ETV Bharat / international

'ಅಫ್ಘಾನಿಸ್ತಾನದ ವಿಚಾರದಲ್ಲಿ ಬೈಡನ್​ ನಿರ್ಧಾರ ತಾರ್ಕಿಕವಾದದ್ದು' - ಪಾಕಿಸ್ತಾನದ ರಾಯಭಾರಿ ಹೇಳಿಕೆ - ಯುಸ್ ಅಧ್ಯಕ್ಷ ಜೋ ಬೈಡನ್​

ಅಫ್ಘಾನಿಸ್ತಾನದಲ್ಲಿನ ಸಂಘರ್ಷಕ್ಕೆ ಎಂದಿಗೂ ಸೇನೆಯೇ ಪರಿಹಾರವಲ್ಲ. ಸೈನ್ಯವನ್ನು ಹಿಂತೆಗೆದುಕೊಳ್ಳುವ ಯುಸ್ ಅಧ್ಯಕ್ಷ ಜೋ ಬೈಡನ್​ ಅವರ ನಿರ್ಧಾರ ತಾರ್ಕಿಕವಾದದ್ದು ಎಂದು ಪಾಕಿಸ್ತಾನದ ರಾಯಭಾರಿ ಮುನೀರ್​ ಅಕ್ರಮ್​ ಹೇಳಿದ್ದಾರೆ.

Pakistan envoy says Biden decision was 'logical'
ಮುನೀರ್​ ಅಕ್ರಮ್
author img

By

Published : Aug 17, 2021, 5:27 PM IST

ನ್ಯೂಯಾರ್ಕ್​: ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಯುಸ್ ಅಧ್ಯಕ್ಷ ಜೋ ಬೈಡನ್​ ಅವರ ನಿರ್ಧಾರ ತಾರ್ಕಿಕವಾದದ್ದು ಎಂದು ​ಅಮೆರಿಕದ ಪಾಕಿಸ್ತಾನಿ ರಾಯಭಾರಿ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದಾರೆ.

ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನದ ರಾಯಭಾರಿ ಮುನೀರ್​ ಅಕ್ರಮ್​, ಅಫ್ಘಾನಿಸ್ತಾನದ ದೀರ್ಘಾವಧಿಯ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಅಫ್ಘಾನಿಸ್ತಾನದಲ್ಲಿನ ಸಂಘರ್ಷಕ್ಕೆ ಎಂದಿಗೂ ಸೇನೆಯೇ ಪರಿಹಾರವಲ್ಲ ಎಂಬ ಪಾಕಿಸ್ತಾನದ ನಿಲುವು ಈಗ ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ

ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾಗ ಬಹುಶಃ ಮಾತುಕತೆಯ ಮೂಲಕ ಸಂಘರ್ಷವನ್ನು ಕೊನೆಗೊಳಿಸಬಹುದಾಗಿತ್ತು. ಸೇನೆಯನ್ನು ಹಿಂಪಡೆಯುವ ಹಿಂದಿನ ಅಮೆರಿಕ ಆಡಳಿತದ ನಿರ್ಧಾರವನ್ನು ಬೈಡನ್​ ಕೂಡ ಒಪ್ಪಿಕೊಂಡಿದ್ದು, ಈ ಸಂಘರ್ಷಕ್ಕೆ ತಾರ್ಕಿಕ ತೀರ್ಮಾನವಾಗಿದೆ ಎಂದು ಅಕ್ರಮ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.