ಯುಎಸ್ಎನಲ್ಲಿ 2,51,290 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 2017ಕ್ಕೆ ಹೋಲಿಸಿದ್ರೆ 2018ರಲ್ಲಿ 1.68ರಷ್ಟು ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಇದೇ ಸಮಯದಲ್ಲಿ 1.70ರಷ್ಟು ವಿದೇಶಿ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ವಿಂಗ್ ಆಫ್ ಅಮೆರಿಕ ವರದಿ ಮಾಡಿದೆ.
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2.50 ಲಕ್ಷ ಮೀರಿದೆ. 2017ಕ್ಕೆ ಹೋಲಿಸಿದರೆ 2018ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 4157 ಹೆಚ್ಚಾಗಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ಅಮೆರಿಕದಲ್ಲಿ ಕಲಿಕೆಯಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 26,120ರಷ್ಟು ಕಡಿಮೆಯಾಗಿದೆ. ಅಲ್ಲದೆ ಚೀನಾ ವಿದ್ಯಾರ್ಥಿಗಳ ಸಂಖ್ಯೆ 147ರಷ್ಟು ಕುಸಿದಿದೆ ಎಂದು ಅಮೆರಿಕ ಮೂಲದ ಹೋಮ್ಲ್ಯಾಂಡ್ ಸೆಕ್ಯುರಿಟಿ ವಿಂಗ್ 2017 ಮತ್ತು 2018ರ ಅವಧಿಯಲ್ಲಿ ಯುಎಸ್ಎನಲ್ಲಿ ಕಲಿಯುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಮೀಕ್ಷೆಯ ವಿವರಗಳನ್ನು ಬಿಡುಗಡೆ ಮಾಡಿದೆ.
ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವು ಬೆಳವಣಿಗೆಯ ದರದಲ್ಲಿ ಹೆಚ್ಚಿನ ಇಳಿಕೆಗೆ ಕಾರಣವಾಗಿದೆ ಎಂದು ಕನ್ಸ್‌ಲ್ಟೆನ್ಸಿ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಭಾರತೀಯ ವಿದ್ಯಾರ್ಥಿಗಳು ಮೂರು ವರ್ಷದ ಪ್ರಾಯೋಗಿಕ ತರಬೇತಿಯ ನಂತರ ಎಚ್1ಬಿ ವೀಸಾ ಪಡೆಯಲು ವಿಫಲರಾದ ಕಾರಣ 2ನೇ ಸ್ನಾತಕೋತರ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಹೀಗಾಗಿ ಕಳೆದ ಮೂರ್ನಲ್ಕು ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾ,ಕೆನಡಾ, ಜಪಾನ್, ಬ್ರಿಟನ್, ಜರ್ಮನಿ ಮೊದಲಾದ ರಾಷ್ಟ್ರಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡುತ್ತಿದ್ದಾರೆ.
*232 ದೇಶಗಳ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಓದುತ್ತಿದ್ದಾರೆ.
* 2017ರಲ್ಲಿ ಅವರ ಸಂಖ್ಯೆ 15,51,373
*2018ರಲ್ಲಿ ಅವರ ಸಂಖ್ಯೆ 15,25,253
*26,120 ರಷ್ಟು ಕಡಿಮೆ(1.70 ಶೇ.)
*ಏಷ್ಯಾ ಖಂಡದಿಂದ 22,598 (1.9 ಶೇ.) ಇಳಿಕೆ
*ಅವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ 3,02,073 (19.50 ಪ್ರತಿಶತ) ಓದುತ್ತಿದ್ದಾರೆ
2017 (ಜನವರಿ- ಡಿಸೆಂಬರ್) - 2,47,133
2018 (ಜನವರಿ- ಡಿಸೆಂಬರ್) - 2,51,290
4,157 ಹೆಚ್ಚಳ
ಬೆಳವಣಿಗೆ ಶೇ. 1.68
ಬಾಲಕಿಯರು ಶೇ. 33.50
ಬಾಲಕರು ಶೇ. 66.50
ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ಅಗ್ರ ರಾಷ್ಟ್ರಗಳು..
ಚೀನಾ 4,78,732
ಭಾರತ 2,51,290
ದಕ್ಷಿಣಾ ಕೊರಿಯಾ 88,867
ಸೌದಿ ಅರೇಬಿಯಾ 61,205
ಜಪಾನ್ 39,396