ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಸಭೆಯಲ್ಲಿ ಕಾಶ್ಮೀರದ ವಿಚಾರವನ್ನ ಪ್ರಸ್ತಾಪಿಸಿದ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ.
ಭದ್ರತಾ ಮಂಡಳಿ (ಯುಎನ್ಎಸ್ಸಿ) ಸಭೆಯಲ್ಲಿ ಅನೌಪಚಾರಿಕ - ಮುಚ್ಚಿದ ಬಾಗಿಲ ಸಮಾಲೋಚನೆ ವೇಳೆ ಪಾಕಿಸ್ತಾನ ಕಾಶ್ಮೀರ ವಿಚಾರವನ್ನ ಪ್ರಸ್ತಾಪಿಸಿದೆ. ಆದರೆ, ಇತರ ರಾಷ್ಟ್ರಗಳು ಈ ಬಗ್ಗೆ ಗಮನ ನೀಡದೆ. ಇದು ಪಾಕಿಸ್ತಾನ ಮತ್ತು ಭಾರತಕ್ಕೆ ಸಂಬಂಧಿಸಿದ ವಿಚಾರ ಎಂದು ಮಧ್ಯಪ್ರವೇಶಿಸಲು ನಿರಾಕರಿಸಿವೆ.
ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಇತರ ದೇಶಗಳ ಬೆಂಬಲ ಪಡೆಯಲು ಉದ್ದೇಶಿಸಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಇತರ ವಿಷಯಗಳ ಚರ್ಚೆ ವೇಳೆ ಚೀನಾ ಕೂಡ ಕಾಶ್ಮೀರದ ವಿಚಾರ ವಿಚಾರ ಪ್ರಸ್ತಾಪಿಸಿದಾಗ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ಕಾಶ್ಮೀರ ವಿಚಾರದಲ್ಲಿ ಭಾರತವನ್ನ ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ ಪಾಕ್ ಮತ್ತು ಚೀನಾಕ್ಕೆ ಹಿನ್ನಡೆಯಾಗಿದೆ.
ಪಾಕಿಸ್ತಾನದ ಪ್ರತಿನಿಧಿಗಳು ಪದೇ ಪದೇ ಮಾಡಿದ ಯಾವುದೇ ಆಧಾರರಹಿತ ಆರೋಪಗಳು ವಿಶ್ವಾಸಾರ್ಹವೆಂದು ಕಂಡುಬಂದಿಲ್ಲ ಎಂದು ನಮಗೆ ಸಂತೋಷವಾಗಿದೆ ಅಂತ ಭಾರತದ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.