ನ್ಯೂಯಾರ್ಕ್: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಚುನಾವಣೆಯ ಮೇಲ್ವಿಚಾರಣೆ ಅಧಿಕಾರಿಯೊಬ್ಬರು ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಬಗ್ಗೆ ಆಘಾತಕಾರಿ ಅಂಶಗಳನ್ನು ತಿಳಿಸಿದ್ದಾರೆ.
ಚುನಾವಣಾ ಯಂತ್ರದಲ್ಲಿನ ಮೆಮೊರಿ ಕಾರ್ಡ್ ವಿಫಲವಾಗಿವೆ. ಮತಪತ್ರಗಳು ಸಿಸ್ಟಮ್ಗೆ ಅಪ್ಲೋಡ್ ಆಗುತ್ತಿಲ್ಲ. ಕಾಗದಗಳಲ್ಲಿ ಮುದ್ರಿಸಲಾದ ಅಂಚೆ ಮತಪತ್ರಗಳನ್ನು ಎಣಿಕೆಗಾಗಿ ಸ್ಕ್ಯಾನ್ ಮಾಡುತ್ತಿಲ್ಲ ಎಂದಿದ್ದಾರೆ.
ಟೇಲರ್ ಕೌಂಟಿಯ ಮತ ಎಣಿಕೆ ಕೇಂದ್ರದ ಒಂದು ಸ್ಕ್ಯಾನರ್ನಲ್ಲಿನ 'ಮೆಮೊರಿ ಕಾರ್ಡ್ ಕರೆಪ್ಟ್' ಆಗಿದೆ ಎಂದು ಜಾರ್ಜಿಯಾ ರಾಜ್ಯ ಮತದಾನ ವ್ಯವಸ್ಥೆಯ ವ್ಯವಸ್ಥಾಪಕ ಗೇಬ್ರಿಯಲ್ ಸ್ಟರ್ಲಿಂಗ್ ಹೇಳಿದ್ದಾರೆ. ಬ್ಯಾಕಪ್‌ಗಳಂತೆ ಇರಿಸಲಾಗಿರುವ ಮತಪತ್ರಗಳ ಕಾಗದದ ಆವೃತ್ತಿಗಳನ್ನು ಮರು ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಲಾರೆನ್ಸ್ ಪ್ರದೇಶದಲ್ಲಿ 797 ಮತಪತ್ರಗಳು ಎಲ್ಲಿವೆ ಎಂದು ನಿಖರವಾಗಿ ಕಂಡುಹಿಡಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಅಧಿಕಾರಿಗಳು ಅವುಗಳನ್ನು ಅಪ್ಲೋಡ್ ಮಾಡಿದ್ದಾರೆಂದು ಭಾವಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಅಪ್ಲೋಡ್ ಮಾಡಿಲ್ಲ ಎಂದು ತಿಳಿಯಿತು ಎಂದು ಸ್ಟರ್ಲಿಂಗ್ ಹೇಳಿದ್ದಾರೆ.