ETV Bharat / international

ಗುಂಡು ತಗುಲಿ ಸಾವು ಸಂಭವಿಸೋಕೂ ಮುನ್ನ ಆಕೆಯ ಕೊನೆಯ ಟ್ವೀಟ್‌ ಹೀಗಿತ್ತು.. - ಅಮೆರಿಕ ವಾಯುಪಡೆಯ ಉದ್ಯೋಗಿ ಸಾವು

ಡೊನಾಲ್ಡ್ ಟ್ರಂಪ್ ಪರವಾಗಿ ಟ್ವೀಟ್ ಮಾಡಿದ್ದ ಮಹಿಳೆ ಕ್ಯಾಪಿಟಲ್(ಅಮೆರಿಕದ ಸಂಸತ್) ಹಿಂಸಾಚಾರದ ವೇಳೆ ಪೊಲೀಸರು ಹಾರಿಸಿದ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.

Capitol violence
ಕ್ಯಾಪಿಟಲ್​ ಹಿಂಸಾಚಾರ
author img

By

Published : Jan 7, 2021, 5:01 PM IST

Updated : Jan 7, 2021, 5:41 PM IST

ಲಾಸ್​ ಎಂಜಲೀಸ್ (ಅಮೆರಿಕ): 'ನಮ್ಮನ್ನು ತಡೆಯುವವರು ಯಾರೂ ಇಲ್ಲ' (ನಥಿಂಗ್ ವಿಲ್ ಸ್ಟಾಪ್ ಅಸ್) ಎಂದು ಕೆಲವು ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಮಹಿಳೆ ಯುಎಸ್​​ ಕ್ಯಾಪಿಟಲ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ.

  • Nothing will stop us....they can try and try and try but the storm is here and it is descending upon DC in less than 24 hours....dark to light!

    — CommonAshSense (@Ashli_Babbitt) January 5, 2021 " class="align-text-top noRightClick twitterSection" data=" ">

ಆ್ಯಶ್ಲಿ ಬಬ್ಬಿತ್ ಮೃತಪಟ್ಟ ಮಹಿಳೆ. ಅಮೆರಿಕ ಸಂಸತ್​ ಭವನವಾದ ಕ್ಯಾಪಿಟಲ್ ಮೇಲೆ ಮುತ್ತಿಗೆ ಹಾಕಿದ ಟ್ರಂಪ್ ಬೆಂಬಲಿಗರೊಂದಿಗೆ ಈ ಮಹಿಳೆಯೂ ಇದ್ದು, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸಮೀಪದ ಆಸ್ಪತ್ರೆಗೆ ಆ್ಯಶ್ಲಿ ಬಬ್ಬಿತ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪ್ರತಿಭಟನೆ ವೇಳೆ ಯುಎಸ್ ಕ್ಯಾಪಿಟಲ್ ಒಳಗೆ ಗುಂಡಿನ ಮೊರೆತ: ನಾಲ್ವರ ಸಾವು

ಆ್ಯಶ್ಲಿ ಬಬ್ಬಿತ್ ಡೊನಾಲ್ಡ್ ಟ್ರಂಪ್ ಅವರ ಅಭಿಮಾನಿ ಮಾತ್ರವಲ್ಲದೇ ಸುಮಾರು 14 ವರ್ಷಗಳ ಕಾಲ ಅಮೆರಿಕದ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು.

ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಇವರು ವಾಸವಿದ್ದು, ಡೊನಾಲ್ಡ್ ಪರ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಈಗ ನಡೆದ ಕ್ಯಾಪಿಟಲ್ ಹಿಂಸಾಚಾರದಲ್ಲಿ ಆ್ಯಶ್ಲಿ ಬಬ್ಬಿತ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

Last Updated : Jan 7, 2021, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.