ETV Bharat / international

ಚೀನಾ ಕಮ್ಯುನಿಸ್ಟ್ ಪಕ್ಷ ಬೌದ್ಧಿಕ ಆಸ್ತಿಗಳನ್ನು ಕಳವು ಮಾಡಿದೆ; ಮೈಕ್ ಪೊಂಪಿಯೋ - ಚೀನಾ ವಿರುದ್ಧ ಹರಿಹಾಯ್ದ ಪೊಂಪಿಯೋ

ಮೊದಲ ಹಂತದ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಚೀನಿಯರು ತಮ್ಮ ಬದ್ದತೆಯನ್ನು ತೋರ್ಪಡಿಸುತ್ತಾರೆ ಎಂಬ ಭರವಸೆಯಿದೆ. ಅವರು ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಕಾದು ನೋಡುತ್ತೇವೆ ಎಂದು ಪೊಂಪಿಯೋ ತಿಳಿಸಿದ್ದಾರೆ.

Pompeo
ಮೈಕ್ ಪೊಂಪಿಯೋ
author img

By

Published : Jul 30, 2020, 5:09 PM IST

ವಾಷಿಂಗ್ಟನ್ : ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಬೆದರಿಕೆ ಇರುವುದು ನಿಜ ಅಮೆರಿಕನ್ನರ ಸ್ವಾತಂತ್ರ್ಯ ರಕ್ಷಿಸುವ ಮತ್ತು ಭದ್ರಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಉತ್ತಮ ಸಂಬಂಧ ಮರುಸ್ಥಾಪಿಸಲು ಬೇಕಾದ ಕ್ರಮಗಳನ್ನು ಟ್ರಂಪ್​ ಆಡಳಿತ ತೆಗೆದುಕೊಳ್ಳುತ್ತಿದೆ ಎಂದು ಯುಎಸ್​ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಹೇಳಿದ್ದಾರೆ.

ಮೊದಲ ಹಂತದ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಚೀನಿಯರು ತಮ್ಮ ಬದ್ಧತೆಯನ್ನು ತೋರ್ಪಡಿಸುತ್ತಾರೆ ಎಂಬ ಭರವಸೆಯಿದೆ. ಅವರು ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಕಾದು ನೋಡುತ್ತೇವೆ ಎಂದು ಪೊಂಪಿಯೋ ತಿಳಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ, 2015 ರ ಕ್ಯಾಂಪೇನ್​ನಲ್ಲಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್,​ ಚೀನಿ ಕಮ್ಯುನಿಸ್ಟ್​ ಪಕ್ಷದಿಂದ ಬೆದರಿಕೆಯಿದೆ ಎಂದು ಹೇಳಿರುವುದು ನಿಜ. ಅಮೆರಿಕನ್ನರ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಭದ್ರಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಉತ್ತಮ ಸಂಬಂಧ ಮರುಸ್ಥಾಪಿಸಲು ಬೇಕಾದ ಕ್ರಮಗಳನ್ನು ಟ್ರಂಪ್​ ಆಡಳಿತವು ತೆಗೆದುಕೊಳ್ಳುತ್ತಿದೆ ಎಂದು ಮೈಕೆಲ್ ನೋವೆಲ್ಸ್​​ ಅವರ ದಿ ಬೆನ್ ಶಪಿರೊ ಶೋ ಸಂದರ್ಶನದಲ್ಲಿ ಪೊಂಪಿಯೋ ಹೇಳಿದ್ದಾರೆ.

ನೀವು ಕೇವಲ ವ್ಯಾಪಾರ ಆಡಳಿತ ಸಮಸ್ಯೆಗಳನ್ನು ಮಾತ್ರ ನೋಡಿದ್ದೀರಿ. ಚೀನಾದ ಕಮ್ಯುನಿಸ್ಟ್​ ಪಕ್ಷವು ನಮ್ಮ ಬೌದ್ಧಿಕ ಆಸ್ತಿಯನ್ನು ಕದ್ದಿದೆ. ನಂತರ ಮತ್ತೆ ಅದನ್ನು ನಮಗೆ ಮರು ಮಾರಾಟ ಮಾಡಿದೆ. ರಾಜ್ಯ ಪ್ರಾಯೋಜಿತ ಉದ್ಯಮಗಳಿಗೆ ಅದನ್ನು ಮಾರಾಟ ಮಾಡಿದೆ. ಚೀನಾ ನಮ್ಮ ಮೇಲೆ ಸೈಬರ್​ ದಾಳಿ ನಡೆಸಿದೆ. ಇತರ ಯಾವುದೇ ದೇಶಗಳು ಮಾಡದಷ್ಟು ಕಳ್ಳತನ ಮಾಡಿದೆ. ಇದನ್ನು ಟ್ರಂಪ್​ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪೊಂಪಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.