ETV Bharat / international

ಸಿಂಗಲ್ ಇಂಜಿನ್ ವಿಮಾನ ಪತನ: ಮಿನ್ನೇಸೋಟದಲ್ಲಿ ಹಲವರು ಸಾವು

ಸಿಂಗಲ್ ಇಂಜಿನ್ ವಿಮಾನ ಪತನವಾಗಿ ಹಲವರು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Single-engine plane crashes into house in Minnesota, several people dead
ಸಿಂಗಲ್ ಇಂಜಿನ್ ವಿಮಾನ ಪತನ: ಮಿನ್ನೇಸೋಟದಲ್ಲಿ ಹಲವರ ಸಾವು
author img

By

Published : Aug 8, 2021, 11:02 AM IST

ಮಿನ್ನೇಸೋಟ(ಅಮೆರಿಕ) : ಮೂನೆ ಎಂ 20 (Mooney M20) ಸಿಂಗಲ್ ಇಂಜಿನ್ ವಿಮಾನವು ಮಿನ್ನೇಸೋಟ ರಾಜ್ಯದ ವಿಕ್ಟೋರಿಯಾ ನಗರದಲ್ಲಿ ಜನರು ಇಲ್ಲದ ಮನೆಗೆ ಅಪ್ಪಳಿಸಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಬಿಎಸ್ ಮಿನ್ನೇಸೋಟ ಬ್ರಾಡ್‌ಕಾಸ್ಟರ್ ಪ್ರಕಾರ, ಈ ಘಟನೆ ಶನಿವಾರ ಸುಮಾರು ರಾತ್ರಿ 10:40ಕ್ಕೆ ನಡೆದಿದ್ದು, ಅಪಘಾತಕ್ಕೀಡಾದ ವಿಮಾನ ಅಲೆಕ್ಸಾಂಡ್ರಿಯಾ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಈಡನ್ ಪ್ರೈರಿಯಲ್ಲಿರುವ ಫ್ಲೈಯಿಂಗ್ ಕ್ಲೌಡ್ ಏರ್​ಪೋರ್ಟ್​ಗೆ ಹೊರಟಿತ್ತು ಎನ್ನಲಾಗ್ತಿದೆ.

ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ನಿಖರವಾಗಿ ತಿಳಿದಿಲ್ಲ. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ಘಟನೆಯ ಕುರಿತು ತನಿಖೆ ಆರಂಭಿಸಿವೆ.

ಇದನ್ನೂ ಓದಿ: 'ಬೆಳ್ಳಿ ಹುಡುಗಿ' ಬರ್ತ್​ಡೇ.. ಮೀರಾಬಾಯಿ ಚಾನುಗೆ ಹುಟ್ಟುಹಬ್ಬದ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.