ETV Bharat / international

ಅತಿ ಹೆಚ್ಚು ಕೋವಿಡ್-19 ಪ್ರಕರಣ ಹೊಂದಿರುವ 5 ದೇಶಗಳು.. ಅವುಗಳ ಸ್ಥಿತಿ ಹೀಗಿದೆ.. - ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ 5 ದೇಶಗಳು

ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು 140.4 ಮಿಲಿಯನ್ ಗಡಿ ದಾಟಿದ್ದು, 3 ಮಿಲಿಯನ್ ಸಾವುಗಳು ಸಂಭವಿಸಿವೆ. ಯುನೈಟೆಡ್ ಸ್ಟೇಟ್ಸ್, ಭಾರತ, ಬ್ರೆಜಿಲ್, ಫ್ರಾನ್ಸ್ ಹಾಗೂ ರಷ್ಯಾ ದೇಶಗಳು ಕೋವಿಡ್​ನಿಂದ ಅತಿ ಹೆಚ್ಚು ಪೀಡಿತ ರಾಷ್ಟ್ರಗಳಾಗಿವೆ..

COVID-19 cases
COVID-19 cases
author img

By

Published : Apr 21, 2021, 5:22 PM IST

ಹೈದರಾಬಾದ್ : ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು 140.4 ಮಿಲಿಯನ್ ಗಡಿ ದಾಟಿದೆ. ಸಾವುಗಳು 3 ಮಿಲಿಯನ್‌ಗಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಭಾರತವು ಬ್ರೆಜಿಲ್, ಫ್ರಾನ್ಸ್, ರಷ್ಯಾ, ಇಟಲಿ ಮತ್ತು ಯುಕೆಗಳನ್ನು ಮೀರಿಸಿ, ಕೋವಿಡ್ ಪೀಡಿತ ಎರಡನೇ ದೇಶವಾಗಿದೆ. ಭಾರತದಲ್ಲಿ ಒಟ್ಟು ಕೋವಿಡ್-19 ಪ್ರಕರಣ 15.6 ಮಿಲಿಯನ್ ತಲುಪಿವೆ. ಇಂದು ದೇಶದಲ್ಲಿ 2,95,041 ಹೊಸ ಕೋವಿಡ್-19 ಪ್ರಕರಣ ವರದಿಯಾಗಿವೆ.

ಇದು ಒಂದು ದಿನದಲ್ಲಿ ಪತ್ತೆಯಾದ ಈವರೆಗಿನ ಅತಿ ಹೆಚ್ಚು ಪ್ರಕರಣಗಳಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದೆ. 21,57,538 ಸಕ್ರಿಯ ಪ್ರಕರಣಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ 5 ಹೆಚ್ಚು ಪೀಡಿತ ರಾಷ್ಟ್ರಗಳ ಪಟ್ಟಿ ಇಲ್ಲಿದೆ.

ಯುನೈಟೆಡ್ ಸ್ಟೇಟ್ಸ್ (ಯುಎಸ್):

  • 31.7 ಮಿಲಿಯನ್ ಕೊರೊನಾ ವೈರಸ್ ಪ್ರಕರಣಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಅಗ್ರಸ್ಥಾನದಲ್ಲಿದೆ.
  • ಯುನೈಟೆಡ್ ಸ್ಟೇಟ್ಸ್​ನಲ್ಲಿ ಭಾನುವಾರ 31,793,035 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
  • ಯುನೈಟೆಡ್ ಸ್ಟೇಟ್ಸ್​ನಲ್ಲಿ ಕೊರೊನಾದಿಂದಾಗಿ ಕನಿಷ್ಠ 568,470 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತ :

  • ಕೋವಿಡ್-19ನಿಂದ ಭಾರತ ಈಗ ಎರಡನೇ ಅತಿ ಹೆಚ್ಚು ಪೀಡಿತ ದೇಶವಾಗಿದೆ.
  • ಕಳೆದ 24 ಗಂಟೆಗಳಲ್ಲಿ 2,95,041 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಪ್ರಕರಣ ಸಂಖ್ಯೆ 15.6 ಮಿಲಿಯನ್ ದಾಟಿವೆ ಎಂದು ಭಾರತೀಯ ಆರೋಗ್ಯ ಸಚಿವಾಲಯ ತಿಳಿಸಿದೆ.
  • ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಂಜಾಬ್, ಮತ್ತು ಛತ್ತೀಸ್​ಗಢ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿವೆ.

ಬ್ರೆಜಿಲ್ :

  • 14 ದಶಲಕ್ಷಕ್ಕೂ ಹೆಚ್ಚು ಪ್ರಕರಣ ಹೊಂದಿರುವ ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ.
  • ಹೆಚ್ಚು ಹಾನಿಗೊಳಗಾದ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್‌ನಲ್ಲಿ 14 ದಶಲಕ್ಷಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
  • ಬ್ರೆಜಿಲ್​ನಲ್ಲಿ ಈವರೆಗೆ ಒಟ್ಟು 14,043,076 ಪ್ರಕರಣ ಮತ್ತು 378,003 ಸಾವು ವರದಿಯಾಗಿವೆ.

ಫ್ರಾನ್ಸ್ :

  • ಫ್ರಾನ್ಸ್‌ನಲ್ಲಿ ಸುಮಾರು 5.3 ಮಿಲಿಯನ್ ಕೊರೊನಾ ವೈರಸ್ ಪ್ರಕರಣಗಳಿವೆ.
  • ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ಫ್ರಾನ್ಸ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಬುಧವಾರ 5.4 ಮಿಲಿಯನ್ ದಾಟಿವೆ.
  • ಸಾವಿನ ಸಂಖ್ಯೆ 101,713ಕ್ಕೆ ಏರಿದೆ.

ರಷ್ಯಾ :

  • 4.6 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ರಷ್ಯಾ ಐದನೇ ಸ್ಥಾನದಲ್ಲಿದೆ.
  • ರಷ್ಯಾ ಈವರೆಗೆ 4,665,553ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕುಗಳನ್ನು ವರದಿ ಮಾಡಿದೆ.
  • 104,545 ಸಾವುಗಳು ಸಂಭವಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.