ETV Bharat / international

ಆಗಿದ್ದು ಆಗ್ಹೋಗಿದೆ, ಸೋಲೊಪ್ಪಿಕೊಂಡು ಬಿಡಿ ಮಾವ.. ಡೊನಾಲ್ಡ್​ ಟ್ರಂಪ್​ಗೆ ಅಳಿಯನ ಮನವಿ - ಅಧ್ಯಕ್ಷೀಯ ಚುನಾವಣೆಯ ವಿವಾದ

ಈ ಕುರಿತು ಅಸೋಸಿಯೇಟೆಡ್ ಪ್ರೆಸ್ ಕೂಡ ವರದಿ ಮಾಡಿದ್ದು, ಕುಶ್ನರ್ ಕೆಲವರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಯೊಂದರಲ್ಲಿ ಬಹಿರಂಗಪಡಿಸಲಾಗಿದೆ. ಈ ಹಿಂದೆ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಪ್ರಾಮಾಣಿಕ ಮತ ಎಣಿಕೆ ಆಗುವವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು..

Jared Kushner
ಜೇರೆಡ್ ಕುಶ್ನರ್
author img

By

Published : Nov 8, 2020, 4:02 PM IST

ವಾಷಿಂಗ್ಟನ್ (ಅಮೆರಿಕ): ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ರಿಪಬ್ಲಿಕನ್ ಪಕ್ಷ ಸೋತಿರುವುದನ್ನು ಒಪ್ಪಿಕೊಳ್ಳುವಂತೆ ಡೊನಾಲ್ಡ್ ಟ್ರಂಪ್​ ಅಳಿಯ ಜೇರೆಡ್ ಕುಶ್ನರ್ ಟ್ರಂಪ್​ಗೆ ಮನವಿ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಡೊನಾಲ್ಡ್ ಟ್ರಂಪ್ ಹಿರಿಯ ಸಲಹೆಗಾರರೂ ಆಗಿರುವ ಜೇರೆಡ್ ಕುಶ್ನರ್, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುವ ಬಗ್ಗೆ ಟ್ರಂಪ್​ ಅವರನ್ನು ಮನವೊಲಿಸಲು ಮುಂದಾಗಿದ್ದು, ಭಾನುವಾರ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಡೊನಾಲ್ಡ್ ಟ್ರಂಪ್ ಬೈಡನ್ ಅವರನ್ನು ತಪ್ಪಾಗಿ ಬಿಂಬಿಸಲು ಮುಂದಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಈ ಕುರಿತು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಈ ಕುರಿತು ಅಸೋಸಿಯೇಟೆಡ್ ಪ್ರೆಸ್ ಕೂಡ ವರದಿ ಮಾಡಿದ್ದು, ಕುಶ್ನರ್ ಕೆಲವರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಯೊಂದರಲ್ಲಿ ಬಹಿರಂಗಪಡಿಸಲಾಗಿದೆ. ಈ ಹಿಂದೆ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಪ್ರಾಮಾಣಿಕ ಮತ ಎಣಿಕೆ ಆಗುವವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು.

ಸೋಮವಾರದಿಂದ ಕಾನೂನ ಹೋರಾಟ ಆರಂಭವಾಗಲಿದೆ ಎಂದು ಹೇಳಿದ್ದರು ಟ್ರಂಪ್‌. ಈ ಹಿನ್ನೆಲೆಯಲ್ಲಿ ಅವರ ಅಳಿಯ ಜೇರೆಡ್ ಕುಶ್ನರ್, ಟ್ರಂಪ್ ಅವರನ್ನು ಮನವೊಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.