ETV Bharat / international

ಅಮೆರಿಕದ ವಲಸೆ ನೀತಿ ಎಫೆಕ್ಟ್: ಕೆನಡಾದತ್ತ ಮುಖ ಮಾಡಿದ ಭಾರತೀಯರು! - indian talent moving to canada

ಅಮೆರಿಕದ ಹೆಚ್​1 ಬಿ ವೀಸಾ ನೀತಿಗಳಿಂದಾಗಿ ಭಾರತೀಯ ಪ್ರತಿಭೆಗಳು ಇದೀಗ ಕೆನಡಾದತ್ತ ಮುಖ ಮಾಡುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

VISA
VISA
author img

By

Published : Jul 15, 2021, 9:16 AM IST

ವಾಷಿಂಗ್ಟನ್( ಅಮೆರಿಕ): ಹೆಚ್​1 ಬಿ ವೀಸಾ ನೀತಿಯಿಂದಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಾಗದ ಭಾರತೀಯರು ಈಗ ಕೆನಡಾದತ್ತ ತೆರಳುತ್ತಿದ್ದಾರೆ ಎಂದು ವಲಸೆ ಮತ್ತು ನೀತಿ ತಜ್ಞರು ತಿಳಿಸಿದ್ದಾರೆ

ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಅಥವಾ ಶಾಶ್ವತ ರೆಸಿಡೆನ್ಸಿ ನೀಡುವಲ್ಲಿ ಪ್ರತಿ ದೇಶ ಕೋಟಾ ಇರುವುದು ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಭಾರತೀಯ ಪ್ರತಿಭೆಗಳು ಅಮೆರಿಕದಿಂದ ಕೆನಡಾಕ್ಕೆ ಹೋಗುವುದನ್ನು ತಡೆಯಲು ಅಮೆರಿಕ ಸಂಸತ್ತು (ಕಾಂಗ್ರೆಸ್), ಅಧ್ಯಕ್ಷರಿಗೆ ಒತ್ತಾಯಿಸಿದೆ.

ಮೂರು ಉದ್ಯೋಗ ಆಧಾರಿತ ವರ್ಗಗಳ ಒಟ್ಟು ಬ್ಯಾಕ್‌ಲಾಗ್ 2030ರ ಆರ್ಥಿಕ ವರ್ಷದಲ್ಲಿ ಅಂದಾಜು 9,15,497 ಭಾರತೀಯರಿಂದ ಅಂದಾಜು 21,95,795 ಭಾರತೀಯರಿಗೆ ಹೆಚ್ಚಾಗುತ್ತದೆ ಎಂದು ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ ಕಾರ್ಯನಿರ್ವಾಹಕ ನಿರ್ದೇಶಕ ಸ್ಟುವರ್ಟ್ ಆಂಡರ್ಸನ್ ಹೇಳಿದ್ದಾರೆ. ಒಂದು ದಶಕದೊಳಗೆ 20 ಲಕ್ಷಕ್ಕೂ ಹೆಚ್ಚು ಜನರ ಉದ್ಯೋಗ ಆಧಾರಿತ ಹಸಿರು ಕಾರ್ಡ್​ಗಳಿಗಾಗಿ ಕಾಯುತ್ತಿದ್ದಾರೆ.

ಅಮೆರಿಕದ ವಲಸೆ ನೀತಿಗಳಿಂದಾಗಿ ಭಾರತದ ಪ್ರತಿಭೆಗಳು ಇಲ್ಲಿಗೆ ಬರುತಿಲ್ಲ. ಪರ್ಯಾಯವಾಗಿ ಅವರು ಕೆನಡಾಗೆ ಪ್ರವೇಶಿಸುತ್ತಿದ್ದಾರೆ. ಹೆಚ್​​1 ಬಿ ವೀಸಾ ನೀತಿಗಳಿಂದಾಗಿ ಅಮೆರಿಕಕ್ಕೆ ಉದ್ಯೋಗ, ಶಿಕ್ಷಣಕ್ಕೆಂದು ತೆರಳುವವರ ಸಂಖ್ಯೆ ಶೇಕಡಾ 25 ಕ್ಕಿಂತಲೂ ಹೆಚ್ಚಾಗಿದೆ. ಯುಎಸ್​ನಲ್ಲಿ ಕಂಪ್ಯೂಟರ್ ಸೈನ್ಸ್​ ಓದಲು ಬರುತ್ತಿದ್ದ ಮೂರನೇ ಎರಡರಷ್ಟು ಭಾರತೀಯ ವಿದ್ಯಾರ್ಥಿಗಳಿರುತ್ತಿದ್ದರು. ಆದರೆ, ಇದೀಗ ಕೆನಡಾದತ್ತ ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ:ಕೋವಿಡ್ ಲಸಿಕೆಯನ್ನ ಚೀನಾ ರಾಜಕೀಯ ಉದ್ದೇಶಗಳಿಗಾಗಿ ಬಳಸುತ್ತಿದೆ : ಜರ್ಮನಿ ನೇರ ಆರೋಪ

ಅಮೆರಿಕಕ್ಕೆ ಹೋಲಿಸಿದ್ರೆ, ಕೆನಡಾದ ವಲಸೆ ನೀತಿ ಉತ್ತಮವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.