ವಾಷಿಂಗ್ಟನ್: ಕಾಶ್ಮೀರ ವಿಚಾರದಲ್ಲಿ ವಿನಾಕಾರಣ ಕಿರಿಕ್ ಮಾಡುತ್ತಿರುವ ಪಾಕಿಸ್ತಾನ ಯುದ್ಧೋನ್ಮಾದದಲ್ಲಿ ತೇಲಾಡುತ್ತಿದೆ. ಒಂದು ವೇಳೆ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧ ಸಾರಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ನಷ್ಟದ ಪ್ರಮಾಣ ಹೆಚ್ಚು. ಈಗಾಗಲೇ ದಿವಾಳಿಯಾಗಿರುವ ಪಾಕ್ ಯುದ್ಧದ ಬಳಿಕ ಎಲ್ಲ ವಿಚಾರದಲ್ಲೂ ಪಾತಾಳಕ್ಕೆ ಕುಸಿಯೋದು ನಿಶ್ಚಿತ..!
ಉಭಯ ದೇಶಗಳು ಪರಮಾಣು ಬಾಂಬ್ ಹೊಂದಿದ್ದು, ಇದೇ ವಿಚಾರಕ್ಕೆ ಯುದ್ಧದ ಸಾವು-ನೋವಿನ ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದು ವೇಳೆ ಭಾರತ-ಪಾಕ್ ಯುದ್ಧ ನಡೆದಿದ್ದೇ ಆದಲ್ಲಿ ಏನಾಗಲಿದೆ ಎನ್ನುವ ಬಗ್ಗೆ ಗ್ಲೋಬಲ್ ಮಾಸ್ ಸ್ಟಾರ್ವೇಶನ್(Global Mass Starvation) ವರದಿಯೊಂದನ್ನು ನೀಡಿದೆ.
ಪರಮಾಣು ಶಕ್ತಿ ಹೊಂದಿರುವ ಈ ರಾಷ್ಟ್ರಗಳ ಯುದ್ಧದಿಂದ ಹತ್ತು ಕೋಟಿಗೂ(ನೂರು ಮಿಲಿಯನ್) ಅಧಿಕ ಮಂದಿ ಸಾವನ್ನಪ್ಪಲಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದು, ಆತಂಕ ಮೂಡಿಸಿದೆ.
ಪರಮಾಣು ಬಾಂಬ್ ದಾಳಿ ಕೇವಲ ಬಾಂಬ್ ಬೀಳುವ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರವಲ್ಲದೆ ಇನ್ನಿತರ ಸ್ಥಳಗಳಲ್ಲೂ ಭಾರಿ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ. ಈಗಾಗಲೇ ಎರಡೂ ದೇಶಗಳು ಕಾಶ್ಮೀರದ ವಿಚಾರದಲ್ಲಿ ಯುದ್ಧ ನಡೆಸಿದ್ದು, 2025ರ ವೇಳೆಗೆ ಮತ್ತೆ ಯುದ್ಧ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.