ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್. ಪೊಂಪಿಯೊ ಅಕ್ಟೋಬರ್ 25ರಿಂದ 30ರವರೆಗೆ ದೆಹಲಿ, ಕೊಲಂಬೊ, ಮಲಯ್ ಮತ್ತು ಜಕಾರ್ತಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ದೃಢಪಡಿಸಿದೆ.
ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ಅಕ್ಟೋಬರ್ 27ರಂದು ದೆಹಲಿಗೆ ಆಗಮಿಸಲಿದ್ದು, ಅಂದು ಭಾರತೀಯ ನಿಯೋಗದೊಂದಿಗೆ ಅಮೆರಿಕ-ಇಂಡಿಯಾ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಉಭಯ ರಾಷ್ಟ್ರಗಳ ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜನಯ ಸಹಕಾರ ವಿಸ್ತರಣೆ ಹಾಗೂ ಇಂಡೋ-ಪೆಸಿಫಿಕ್ ಮತ್ತು ವಿಶ್ವವನ್ನು ಮುನ್ನಡೆಸಲು ಮೂರನೇ ಯುಎಸ್-ಇಂಡಿಯಾ 2+2 ಸಚಿವರ ಮಟ್ಟದ ಸಂಭಾಷಣೆ ನಡೆಯಲಿದೆ ಎಂದು ಯುಎಸ್ ವಿದೇಶಾಂಗ ವಕ್ತಾರ ಮೋರ್ಗನ್ ಒರ್ಟಾಗಸ್ ಹೇಳಿದ್ದಾರೆ.
ಶ್ರೀಲಂಕಾ ಜತೆಗಿನ ಪಾಲುದಾರಿಕೆಯ ಅಮೆರಿಕದ ಬದ್ಧತೆ ತಿಳಿಸಲು ಮತ್ತು ಮುಕ್ತ ಇಂಡೋ-ಪೆಸಿಫಿಕ್ ವಾತಾವರಣದಂಹ ಸಾಮಾನ್ಯ ಗುರಿಗಳನ್ನು ಇರಿಸಿಕೊಂಡು ಪೊಂಪಿಯೊ ಕೊಲಂಬೊಗೆ ಪ್ರಯಾಣಿಸಲಿದ್ದಾರೆ ಎಂದರು.
ನಮ್ಮ ನಿಕಟ ದ್ವಿಪಕ್ಷೀಯ ಸಂಬಂಧ ದೃಢೀಕರಿಸಲು ಮತ್ತು ಪ್ರಾದೇಶಿಕ ಸಾಗರೋತ್ತರ ಸುರಕ್ಷತೆಯಿಂದ ಹಿಡಿದು ಭಯೋತ್ಪಾದನೆ ವಿರುದ್ಧದ ಹೋರಾಟದವರೆಗಿನ ನಮ್ಮ ಒಪ್ಪಂದಗಳನ್ನು ಮುನ್ನಡೆಸಲು ಕಾರ್ಯದರ್ಶಿ ಪೊಂಪಿಯೊ ಮಲಯ್ಗೆ ತೆರಳಲಿದ್ದಾರೆ ಎಂದು ಹೇಳಿದರು.