ETV Bharat / international

ಕಮಲಾ ಹ್ಯಾರಿಸ್​ ಮಾತ್ರವಲ್ಲ, ಜೋ ಬೈಡನ್​ಗೂ ಇದೆ ಚೆನ್ನೈ ನಂಟು! - ಅಮೆರಿಕ ಅಧ್ಯಕ್ಷೀಯ ಚುನಾವಣೆ 2020

ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಮಾತ್ರವಲ್ಲ, ಚುನಾಯಿತ ಅಧ್ಯಕ್ಷ ಜೋ ಬೈಡನ್​​ ಕೂಡ ಭಾರತೀಯ ಹಿನ್ನೆಲೆ ಉಳ್ಳವರಾಗಿದ್ದು, ತಮ್ಮ ಪೂರ್ವಜರು ಬಹುಕಾಲದ ಹಿಂದೆ ಚೆನ್ನೈನಲ್ಲಿ ವಾಸವಿದ್ರು ಎಂದು ಸ್ವತಃ ಜೋ ಬೈಡನ್​ ಅವರೇ ಹೇಳಿಕೊಂಡಿದ್ದಾರೆ. ಬೈಡನ್​ ಅಜ್ಜ 1700 ರ ದಶಕದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಬ್ರಿಟಿಷ್ ಕ್ಯಾಪ್ಟನ್ ಆಗಿದ್ದರು ಮತ್ತು ಮುಂಬೈಗೆ ಬಂದಿದ್ದರು. ಭಾರತೀಯ ಮಹಿಳೆಯನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದ್ದರು ಬೈಡನ್ ಈ ಹಿಂದೆಯೇ ಹೇಳಿಕೊಂಡಿದ್ರು.

Not just Harris, Biden also has roots in Chennai
ಮುಂಬೈನಲ್ಲಿ ವಾಸವಿದ್ದ ಜೋ ಬಿಡೆನ್​ ಪೂರ್ವಿಕರು
author img

By

Published : Nov 10, 2020, 10:21 AM IST

ವಾಷಿಂಗ್ಟನ್​: ಯು.ಎಸ್. ಚುನಾಯಿತ ಅಧ್ಯಕ್ಷ- ಜೋ ಬೈಡನ್ ಪೂರ್ವಿಕರು ಕೂಡ ಚೆನ್ನೈ ಮೂಲದವರು ಎಂಬ ಮಾಹಿತಿ ತಿಳಿದು ಬಂದಿದೆ.

ಬೈಡನ್ ಪೂರ್ವಜರಲ್ಲಿ ಒಬ್ಬರಾದ ಜಾರ್ಜ್ ಬೈಡನ್ ಅವರು ಚೆನ್ನೈನ ಮನೆಯೊಂದರಲ್ಲಿ ವಾಸವಿದ್ರು. ವರದಿಯ ಪ್ರಕಾರ, ಅವರ ಮತ್ತೊಬ್ಬ ಪೂರ್ವಜರಾದ ಕ್ರಿಸ್ಟೋಫರ್ ಬೈಡನ್ 1858 ರಲ್ಲಿ ಮದ್ರಾಸ್‌ನಲ್ಲಿ ನಿಧನರಾದರು. ಅವರನ್ನು ಕ್ಯಾಥೆಡ್ರಲ್ ಪಕ್ಕದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ. ಆ ಸ್ಮಾರಕದಲ್ಲಿ ಬೈಡನ್ ಅವರ ನಾಯಿ ಹೆಕ್ಟೇರ್ ಭಾವಚಿತ್ರವೂ ಇದೆ. ಆದರೆ ಚರ್ಚ್ ಅಧಿಕಾರಿಗಳ ಬಳಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ.

ಬೈಡನ್ ಅವರ ಪೂರ್ವಜರು ಮೂಲತಃ ಐರ್ಲೆಂಡ್ ಮೂಲದವರು ಮತ್ತು ಅವರು ಸಾರ್ವಜನಿಕ ವೇದಿಕೆಯಲ್ಲಿ ಆ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದರು. "ನಾನು 29 ವರ್ಷದವನಾಗಿದ್ದಾಗ ನಾನು ಯುನೈಟೆಡ್ ಸ್ಟೇಟ್ಸ್ ಸೆನೆಟ್​ಗೆ ಆಯ್ಕೆಯಾಗಿದ್ದೆ. 1972 ರಲ್ಲಿ, ನನಗೆ ಬಂದ ಮೊದಲ ಪತ್ರಗಳಲ್ಲಿ ಬೈಡನ್, ನನ್ನ ಹೆಸರು ಬೈಡನ್ ಎಂದು ಮುಂಬೈ ವಿಳಾಸದಿಂದ ಪತ್ರವೊಂದು ಬಂದಿತ್ತು ಎಂದು ಸೆಪ್ಟೆಂಬರ್ 21, 2015 ರಂದು ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್​ನಲ್ಲಿ ಮಾಡಿದ ಭಾಷಣದಲ್ಲಿ ಜೋ ಬೈಡನ್​ ಹೇಳಿದ್ದರು. ಅವರ ಪೂರ್ವಜರೊಬ್ಬರು 1700 ರ ದಶಕದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಬ್ರಿಟಿಷ್ ಕ್ಯಾಪ್ಟನ್ ಆಗಿದ್ದರು ಮತ್ತು ಮುಂಬೈಗೆ ಬಂದಿದ್ದರು. ಭಾರತೀಯ ಮಹಿಳೆಯನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದರು ಎಂದು ಯುಎಸ್​ ಅಧ್ಯಕ್ಷ ಬೈಡನ್ ಹೇಳಿಕೊಂಡಿದ್ರು.

ಮುಂಬೈ ಮೂಲದ ಥಿಂಕ್-ಟ್ಯಾಂಕ್ ಗೇಟ್‌ವೇ ಹೌಸ್ ವರದಿ ಮಾಡಿದಂತೆ, ಬೈಡನ್​ ಅವರ ಪೂರ್ವಜರಾದ ವಿಲಿಯಂ ಬೈಡನ್ ಮತ್ತು ಕ್ರಿಸ್ಟೋಪರ್ ಬೈಡನ್ ತಮ್ಮ ಹದಿಹರೆಯದ ವಯಸ್ಸಿನಲ್ಲಿ ಲಂಡನ್ ಮತ್ತು ಭಾರತದ ನಡುವಿನ ಕೇಪ್ ಆಫ್ ಗುಡ್ ಹೋಪ್ ಮೂಲಕ ಕಠಿಣ ಮಾರ್ಗದಲ್ಲಿ ಸಂಚಾರ ಆರಂಭಿಸಿದ್ರು. ಗೇಟ್‌ವೇ ಹೌಸ್‌ಗಾಗಿ ಬರೆಯುತ್ತಾ, ಮದ್ರಾಸ್‌ನಲ್ಲಿ ನೆಲೆಸಿದ ಕ್ರಿಸ್ಟೋಫರ್ ಬೈಡನ್, ದಾನ ಮತ್ತು ಅನೇಕ ಕಲ್ಯಾಣ ಕಾರ್ಯಗಳಲ್ಲಿ ನಿರತರಾದ ಪ್ರಸಿದ್ಧ ವ್ಯಕ್ತಿ ಎಂದು ವರದಿಯಲ್ಲಿ ತಿಳಿಸಿದೆ.

ಕಮಲಾ ಹ್ಯಾರಿಸ್​ಗೆ ಇಷ್ಟವಾದ ಇಡ್ಲಿ ಮತ್ತು ಮಸಾಲಾ ದೋಸೆಗಳ ಬಗ್ಗೆ ನೆಟ್ಟಿಗರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಅಮೆರಿಕದ 46ನೇ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಮುಂಬೈನೊಂದಿಗೆ ತಮ್ಮ ಪೂರ್ವಜರಿಗಿದ್ದ ಸಂಪರ್ಕದ ಬಗ್ಗೆ ಇತ್ತೀಚೆಗೆ ಹೇಳಿದ್ದಾರೆ. ಇದೀಗ ತಮಿಳುನಾಡು ಸ್ಥಳೀಯ ಜನರ ಸಂತೋಷ ಮತ್ತು ಹೆಮ್ಮೆಯನ್ನು ಹೆಚ್ಚಿಸುವಂತೆ, ಬೈಡನ್ ಅವರ ಪೂರ್ವಜರ ಬೇರುಗಳು ಚೆನ್ನೈನಲ್ಲಿಯೂ ಕಂಡುಬಂದಿವೆ. ಕಮಲಾ ಹ್ಯಾರಿಸ್ ಮತ್ತು ಬೈಡನ್ ಅವರ ಪೂರ್ವಜರು ಚೆನ್ನೈನಲ್ಲಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.