ಅಮೆರಿಕ: ಅಧ್ಯಕ್ಷೀಯ ಚುನಾವಣೆಯ ಹಿಂದಿನ ರಾತ್ರಿ ಇಲ್ಲಿನ ಪಿಟ್ಸ್‌ಬರ್ಗ್‌ನಲ್ಲಿ ನಡೆದ ಬೈಡನ್ ಅಂತಿಮ ರ‍್ಯಾಲಿಯಲ್ಲಿ ಗಾಯಕಿ ಲೇಡಿ ಗಾಗಾ ಅವರು ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಪರ ಮತಯಾಚಿಸುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ತೀವ್ರವಾಗಿ ಖಂಡಿಸಿದರು.
ಹಾಗೆಯೇ ಸಂಗೀತಗಾರ ಜಾನ್ ಲೆಜೆಂಡ್ ಕೂಡ ಯು.ಎಸ್.ಫಿಲಡೆಲ್ಫಿಯಾದ ಹೊರಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ (ಚುನಾವಣಾ ದಿನದ ಹಿಂದಿನ ದಿನದ ರಾತ್ರಿ) ಮತದಾರರು ಜೋ ಬೈಡನ್ಗೆ ಬೆಂಬಲ ನೀಡಿ. ಹಿಂದಿನಂತೆ ಈ ಬಾರಿ ಮೋಸಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದರು.
ಜೋ ಮತ್ತು ಕಮಲಾ ಅವರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರಿಯಾದ ಆಯ್ಕೆ. ನಿಸ್ಸಂದೇಹವಾಗಿ ಅವರನ್ನು ಒಪ್ಪಿಕೊಳ್ಳಬಹುದು. ನಿಮ್ಮಲ್ಲಿ ಗೊಂದಲಗಳಿದ್ದರೆ ಅವುಗಳನ್ನು ಈಗಲೇ ಅಳಿಸಿ ಹಾಕಿ. ಡೋನಾಲ್ಡ್ ಟ್ರಂಪ್ ಅವರ ಅಧಿಕಾರಿದಲ್ಲಿ ನಾವೆಷ್ಟು ಕಷ್ಟ ಅನುಭವಿಸಿದ್ದೇವೆ ಎಂಬುದು ನಿಮಗೂ ಗೊತ್ತಿದೆ. ಮತ್ತೆ ಆ ಕಷ್ಟಗಳನ್ನು ನಾವು ಸಿದ್ದರಿಲ್ಲ. ಹೀಗಾಗಿ, ಬದಲಾವಣೆಗೆ ಮುಂದಾಗಿ ಎಂದು ಸಿಂಗರ್ ಲೇಡಿ ಗಾಗಾ ಮನವಿ ಮಾಡಿಕೊಂಡರು.
ಜೋ ಮತ್ತು ಕಮಲಾ ಅವರು ಆಯ್ಕೆಯಾದರೆ ನಮ್ಮೊಂದಿಗೆ ಸ್ನೇಹಿತರಂತೆ ಮತ್ತು ನೆರೆಹೊರೆಯವರು ಇದ್ದಂತೆ ಇರುತ್ತಾರೆ. ಅಷ್ಟೇ ಅಲ್ಲದೆ, ಕುಟುಂಬ ಸದಸ್ಯರಂತೆಯೂ ನಮ್ಮ ಕಷ್ಟಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಅವರೊಂದಿಗೆ ಎಲ್ಲರೂ ನಿಲ್ಲಬೇಕು. ಈ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಶ್ರಮ ವಹಿಸಿ ಎಂದು ಹೇಳಿದರು. ಹಾಗೆಯೇ ಆರ್ಥಿಕ ಹಿಂಜರಿತ, ನಿರುದ್ಯೋಗ ಸಮಸ್ಯೆ ಹೀಗೆ ಎಲ್ಲವೂ ಟ್ರಂಪ್ ಆಡಳಿತಲ್ಲಿ ಬಂದಿದೆ. ಮತ್ತೆ ಅವರೇ ಮುಂದುವರಿದರೆ ದೇಶದ ಸ್ಥಿತಿ ಹೇಳಲಾರದ ಸ್ಥಿತಿಗೆ ತಲುಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.