ವಾಷಿಂಗ್ಟನ್: ಜೋ ಬೈಡನ್ ಎದುರು ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿರುವ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನಕ್ಕೆ ವಾಪಸ್ ತೆರಳುವಾಗ ಬೈಡನ್ ಬೆಂಬಲಿಗರಿಂದ ಮುಜುಗರ ಅನುಭವಿಸಿದ್ದಾರೆ.
ಟ್ರಂಪ್ ತೆರಳುವ ಮಾರ್ಗದಲ್ಲಿ ಬೈಡನ್ ಬೆಂಬಲಿಗರು, ಲೂಸರ್.. ಲೂಸರ್.. ಲೂಸರ್ ಎಂದು ಕೂಗಿ ಅಮೆರಿಕ ಅಧ್ಯಕ್ಷರಿಗೆ ಇರಿಸುಮುರಿಸು ಉಂಟು ಮಾಡಿದರು. ಜೊತೆಗೆ ಬೈಡನ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಶ್ವೇತ ಭವನದ ಮುಂದೆ ಬೈಡನ್ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಹಾಗೆಯೇ ಇಲ್ಲಿ ಟ್ರಂಪ್ ಬೆಂಬಲಿಗರು ಕೂಡ ಆಗಮಿಸಿ, ವಿ ಲವ್ ಟ್ರಂಪ್ ಎಂದು ಘೋಷಣೆ ಕೂಗಿದರು. ಜೊತೆಗೆ ಟ್ರಂಪ್ ಭಾವುಟ ಹಾರಿಸಿ ಬೆಂಬಲ ಸೂಚಿಸಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮರು ಆಯ್ಕೆ ಬಯಸಿದ್ದ ಟ್ರಂಪ್ಗೆ ಹಿನ್ನಡೆ ಆಗಿದೆ.