ವಾಷಿಂಗ್ಟನ್: ಪ್ರಪಂಚದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೊನೆಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಮುಖಭಂಗವಾಗಿದೆ.
-
CNN projects #JoeBiden will be the next US President pic.twitter.com/YOcgnkbolj
— ANI (@ANI) November 7, 2020 " class="align-text-top noRightClick twitterSection" data="
">CNN projects #JoeBiden will be the next US President pic.twitter.com/YOcgnkbolj
— ANI (@ANI) November 7, 2020CNN projects #JoeBiden will be the next US President pic.twitter.com/YOcgnkbolj
— ANI (@ANI) November 7, 2020
ಇದರ ಜತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆಲುವು ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಕಣಕ್ಕಿಳಿದು ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇರಿದ ಏಷ್ಯಾ ಅಮೆರಿಕನ್ನ ಕಪ್ಪು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
'ನೀನು ಅಧ್ಯಕ್ಷೆ ಆಗಬಹುದು'; ನಾಲ್ಕು ವರ್ಷದ ಮಗುವಿಗೆ ಕಮಲಾ ಹ್ಯಾರಿಸ್ ಪಾಠ!
ಹಲವು ದಾಖಲೆ ಬರೆದ ಕಮಲಾ ಹ್ಯಾರಿಸ್
- ಬೈಡನ್ ಶ್ವೇತಭವನ ಪ್ರವೇಶ ಖಚಿತವಾಗುತ್ತಿದ್ದಂತೆ ಹ್ಯಾರಿಸ್ ಹಲವು ದಾಖಲೆ ನಿರ್ಮಾಣ ಮಾಡಿದ್ದಾರೆ.
- ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಮಹಿಳೆ
- ದಕ್ಷಿಣ ಏಷ್ಯಾ ಮೂಲದ ಪ್ರಥಮ ಮಹಿಳೆ
- ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದ ಏಷ್ಯಾದ ಮೊದಲ ಮಹಿಳೆ
ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಕಮಲಾ ಹ್ಯಾರಿಸ್ 2024ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿವೆ. ಅಮೆರಿಕ ಚುನಾವಣೆಯಲ್ಲಿ ಜೋ ಬೈಡನ್ 284 ಮತ, ಟ್ರಂಪ್ಗೆ 214 ಮತ ಪಡೆದುಕೊಂಡಿದ್ದಾರೆ.