ಸ್ಯಾನ್ ಆಂಟೋನಿಯೊ: ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಪ್ರೇರಿತವಾಗಿ ನ್ಯೂಯಾರ್ಕ್ ನಗರದ ಶ್ವೇತಭವನ ಮತ್ತು ಟ್ರಂಪ್ ಟವರ್ ಸೇರಿದಂತೆ ಇತರ ತಾಣಗಳ ಮೇಲೆ ಬಾಂಬ್, ಗುಂಡು ಹಾರಿಸಲು ಸಂಚು ರೂಪಿಸಿದ್ದ ದಕ್ಷಿಣ ಕೆರೊಲಿನಾದ ವ್ಯಕ್ತಿ ಸದ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ಫೆಡರಲ್ ಅಧಿಕಾರಿಗಳು ಮಂಗಳವಾರದಂದು ತಿಳಿಸಿದ್ದಾರೆ.
ಕ್ರಿಸ್ಟೋಫರ್ ಸೇನ್ ಮ್ಯಾಥ್ಯೂಸ್, ಯುಎಸ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರೆದುರು ನಡೆದ ವಿಚಾರಣೆಯಲ್ಲಿ ಐಎಸ್ಗೆ ಬೆಂಬಲ ನೀಡಿದ್ದನ್ನು ಬಾಯ್ಬಿಟ್ಟಿದ್ದಾನೆ.
ಐಎಸ್ ಪರವಾಗಿ ದೇಶೀಯ ಮತ್ತು ವಿದೇಶಿ ದಾಳಿಯ ಉದ್ದೇಶಗಳಿಗಾಗಿ ಬಾಂಬ್ ತಯಾರಿಕೆಯ ಮಾಹಿತಿ ಹಂಚಿಕೊಳ್ಳಲು ಮತ್ತು ಹಲವರನ್ನು ಸಂಘಟನೆಗೆ ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಟೆಕ್ಸಾಸ್‌ನ ಕಾಸ್ಟ್‌ನ ಜೇಲಿನ್ ಕ್ರಿಸ್ಟೋಫರ್ ಮೊಲಿನಾ ಅವರೊಂದಿಗೆ ಸೇರಿ ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಫೆಡರಲ್ ಕಸ್ಟಡಿಯಲ್ಲಿ ಉಳಿದಿರುವ ಮೊಲಿನಾರ ಅಪರಾಧ ಸಾಬೀತಾದರೆ 40 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.