ETV Bharat / international

ಮಾನಸಿಕ ಆರೋಗ್ಯದ ಹೋರಾಟವು 'ಕೇಳಿಸಿಕೊಳ್ಳುವ ಮೌಲ್ಯ’ ಕಲಿಸಿದೆ : ಪ್ರಿನ್ಸ್ ಹ್ಯಾರಿ - ದಿ ಮಿ ಯು ಕಾಂಟ್​ ಸೀ

ಹ್ಯಾರಿ 12ನೇ ವಯಸ್ಸಿನಲ್ಲಿದ್ದಾಗ ತಾಯಿ ರಾಜಕುಮಾರಿ ಡಯಾನಾ ಕಾರು ಅಪಘಾತದಲ್ಲಿ ಮೃತಪಡುತ್ತಾರೆ. ಆಗ ಅವರಿಗೆ ಗಾಬರಿಯಾಗಿ ಆಘಾತಕ್ಕೊಳಗಾಗದರು. ಆ ವೇಳೆ ಅವರು ಆಘಾತದಿಂದ ಹೊರಬರಲು ಅನುಸರಿಸಿದ ಮಾರ್ಗದ ಬಗ್ಗೆ ಇದರಲ್ಲಿ ತಿಳಿಸಿದ್ದಾರೆ..

ಪ್ರಿನ್ಸ್ ಹ್ಯಾರಿ
ಪ್ರಿನ್ಸ್ ಹ್ಯಾರಿ
author img

By

Published : May 28, 2021, 7:45 PM IST

ವಾಷಿಂಗ್ಟನ್ (ಅಮೆರಿಕ) : ಪ್ರಿನ್ಸ್​ ಹ್ಯಾರಿ ತಮ್ಮ ವೈಯಕ್ತಿಕ ಜೀವನದ ಹೋರಾಟಗಳಿಂದ ಕಲಿತ ಪಾಠವನ್ನು ಜನರ ಮುಂದಿಡಲು ಟಿವಿ ಕಾರ್ಯಕ್ರಮವೊಂದನ್ನು ಮಾಡಿದ್ದಾರೆ. ‘ದಿ ಮಿಯು ಕಾಂಟ್ ಸೀ’ ಎಪಿಸೋಡ್​ನಲ್ಲಿ ತಮ್ಮ ಜೀವನದ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಗುರುವಾರ ರಾತ್ರಿ ಆಪಲ್​ ಟಿವಿ ಪ್ಲಸ್​​ನಲ್ಲಿ ಪ್ರಸಾರವಾದ ಡಾಕ್ಯುಸರೀಸ್​​ ದಿ ಮಿ ಯು ಕಾಂಟ್​ ಸೀಯಲ್ಲಿ ತಮ್ಮ ಪ್ರೀತಿ ಪಾತ್ರರು ಹೇಗೆ ಕಷ್ಟ ಪಡುತ್ತಿರುತ್ತಾರೆ. ಆಗುವ ಅವಮಾನಗಳ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತದೆ.

ಅನೇಕ ಜನರು ಮಾತನಾಡಲು, ಕೇಳಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಪ್ರತಿಯೊಂದು ಕಷ್ಟಕ್ಕೂ ಪರಿಹಾರ ಇರುತ್ತೆ ಎಂದು ಅವರಿಗೆ ಮನವರಿಕೆಯಾಗಿರುವುದಿಲ್ಲ, ಮತ್ತೊಬ್ಬರು ಮಾತನಾಡುವಾಗ ದಯವಿಟ್ಟು ಕೇಳಿಸಿಕೊಳ್ಳಿ, ಇದರಿಂದ ಅವರ ಮನಸ್ಸು ಹಗುರವಾಗುವುದು ಎಂದು ಹ್ಯಾರಿ ಅಭಿಪ್ರಾಯಪಟ್ಟಿದ್ದಾರೆ.

ಹ್ಯಾರಿ 12ನೇ ವಯಸ್ಸಿನಲ್ಲಿದ್ದಾಗ ತಾಯಿ ರಾಜಕುಮಾರಿ ಡಯಾನಾ ಕಾರು ಅಪಘಾತದಲ್ಲಿ ಮೃತಪಡುತ್ತಾರೆ. ಆಗ ಅವರಿಗೆ ಗಾಬರಿಯಾಗಿ ಆಘಾತಕ್ಕೊಳಗಾಗದರು. ಆ ವೇಳೆ ಅವರು ಆಘಾತದಿಂದ ಹೊರಬರಲು ಅನುಸರಿಸಿದ ಮಾರ್ಗದ ಬಗ್ಗೆ ಇದರಲ್ಲಿ ತಿಳಿಸಿದ್ದಾರೆ.

'ದಿ ಮಿ ಯು ಕಾಂಟ್ ಸೀ' ಎನ್ನುವುದು ಓಪ್ರಾ ಮತ್ತು ಹ್ಯಾರಿ ರಚಿಸಿದ ಡಾಕ್ಯುಸರೀಸ್ ಆಗಿದೆ, ಇದು ವಿಶ್ವದಾದ್ಯಂತದ ಜನರ ಕಥೆಗಳೊಂದಿಗೆ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕಗಳನ್ನು ಪರಿಶೋಧಿಸುತ್ತದೆ.

ಅಕಾಡೆಮಿ ಪ್ರಶಸ್ತಿ, ನಾಲ್ಕು ಬಾರಿ ಬಾಫ್ಟಾ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಆಸಿಫ್ ಕಪಾಡಿಯಾ ಅವರ ನೇತೃತ್ವದಲ್ಲಿ, ಈ ಸರಣಿಯನ್ನು ಎಮ್ಮಿ ಪ್ರಶಸ್ತಿ ಮತ್ತು ಸ್ಪಿರಿಟ್ ಪ್ರಶಸ್ತಿ ನಾಮಿನಿ ಡಾನ್ ಪೋರ್ಟರ್ ನಿರ್ಮಿಸಿದ್ದಾರೆ. ಸರಣಿಯ ಎಲ್ಲಾ ಕಂತುಗಳು ಆಪಲ್ ಪ್ಲಸ್ ಟಿವಿಯಲ್ಲಿ ಸ್ಟ್ರೀಮ್‌ನಲ್ಲಿ ವೀಕ್ಷಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.