರುವ ಕೆಲವು ಕಂಪನಿಗಳು ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗದಲ್ಲಿ ನಿರತವಾಗಿವೆ. ಆದರೆ, ಅಮೆರಿಕಾ ಸರ್ಕಾರದ ಪ್ರಾಯೋಜಕತ್ವದ ಯಾವುದಾದರೂ ಲಸಿಕೆ ಯಶಸ್ವಿಯಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಮೆರಿಕಾದ ಜಾನ್​ ಹಾಪ್​ಕಿನ್ಸ್​ ವಿಶ್ವವಿದ್ಯಾಲಯದ ಪ್ರಕಾರ ಅಮೆರಿಕಾದಲ್ಲಿ ಕೊರೊನಾ ಪೀಡಿತರ ಸಂಖ್ಯೆ 66,16,458ಕ್ಕೆ ತಲುಪಿದೆ. ಇದುವರೆಗೆ 1,96,436 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.