ETV Bharat / international

ನಾಸಾ ಅಭಿವೃದ್ದಿಪಡಿಸಿದ ವೆಂಟಿಲೇಟರ್​ ತಯಾರಿಸಲು ಭಾರತದ ಮೂರು ಕಂಪನಿಗಳು ಆಯ್ಕೆ.. - ವೆಂಟಿಲೇಟರ್​ ತಯಾರಿಸಲು ಭಾರತ ಮೂರು ಕಂಪನಿಗಳು ಆಯ್ಕೆ

ಅತ್ಯಂತ ತೀವ್ರವಾದ ಕೋವಿಡ್​-19 ರೋಗಲಕ್ಷಣ ಹೊಂದಿರುವವರಿಗೆ ಸರಳವಾಗಿ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ವೆಂಟಿಲೇಟರ್​ಗಳಿಗಿಂತ ಇದು ಸಹಕಾರಿಯಾಗಲಿದೆ.

Three Indian manufacturers to commercialize NASA developed ventilator
ನಾಸಾ ಅಭಿವೃದ್ದಿಪಡಿಸಿದ ವೆಂಟಿಲೇಟರ್​ ತಯಾರಿಸಲು ಭಾರತ ಮೂರು ಕಂಪನಿಗಳು ಆಯ್ಕೆ
author img

By

Published : Jun 3, 2020, 5:55 PM IST

ವಾಷಿಂಗ್ಟನ್ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಹೊಸ ವೆಂಟಿಲೇಟರ್ ತಯಾರಿಸಲು ಮೂರು ಭಾರತೀಯ ಕಂಪನಿಗಳನ್ನು ಆಯ್ಕೆ ಮಾಡಿದೆ.

ವಿಶ್ವದ 18 ಕಂಪನಿಗಳನ್ನು ಜೆಪಿಎಲ್​ ಆಯ್ಕೆ ಮಾಡಿದ್ದು, ಈ ಪೈಕಿ ಭಾರತೀಯ ಕಂಪನಿಗಳಾದ ಆಲ್ಫಾ ಡಿಸೈನ್ ಟೆಕ್ನಾಲಜೀಸ್, ಭಾರತ್ ಫೋರ್ಜ್ ಮತ್ತು ಮೇಧಾ ಸರ್ವೋ ಡ್ರೈವ್​ ಸ್ಥಾನ ಪಡೆದುಕೊಂಡಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಬ್ಯೂರೋ, ಕೋವಿಡ್​-19 ರೋಗಿಗಳ ಚಿಕಿತ್ಸೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವೆಂಟಿಲೇಟರ್ ತಯಾರಿಸಲು 3 ಭಾರತೀಯ ಕಂಪನಿಗಳು ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು. ಇದು ಕೋವಿಡ್-19​ ವಿರುದ್ಧ ಹೋರಾಟದಲ್ಲಿ ಭಾರತ ಮತ್ತು ಯುಎಸ್​ನ ಸಹಭಾಗಿತ್ವವನ್ನು ತೋರಿಸುತ್ತದೆ ಎಂದು ಬರೆದುಕೊಂಡಿದೆ.

  • Congrats to the 3 Indian companies @NASA selected to make a ventilator specifically designed to treat COVID19 patients. Only 21 licenses were granted worldwide -- a testament to the grantees & the importance of the US-India partnership to combat COVID19. https://t.co/EXnGMKGWFL https://t.co/cw1Ys8T5h2

    — State_SCA (@State_SCA) June 2, 2020 " class="align-text-top noRightClick twitterSection" data=" ">

ವಿಟಲ್ (ವೆಂಟಿಲೇಟರ್ ಇಂಟರ್​ವೆನ್ಶನ್​ ಟೆಕ್ನಾಲಜಿ ಅಕ್ಸೆಸಿಬಲ್ ಲೋಕಲಿ) ಎಂಬ ಶೀರ್ಷಿಕೆ ವಿನೂತನ ವೆಂಟಿಲೇಟರ್‌ನ ಜೆಪಿಎಲ್​ ಅಭಿವೃದ್ಧಿಪಡಿಸಿದೆ, ಇದು ಯುಎಸ್​ ಆಹಾರ ಮತ್ತು ಡ್ರಗ್​ ಇಲಾಖೆಯಿಂದ ತುರ್ತು ಬಳಕೆಯ ಅನುಮತಿ ಪಡೆದಿದೆ. ಅತ್ಯಂತ ತೀವ್ರವಾದ ಕೋವಿಡ್​-19 ರೋಗಲಕ್ಷಣ ಹೊಂದಿರುವವರಿಗೆ ಸರಳವಾಗಿ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ವೆಂಟಿಲೇಟರ್​ಗಳಿಗಿಂತ ಇದು ಸಹಕಾರಿಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.