ETV Bharat / international

ಕೊರೊನಾ ಮೂಲದ ತನಿಖೆ ಚುರುಕುಗೊಳಿಸಿ: ಯುಎಸ್ ಗುಪ್ತಚರ ಸಂಸ್ಥೆಗೆ ಬೈಡನ್​ ಆದೇಶ - Wuhan Institute of Virology

ಕೊರೊನಾ ವೈರಸ್​​ ಮೂಲದ ಬಗ್ಗೆ ನಿರ್ದಿಷ್ಟ ತೀರ್ಮಾನಕ್ಕೆ ಬರುವಂತಹ ಮಾಹಿತಿಯನ್ನು ಸಂಗ್ರಹಿಸಿ, 90 ದಿನಗಳಲ್ಲಿ ವರದಿ ನೀಡುವಂತೆ ಅಮೆರಿಕ ಗುಪ್ತಚರ ಸಂಸ್ಥೆಗೆ ಅಧ್ಯಕ್ಷ ಜೋ ಬೈಡನ್​ ಸೂಚಿಸಿದ್ದಾರೆ.

President Biden asks US intelligence to redouble efforts to trace origin of COVID-19
ಅಮೆರಿಕ ಅಧ್ಯಕ್ಷ ಜೋ ಬೈಡನ್
author img

By

Published : May 27, 2021, 8:34 AM IST

ವಾಷಿಂಗ್ಟನ್​: ಕೋವಿಡ್​-19 ಮೂಲದ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನಗಳನ್ನು ದ್ವಿಗುಣಗೊಳಿಸುವಂತೆ ಅಮೆರಿಕ ಗುಪ್ತಚರ ಸಂಸ್ಥೆಗೆ ಅಧ್ಯಕ್ಷ ಜೋ ಬೈಡನ್​ ಆದೇಶ ನೀಡಿದ್ದಾರೆ.

"ಕೊರೊನಾ ಸಾಂಕ್ರಾಮಿಕದ ಮೂಲದ ಬಗ್ಗೆ ನಾವು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರುವಂತಹ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ನಿಮ್ಮ ಪ್ರಯತ್ನಗಳನ್ನ ದ್ವಿಗುಣಗೊಳಿಸಿ. 90 ದಿನಗಳಲ್ಲಿ ಈ ಸಂಬಂಧ ನನಗೆ ವರದಿ ನೀಡಿ" ಎಂದು ಬೈಡನ್​ ಗುಪ್ತಚರ ಸಂಸ್ಥೆಗೆ ಸೂಚಿಸಿದ್ದಾರೆ.

ಅಲ್ಲದೇ ಈ ಪ್ರಯತ್ನದಲ್ಲಿ ರಾಷ್ಟ್ರೀಯ ಪ್ರಯೋಗಾಲಯಗಳು ಹಾಗೂ ಸರ್ಕಾರದ ಇತರ ಏಜೆನ್ಸಿಗಳು ಸಹ ತಮ್ಮ ಕಾರ್ಯವನ್ನು ಚುರುಕುಗೊಳಿಸಬೇಕು. ತನ್ನ ಕಾರ್ಯ ವೈಖರಿಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಯುಎಸ್​ ಕಾಂಗ್ರೆಸ್​ (ಸಂಸತ್ತು)ಗೆ ತಿಳಿಸುತ್ತಿರಬೇಕೆಂದು ಬೈಡನ್​ ಹೇಳಿದ್ದಾರೆ.

ವೈರಸ್ ಬಗ್ಗೆ ತಿಳಿದುಕೊಳ್ಳಲು ಚೀನಾಗೆ ಪ್ರವೇಶ ಪಡೆದ ಬಳಿಕವೇ ನಾವು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಬಹುದು ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ನಾನು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ)ಕ್ಕೆ ಕರೆ ಮಾಡಿ ತಿಳಿಸಿದ್ದೆ. ಆರಂಭಿಕ ತಿಂಗಳುಗಳಲ್ಲಿ ನಮ್ಮ ತನಿಖಾಧಿಕಾರಿಗಳನ್ನೇ ಕೋವಿಡ್​ ಮೂಲದ ದೇಶಕ್ಕೆ (ಚೀನಾ) ಕಳುಹಿಸಲು ವಿಫಲವಾದರೆ ಈ ಬಗೆಗಿನ ಯಾವುದೇ ತನಿಖೆಗೆ ಕೂಡ ಅಡ್ಡಿಯಾಗುತ್ತದೆ ಎಂದು ಬೈಡನ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವುಹಾನ್​​ನ ಮೊದಲ ಕೊರೊನಾ​ ಸೋಂಕಿತ ದಾಖಲಾಗಿದ್ದ ಆಸ್ಪತ್ರೆಗೆ ಡಬ್ಲ್ಯುಹೆಚ್‌ಒ ತಂಡ ಭೇಟಿ

2019ರ ಡಿಸೆಂಬರ್​ನಲ್ಲಿ ಮೊದಲ ಕೋವಿಡ್​ ಪ್ರಕರಣ ಚೀನಾದ ವುಹಾನ್​ನಲ್ಲಿ ವರದಿಯಾಗಿತ್ತು. ಉದ್ದೇಶಪೂರ್ವಕವಾಗಿ ಸೋಂಕು ಪಸರಿಸಲು ಚೀನಾ ತನ್ನ ವುಹಾನ್​​ನ ಪ್ರಯೋಗಾಲಯದಲ್ಲೇ ವೈರಸ್​ ಸೃಷ್ಟಿಸಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಆರೋಪಿಸಿತ್ತು. ಬಳಿಕ ವೈರಸ್​ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ತಜ್ಞರು ವುಹಾನ್​ ಸೇರಿದಂತೆ ಚೀನಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಚೀನಾ ಅಧ್ಯಯನ ತಂಡದೊಂದಿಗೆ ಸೇರಿ ತನಿಖೆ ನಡೆಸಿತ್ತು. ತನಿಖೆ ಬಳಿಕ ಡಬ್ಲ್ಯುಹೆಚ್‌ಒ, ಇದರ ಹಿಂದೆ ಚೀನಾ ಕೈವಾಡವಿಲ್ಲವೆಂದು ತಿಳಿಸಿತ್ತು.

ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್​ನ ಹೇಳಿಕೆಯನ್ನು ಪ್ರತಿಪಾದಿಸಿದ ಚೀನಾ ವಿದೇಶಾಂಗ ಸಚಿವಾಲಯವು, 2019ರ ಡಿಸೆಂಬರ್ 30ರ ಮೊದಲು ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೊರೊನಾ ವೈರಸ್​ ಪತ್ತೆಯಾಗಿಲ್ಲ. ಇಲ್ಲಿಯವರೆಗೂ ಈ ಸಂಸ್ಥೆಯ ಯಾವುದೇ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: WHO-ಚೀನಿ ತಜ್ಞರ ಕೊರೊನಾ ವೈರಸ್​ ಮೂಲ ಪತ್ತೆ ವರದಿ ಬಹಿರಂಗ: ಚೀನಾ-ಅಮೆರಿಕ ವಾಕ್ಸಮರ ಶುರು

ಆದರೆ ಚೀನಾದ ಅಧಿಕಾರಿಗಳು ಡಬ್ಲ್ಯುಹೆಚ್‌ಒಗೆ ವರದಿ ಮಾಡುವ ಮೊದಲೇ 2019ರಲ್ಲಿ ಚೀನಾದ ವೈರಾಲಜಿ ಪ್ರಯೋಗಾಲಯದ ಸಂಶೋಧಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಯುಎಸ್ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಈ ಆರೋಪಗಳನ್ನು ತಳ್ಳಿಹಾಕಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಯುಎಸ್ ಪಿತೂರಿ ಸಿದ್ಧಾಂತಗಳನ್ನು ಮತ್ತು ಲ್ಯಾಬ್​​ ಸೋರಿಕೆಯಂತಹ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.