ವಾರ್ಸಾ/ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ 14 ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ತಡರಾತ್ರಿ ಉಕ್ರೇನ್‌ಗೆ ಸಹಾಯ ಮಾಡಲು ಪೋಲ್ಯಾಂಡ್ ಅಮೆರಿಕಕ್ಕೆ ಹೊಸ ಪ್ರಸ್ತಾಪ ಮುಂದಿಟ್ಟಿದೆ. ಯುಎಸ್ ಏರ್ಬೇಸ್ ಮೂಲಕ ಉಕ್ರೇನ್‌ಗೆ MiG-29 ಫೈಟರ್ ಜೆಟ್‌ಗಳನ್ನು ಕಳುಹಿಸಲು ಪೋಲ್ಯಾಂಡ್ ಪ್ರಸ್ತಾಪಿಸಿದೆ. ಆದ್ರೆ ಪೋಲಿಷ್ ಸರ್ಕಾರದ ಪ್ರಸ್ತಾಪವನ್ನು ಯುನೈಟೆಡ್ ಸ್ಟೇಟ್ಸ್ ಮಂಗಳವಾರ ತಿರಸ್ಕರಿಸಿದೆ.
ಜರ್ಮನಿಯ ರಾಮ್‌ಸ್ಟೈನ್‌ನಲ್ಲಿರುವ ಅಮೆರಿಕ ನೆಲೆಗೆ ಸೋವಿಯತ್ ಯುಗದ ವಿಮಾನಗಳನ್ನು ತಲುಪಿಸುವ ಪ್ರಸ್ತಾಪವನ್ನು ವಾರ್ಸಾ ಹೇಳಿದೆ. ಈ ಮೂಲಕ ಆ ಜೆಟ್‌ಗಳನ್ನು ನಂತರ ಉಕ್ರೇನ್‌ಗೆ ನಿಯೋಜಿಸಬಹುದು, ಆದರೆ, ಪೋಲಿಷ್ ವಾಯುಪಡೆಯು F-16 ಯುದ್ಧ ವಿಮಾನಗಳನ್ನು ಬದಲಿಯಾಗಿ ಸ್ವೀಕರಿಸುತ್ತದೆ ಎಂದು ಹೇಳಿತು.
ಓದಿ: ಸುಮಿಯಲ್ಲಿ ಸಿಲುಕಿದ 694 ಭಾರತೀಯರ ಸುರಕ್ಷಿತ ಸ್ಥಳಾಂತರ: ಕೇಂದ್ರ ಸರ್ಕಾರ
ಈ ಪ್ರಸ್ತಾಪದ ಬಗ್ಗೆ ಉಲ್ಲೇಖಿಸಿದ ಪೆಂಟಗನ್ ವಕ್ತಾರ ಜಾನ್ ಕಿರ್ಬಿ, ನಾವು ಈಗ ಪೋಲಿಷ್ ಸರ್ಕಾರದ ಸಂಪರ್ಕದಲ್ಲಿದ್ದೇವೆ. ನಾವು ಪೋಲೆಂಡ್ ಮತ್ತು ನಮ್ಮ ಇತರ NATO ಮಿತ್ರರಾಷ್ಟ್ರಗಳೊಂದಿಗೆ ಈ ಸಮಸ್ಯೆ ಬಗ್ಗೆ ಚರ್ಚಿಸಲಿದ್ದೇವೆ. ಆದರೆ ಪೋಲ್ಯಾಂಡ್ನ ಪ್ರಸ್ತಾಪವು ಸಮರ್ಥನೀಯವಾಗಿದೆ ಎಂದು ನಾವು ನಂಬುವುದಿಲ್ಲ ಅಂತಾ ಕಿರ್ಬಿ ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಷ್ಯಾ ಆಕ್ರಮಣದ ಹಿನ್ನೆಲೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮಿಲಿಟರಿ ಜೆಟ್‌ಗಳನ್ನು ಪೂರೈಸಲು ಉಕ್ರೇನ್ ಕರೆಗಳನ್ನು ಹೆಚ್ಚಿಸಿದೆ. ಆದರೆ ಕೀವ್ಗೆ ಯುದ್ಧ ವಿಮಾನಗಳನ್ನು ಒದಗಿಸುವುದು ಗಂಭೀರ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಓದಿ: ಈ ಒಂಟಿ ಸಾಧಕಿಗೆ ಕೃಷಿಯೇ ಸಂಗಾತಿ: ಮಣ್ಣಿನ ಕಾಯಕದಲ್ಲಿ ಶಿವಮೊಗ್ಗದ ಶಿವಮ್ಮ
ವಾಸ್ತವವಾಗಿ ಪೋಲ್ಯಾಂಡ್ನ ಪ್ರಸ್ತಾಪವು ಈ ಸಮಸ್ಯೆಯ ಕೆಲವು ಸಂಕೀರ್ಣತೆಗಳನ್ನು ಪ್ರತಿಬಿಂಬಿಸುತ್ತದೆ. ಈ ವಿಷಯದ ಬಗ್ಗೆ ನಾವು ಪೋಲೆಂಡ್ ಮತ್ತು ನಮ್ಮ ಇತರ NATO ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚನೆಯನ್ನು ಮುಂದುವರಿಸುತ್ತೇವೆ. ನಾವು ರಷ್ಯಾಕ್ಕೆ ಕಠಿಣ ಸವಾಲು ನೀಡುತ್ತೇವೆ. ಆದರೆ ಪೋಲ್ಯಾಂಡ್ನ ಈ ಪ್ರಸ್ತಾಪವನ್ನು ನಾವು ಸಮರ್ಥಿಸುವುದಿಲ್ಲ ಎಂದು ಅವರು ಹೇಳಿದರು.
ಉಕ್ರೇನ್‌ನ ವಾಯುಪಡೆ ಮತ್ತು ನೌಕಾಪಡೆ ಹಳೆಯ ಸೋವಿಯತ್-ಯುಗದ MiG-29 ಮತ್ತು ಸುಖೋಯ್-27 ಜೆಟ್‌ಗಳನ್ನು ಮತ್ತು ಭಾರವಾದ ಸುಖೋಯ್-25 ಜೆಟ್‌ಗಳನ್ನು ಒಳಗೊಂಡಿದೆ. ಇವು ಉಕ್ರೇನಿಯನ್ ಪೈಲಟ್‌ಗಳು ಹೆಚ್ಚುವರಿ ತರಬೇತಿಯಿಲ್ಲದೇ ತಕ್ಷಣವೇ ಹಾರಬಲ್ಲ ಏಕೈಕ ವಿಮಾನಗಳಾಗಿವೆ. ಈ ಹಿನ್ನೆಲೆಯಲ್ಲಿ ಪೋಲ್ಯಾಂಡ್ ಅಮೆರಿಕಕ್ಕೆ ಮಿಗ್-29 ಫೈಟರ್ ಜೆಟ್ಗಳನ್ನ ಹಸ್ತಾಂತರಿಸಿ ಆ ಮೂಲಕ ನ್ಯಾಟೋ ಪಡೆಗಳಿಗೆ ನೀಡಿ ಉಕ್ರೇನ್‌ಗೆ ಸಹಾಯ ಮಾಡುವಂತೆ ಕೋರಿದೆ.
ಯುಎಸ್ ಸ್ಟೇಟ್ ಸೆಕ್ರೆಟರಿ ಆಫ್ ಸ್ಟೇಟ್ ಆಂಟೋನಿ ಬ್ಲಿಂಕೆನ್ ಭಾನುವಾರ ಮಾಲ್ಡೊವಾಗೆ ಭೇಟಿ ನೀಡಿದ ಸಂದರ್ಭದಲ್ಲಿ, ಉಕ್ರೇನ್‌ಗೆ ಮಿಗ್ -29 ಗಳನ್ನು ಒದಗಿಸುವ ಪ್ರಸ್ತಾಪವನ್ನು ಪೋಲ್ಯಾಂಡ್ ಮಾಡಿತ್ತು.
ಈ ಹಿಂದೆ ಪೋಲಾಂಡ್ ಮಿಗ್-29 ಜೆಟ್‌ಗಳ ಸ್ಟಾಕ್ ಅನ್ನು ಅಮೆರಿಕಕ್ಕೆ ಉಚಿತವಾಗಿ ಹಸ್ತಾಂತರಿಸಲಿದೆ ಎಂಬ ಸುದ್ದಿ ಇತ್ತು. ಇದರ ನಂತರ ವಿಮಾನಗಳನ್ನು ಉಕ್ರೇನ್‌ಗೆ ಕಳುಹಿಸುವ ನಿರೀಕ್ಷೆಯಿದೆ. ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ನಿರಂತರವಾಗಿ ನ್ಯಾಟೋವನ್ನು ಟೀಕಿಸುತ್ತಿರುವ ಈ ಸಮಯದಲ್ಲಿ ಪೋಲ್ಯಾಂಡ್ ಈ ನಿರ್ಧಾರಕ್ಕೆ ಬಂದಿದೆ. ಉಕ್ರೇನ್‌ನಲ್ಲಿ ನ್ಯಾಟೋದ 'ನೋ ಫ್ಲೈ ಝೋನ್' ಅನ್ನು ರಚಿಸದಿರುವ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಜೆಟ್ ಅನ್ನು ಹಸ್ತಾಂತರಿಸುವ ನಿರ್ಧಾರದೊಂದಿಗೆ, ಪೋಲಿಷ್ ಸರ್ಕಾರವು ತನ್ನ ನಿರ್ಧಾರದ ಉದಾಹರಣೆಯನ್ನು ಉಲ್ಲೇಖಿಸಿ ಉಕ್ರೇನ್‌ಗೆ ಸಹಾಯ ಮಾಡಲು ಮುಂದೆ ಬರಲು ಇತರ NATO ದೇಶಗಳನ್ನು ಕೇಳಿದೆ.