ನ್ಯಾಶ್‌ವಿಲ್ಲೆ(ಯುಎಸ್): ಟೆನ್ನೆಸ್ಸೀದಾದ್ಯಂತ ಭಾರಿ ಮಳೆಯು ಪ್ರವಾಹ ಪರಿಸ್ಥಿತಿಯನ್ನುಂಟು ಮಾಡಿದೆ. ಪ್ರವಾಹದಲ್ಲಿ ಸಿಲುಕಿದ್ದ ಅನೇಕರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ 4 ಜನರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯಾಶ್‌ವಿಲ್ಲೆಯಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆಯು ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂದು ಘೋಷಿಸಿತ್ತು. "ಹಲವಾರು ರಸ್ತೆಗಳು, ಅಂತಾರಾಜ್ಯ ರಸ್ತೆಗಳು ಮತ್ತು ಮನೆಗಳು ನೀರಿನಿಂದ ಆವೃತಿಯಾಗಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜನರಿಗೆ ದಯವಿಟ್ಟು ಮನೆಯಲ್ಲಿಯೇ ಇರಿ ಎಲ್ಲಿಯೂ ಪ್ರಯಾಣಿಸಬೇಡಿ ಎಂದು ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಮೋದಿ ಭೇಟಿ ಹಿನ್ನೆಲೆ ಬಾಂಗ್ಲಾದಲ್ಲಿ ಹಿಂಸಾಚಾರ : ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಹೆಫಜತ್ ಉಗ್ರರು
ಮನೆಗಳಲ್ಲಿ ಸಿಲುಕಿದ್ದ ಸುಮಾರು 130 ಮಂದಿಯನ್ನು ನ್ಯಾಶ್‌ವಿಲ್ಲೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಮೂಕ ಪ್ರಾಣಿಗಳನ್ನು ನ್ಯಾಶ್‌ವಿಲ್ಲೆ ಬೋರ್ಡಿಂಗ್ ಮೋರಿ ಕ್ಯಾಂಪ್ ಬೋ ವಾವ್‌ನಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ವಿಲಿಯಮ್ಸನ್ ಕೌಂಟಿಯ ದಕ್ಷಿಣಕ್ಕೆ, 34ಕ್ಕೂ ಹೆಚ್ಚು ಸ್ವಿಫ್ಟ್ ವಾಟರ್ ಪಾರುಗಾಣಿಕಾಗಳನ್ನು ನಡೆಸಲಾಗಿದೆ ಎಂದು ಕೌಂಟಿ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ನಿರ್ದೇಶಕ ಟಾಡ್ ಹಾರ್ಟನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.