ನ್ಯೂಯಾರ್ಕ್(ಅಮೆರಿಕಾ): ಮಹಾಮಾರಿ ಕೊರೊನಾ ವೈರಸ್ಗೆ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದ್ದು, ನ್ಯೂಯಾರ್ಕ್ ರಾಜ್ಯದಲ್ಲಿ ಸಾವಿನ ಸಂಖ್ಯೆ 1,000 ರ ಗಡಿ ತಲುಪಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ಗೆ ಸಾವನ್ನಪ್ಪಿರರುವವರ ಸಂಖ್ಯೆ ಭಾನುವಾರದ ಅಂಕಿಅಂಶಗಳ ಪ್ರಕಾರ 965 ಕ್ಕೆ ಏರಿದೆ. ಬಹುಪಾಲು ಜನರು ನ್ಯೂಯಾರ್ಕ್ ನಗರದಲ್ಲಿದ್ದಾರೆ. ಯುಎಸ್ ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿದ್ದು, ಸಾವನ್ನಪ್ಪಿರುವವರಲ್ಲಿ 40 % ಕ್ಕಿಂತ ಹೆಚ್ಚು ಜನರು ನ್ಯೂಯಾರ್ಕ್ನವರೇ ಆಗಿದ್ದಾರೆ. ಜೊತೆಗೆ ಅಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ ಸುಮಾರು ಕಾಲು ಭಾಗದಷ್ಟು ಜನರು ನರ್ಸಿಂಗ್ ಹೋಂ ನಿವಾಸಿಗಳಾಗಿದ್ದಾರೆ ಎಂದು ಗವರ್ನರ್ ಆಂಡ್ರ್ಯೂ ಕ್ಯುಮೊ ಹೇಳಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಸ್ಪೇನ್ ತನ್ನ ಮೊದಲ ಸಾವಿನಿಂದ 1,000 ನೇ ಸ್ಥಾನಕ್ಕೆ ಹೋಗಲು 18 ದಿನಗಳನ್ನು ತೆಗೆದುಕೊಂಡಿತು. ಇಟಲಿ 21 ದಿನಗಳನ್ನು ತೆಗೆದುಕೊಂಡಿತ್ತು. ಆದ್ರೆ ನ್ಯೂಯಾರ್ಕ್ ರಾಜ್ಯವು 16 ದಿನಗಳನ್ನು ತೆಗೆದುಕೊಂಡಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ.