ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನಿಗೆ ಕೊರೊನಾ ದೃಢಪಟ್ಟಿದೆ ಎಂದು ಶ್ವೇತಭವನ ವಕ್ತಾರ ತಿಳಿಸಿದ್ದಾರೆ. ಹಿರಿಯ ಪುತ್ರನಿಗೆ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಇದಲ್ಲದೇ ಟ್ರಂಪ್ ಪತ್ನಿ ಮತ್ತು ಅವರ ಮಗ ಬ್ಯಾರೆನ್ ಸಹ ಕೊರೊನಾದಿಂದ ಇತ್ತೀಚಿಗಷ್ಟೇ ಗುಣಮುಖರಾಗಿದ್ದರು. ಇದೀಗ ಹಿರಿಯ ಪುತ್ರನಿಗೂ ಕೊರೊನಾ ದೃಢವಾಗಿದೆ.