ETV Bharat / international

ಟ್ರಂಪ್​ ಮಧ್ಯ ಪ್ರಾಚ್ಯ ಯೋಜನೆ ತಿರಸ್ಕರಿಸಿದ ಒಐಸಿ - ಮಧ್ಯಪ್ರಾಚ್ಯ ಶಾಂತಿ ಯೋಜನೆ

ಮೂರು ವರ್ಷಗಳ ಅವಧಿಯಲ್ಲಿ ತಯಾರಾದ ಮಧ್ಯಪ್ರಾಚ್ಯ ಯೋಜನೆಯು ಜೆರುಸಲೆಂ ಅನ್ನು ಇಸ್ರೇಲ್‌ನ ಅವಿಭಜಿತ ರಾಜಧಾನಿಯಾಗಿ ಸ್ಥಾಪಿಸುವುದರ ಜೊತೆಗೆ, ಸುದೀರ್ಘ ಘರ್ಷಣೆಗೆ ಪರಿಹಾರ ನೀಡುತ್ತದೆ. ಈ ಯೋಜನೆಯ ಕುರಿತು ಚರ್ಚಿಸಲು, ಪ್ಯಾಲೆಸ್ತೀನ್​​ ನಾಯಕರ ಕೋರಿಕೆ ಮೇರೆಗೆ ಸೋಮವಾರದಂದು 57 ಸದಸ್ಯರನ್ನೊಳಗೊಂಡ ಸಭೆ ನಡೆಸಲಾಯಿತು.

oic
oic
author img

By

Published : Feb 4, 2020, 10:33 AM IST

ಮೆಕ್ಕಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ತಿರಸ್ಕರಿಸಿದೆ.

ಇತ್ತೀಚೆಗೆ ಅನಾವರಣಗೊಂಡಿರುವ ಈ ಯೋಜನೆಯ ಕುರಿತು ಚರ್ಚಿಸಲು, ಪ್ಯಾಲೆಸ್ತೀನ್​​ ನಾಯಕರ ಕೋರಿಕೆ ಮೇರೆಗೆ ಸೋಮವಾರದಂದು 57 ಸದಸ್ಯರನ್ನೊಳಗೊಂಡ ಸಭೆ ನಡೆಸಲಾಯಿತು.

ಟ್ರಂಪ್ ಅವರ ಶತಮಾನದ ಒಪ್ಪಂದವನ್ನು ತಿರಸ್ಕರಿದ ಅರಬ್ ಲೀಗ್, "ಇದು ಪ್ಯಾಲೆಸ್ತೀನ್​​ ಜನರ ಹಕ್ಕುಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವುದಿಲ್ಲ" ಎಂದು ಈ ಹಿಂದೆ ಹೇಳಿತ್ತು. ಇದಾದ ಕೆಲವು ದಿನಗಳ ಬಳಿಕ ಈ ಸಭೆ ನಡೆದಿದೆ.

ಇರಾನ್​ನ ವಿದೇಶಾಂಗ ವ್ಯವಹಾರಗಳ ಉಪಮಂತ್ರಿ ಹೊಸೆನ್ ಜಾಬೆರಿ ನೇತೃತ್ವದ ಇರಾನಿನ ನಿಯೋಗಕ್ಕೆ ವೀಸಾ ನಿರಾಕರಿಸುವ ಮೂಲಕ ಸಭೆಗೆ ಹಾಜರಾಗುವುದನ್ನು ನಿರ್ಬಂಧಿಸಲಾಗಿತ್ತು.ಈ ಸಭೆಯಲ್ಲಿ, ಅಮೆರಿಕದ ಶಾಂತಿ ಯೋಜನೆಯ ಕುರಿತು ಇಸ್ಲಾಮಿಕ್ ಸಹಕಾರ ಸಂಸ್ಥೆಯ ನಿಲುವಿನ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಭೆ ನಡೆದ ಹಿಂದಿನ ದಿನ ಅಂದರೆ ಭಾನುವಾರದಂದು ಒಐಸಿ ಟ್ವಿಟ್ಟರ್​ನಲ್ಲಿ ತಿಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.