ETV Bharat / international

ಫ್ಲಾಯ್ಡ್ ಹತ್ಯೆಗೆ ಖಂಡನೆ: ಶ್ವೇತಭವನದ ಬಳಿ ಸಾವಿರಾರು ಜನರಿಂದ ಶಾಂತಿಯುತ ಪ್ರತಿಭಟನೆ - ಜಾರ್ಜ್ ಫ್ಲಾಯ್ಡ್ ಸಾವು

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಅಮೆರಿಕದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

protest
ಪ್ರತಿಭಟನೆ
author img

By

Published : Jun 7, 2020, 9:20 AM IST

ವಾಷಿಂಗ್ಟನ್: ಕಪ್ಪು ವರ್ಣೀಯರ ಮೇಲೆ ಅಮೆರಿಕದ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಸಾವಿರಾರು ಮಂದಿ ಪ್ರತಿಭಟನಾಕಾರರು ವಾಷಿಂಗ್ಟನ್‌ನ ಶ್ವೇತಭವನದ ಬಳಿಯ ಬೀದಿಗಳಲ್ಲಿ ಶಾಂತಿಯುತವಾಗಿ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಅವರ ತವರೂರು ಉತ್ತರ ಕೆರೊಲಿನಾದಲ್ಲಿ ಶೋಕಾಚರಣೆ ನಡೆಯಿತು. ಅಲ್ಲಿನ ಚರ್ಚ್‌ನಲ್ಲಿ ಗೌರವ ಸಲ್ಲಿಸಲು ನೂರಾರು ಶೋಕತಪ್ತರು ಸಾಲುಗಟ್ಟಿ ನಿಂತಿದ್ದರು. ಇದೇ ಸಂದರ್ಭ ಆಕ್ರೋಶಿತರಿಂದ ಪ್ರತಿಭಟನೆ ಕೂಡಾ ನಡೆಯಿತು.

ಯೋಜಿತ ಮೆರವಣಿಗೆ ಅಲ್ಲಿ ನಡೆದಿದ್ದರಿಂದ ಮಿಲಿಟರಿ ವಾಹನಗಳು ಮತ್ತು ಅಧಿಕಾರಿಗಳು ಮುಂಚಿತವಾಗಿಯೇ ವಾಷಿಂಗ್ಟನ್‌ನ ಹೆಚ್ಚಿನ ಭಾಗದಲ್ಲಿ ವಾಹನ ಹಾಗು ಜನರ ಸಂಚಾರ ನಿರ್ಬಂಧಿಸಿದ್ದರು.

ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಅಮೆರಿಕದ ಪ್ರಮುಖ ನಗರಗಳಲ್ಲಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.