ETV Bharat / international

ಹ್ಯಾರಿಸ್ ಮತ ಚಲಾವಣೆ: ಅಮೆರಿಕ ಸೆನೆಟ್​ನಲ್ಲಿ​​ ಬಜೆಟ್​ ಮಸೂದೆ ಅಂಗೀಕಾರ! - Biden coronavirus relief plan

ಅಮೆರಿಕದಲ್ಲಿ ಬಜೆಟ್​ ಮಸೂದೆ ಅಂಗೀಕಾರಗೊಂಡಿದ್ದು, ಅಲ್ಲಿನ ಸೆನೆಟರ್​ಗಳು ಮಸೂದೆ ಪರವಾಗಿ ಮತ ಚಲಾಯಿಸಿದ್ದಾರೆ.

Kamala Harris
Kamala Harris
author img

By

Published : Feb 5, 2021, 9:07 PM IST

ವಾಷಿಂಗ್ಟನ್​: ರಿಪಬ್ಲಿಕ್​ನ ಪಕ್ಷದ ಬೆಂಬಲವಿಲ್ಲದೇ ಕೊರೊನಾ ವೈರಸ್​ ಪರಿಹಾರ ಯೋಜನೆ ತ್ವರಿತಗತಿಯಲ್ಲಿ ಸಾಗಿಸುವ ಪ್ರಮುಖ ಬಜೆಟ್​ ನಿರ್ಣಯ ಯುಎಸ್ ಸೆನೆಟ್​ನಲ್ಲಿ ಅನುಮೋದನೆಗೊಂಡಿದೆ. ಅಧ್ಯಕ್ಷ ಜೋ ಬೈಡನ್​ ಅವರ 91.9 ಟ್ರಿಲಿಯನ್​ ಬಜೆಟ್​ಗಿಂದು ಅಂಕಿತ ಸಿಕ್ಕಿದೆ.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ಟೈ ಬ್ರೇಕಿಂಗ್ ಮತ ಚಲಾವಣೆ ಮಾಡುವ ಮೂಲಕ ಇದಕ್ಕೆ ಅನುಮೋದನೆ ಸಿಕ್ಕಿದೆ. ಅಲ್ಲಿನ ಸೆನೆಟರ್​ಗಳು ಈ ಮಸೂದೆ ಪರ ಮತ ಚಲಾಯಿಸಿದ್ದಾರೆ. ಮಸೂದೆ ನಿರ್ಣಯ ದೇಶದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿ ನಾವು ಇಡುತ್ತಿರುವ ದೊಡ್ಡ ಹೆಜ್ಜೆಯಾಗಿದೆ ಎಂದು ಸೆನೆಟ್​ ಲೀಡರ್​ ಚಕ್​ ಶುಮರ್​ ಡಿ ತಿಳಿಸಿದ್ದಾರೆ.

ಓದಿ: ಉಗ್ರರು- ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ; 26 ಸಾವು

ಕೊರೊನಾ ನಂತರ ಅಭಿವೃದ್ಧಿ ಹಾದಿಯಲ್ಲಿ ಸಾಗಬೇಕಾಗಿದ್ದು, ನಿರುದ್ಯೋಗ ಹೊಡೆದೋಡಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೊಸ ಸರ್ಕಾರ ಪ್ರತಿಜ್ಞೆ ಮಾಡಿದೆ. ಇನ್ನು ಪ್ಯಾಕೇಜ್​ ಬಗ್ಗೆ ಚರ್ಚಿಸಲು ಅಧ್ಯಕ್ಷ ಬೈಡನ್​ ತಮ್ಮ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದು, ಶ್ವೇತಭವನದಲ್ಲಿ ಹೌಸ್​ ಕಮಿಟಿ ಅಧ್ಯಕ್ಷರೊಂದಿಗೂ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.

ಬಜೆಟ್​ನಲ್ಲಿ ಕೆಲವೊಂದು ತಿದ್ದುಪಡಿ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಕೋವಿಡ್​ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿದು ಬಂದಿದೆ. ಇದೇ ವೇಳೆ ಕನಿಷ್ಠ ವೇತನ ಹೆಚ್ಚಳ ವಿಚಾರ ಕೂಡ ಒಳಗೊಂಡಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.