ವಾಷಿಂಗ್ಟನ್: ಕೋವಿಡ್ ಮತ್ತು ವ್ಯಾಕ್ಸಿನೇಷನ್ ಬಗ್ಗೆ ಸೋಷಿಯಲ್ ಮೀಡಿಯಾ ಜನರಿಗೆ ತಪ್ಪು ಮಾಹಿತಿ ನೀಡಿ, ಜನರನ್ನು ಕೊಲ್ಲುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಫೇಸ್ಬುಕ್ ತನ್ನ ಕಾರ್ಯದ ಜತೆಗೆ ಸಾಮಾಜಿಕ ಕಳಕಳಿಯತ್ತ ಗಮನಹರಿಸಬೇಕಿದೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ಕೋವಿಡ್ ಕಣ್ಣಿಗೆ ಕಾಣದ ವೈರಸ್ ಆಗಿದೆ. ಆದರೆ, ಸಾಮಾಜಿಕ ಮಾಧ್ಯಮವು ತಪ್ಪು ಮಾಹಿತಿ ವ್ಯಾಪಕವಾಗಿ ಹರಡಿ ಜನರನ್ನು ಕೊಲ್ಲುತ್ತಿದೆ ಎಂದು ಬೈಡನ್ ಆರೋಪಿಸಿದ್ದಾರೆ. ಅಮೆರಿಕದ ಅರೋಗ್ಯಾಧಿಕಾರಿಗಳ ಪ್ರಕಾರ, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರ ಜತೆಗೆ ಸಾವು-ನೋವುಗಳು ಹೆಚ್ಚಾಗಿವೆ ಎಂದು ಜಾಲತಾಣದಲ್ಲಿ ಹರಡಿರುವ ಸುದ್ದಿಯಿಂದಾಗಿ ಜನರು ಭೀತಿಗೊಳಗಾಗಿದ್ದಾರೆ. ಲಸಿಕೆ ವಿರೋಧಿಗಳು ಹರಡುವ ಸುಳ್ಳು ಸುದ್ದಿಯಿಂದ ಅನೇಕ ಜನರು ವ್ಯಾಕ್ಸಿನೇಷನ್ನನ್ನು ಕೂಡ ತಿರಸ್ಕರಿಸುತ್ತಿದ್ದಾರೆ. ಇದು ಬೈಡನ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರಿಪಬ್ಲಿಕನ್ನರ ಕುತಂತ್ರ ಎಂದು ಡೆಮಾಕ್ರಟಿಕ್ ಸದಸ್ಯರು ದೂರಿದ್ದಾರೆ.
ಫೇಸ್ಬುಕ್ ಹಾಗೂ ಇತರ ಯಾವುದೇ ವಿರೋಧಿಗಳು ಏನೇ ರಣತಂತ್ರ ರೂಪಿಸಿದ್ರೂ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಗುಡುಗಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಲಸಿಕೆ ಬಗ್ಗೆ ಶೇಕಡಾ 65 ರಷ್ಟು ತಪ್ಪು ಮಾಹಿತಿ ರವಾನಿಸುವ 12 ಜನರಿದ್ದಾರೆ. ಇವರೆಲ್ಲರೂ ಫೇಸ್ಬುಕ್ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಸಾಕಿ ಹೇಳಿದ್ದಾರೆ.
ಎರಡು ಬಿಲಿಯನ್ಗೂ ಹೆಚ್ಚು ಜನರ ಸಾಮಾಜಿಕ ಮಾಧ್ಯಮಗಳಲ್ಲಿ ಲಸಿಕೆ ವಿರೋಧಿ ಮಾಹಿತಿಯನ್ನು ನೋಡುತ್ತಾರೆ. ಇತರೆ ಮಾಧ್ಯಮಗಳಿಗೆ ಹೋಲಿಸಿದ್ರೆ ಫೇಸ್ಬುಕ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಅಂದಾಜು 3.3 ಮಿಲಿಯನ್ ಜನರು ಲಸಿಕೆ ಎಲ್ಲಿ ನೀಡುತ್ತಾರೆ ಅನ್ನೋದನ್ನು ಪತ್ತೆ ಹಚ್ಚಲು ಫೇಸ್ಬುಕ್ ಸಹಾಯ ಮಾಡಿದೆ ಎಂದಿದ್ದಾರೆ.
ಇದನ್ನೂ ಓದಿ:ದ.ಆಫ್ರಿಕಾದಲ್ಲಿ ನಿಲ್ಲದ ಹಿಂಸಾಚಾರ: ಕುಟುಂಬ, ವ್ಯವಹಾರ ರಕ್ಷಣೆಗೆ ಅನಿವಾಸಿ ಭಾರತೀಯರ ಪರದಾಟ
ಈ ಹಿಂದೆ ಫೇಸ್ಬುಕ್ ಕೋವಿಡ್ ಲಸಿಕೆ ವಿರುದ್ಧ ತಪ್ಪು ಮಾಹಿತಿ ರವಾನಿಸುವ ಆಕ್ರಮಣಕಾರಿ ಅಂಶಗಳನ್ನು ತೆಗೆದು ಹಾಕಲಾಗುತ್ತದೆ. ಜತೆಗೆ, ಪೋಸ್ಟ್ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿತ್ತು. ಈವರೆಗೆ ಸುಳ್ಳು ಮಾಹಿತಿ ಹರಡುವ 18 ದಶಲಕ್ಷಕ್ಕೂ ಹೆಚ್ಚಿನ ವಿಡಿಯೋಗಳನ್ನು ತೆಗೆದುಹಾಕಿದೆ.