ವಾಷಿಂಗ್ಟನ್: ನ್ಯೂಯಾರ್ಕ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವುದನ್ನು ಸೋಮವಾರದಂದು ಇಂಡೋ-ಅಮೆರಿಕನ್ ಸಮುದಾಯದ ಮುಖಂಡರು ಖಂಡಿಸಿದ್ದಾರೆ.
ನ್ಯೂಯಾರ್ಕ್ ಮ್ಯಾನ್ಹಟನ್ ಯೂನಿಯನ್ ಸ್ಕ್ವೇರ್ನಲ್ಲಿರುವ 8 ಅಡಿ ಎತ್ತರದ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಇದನ್ನು ಯುಎಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದ್ದು, ಇಂದೊಂದು ತುಚ್ಛ ಕಾರ್ಯ ಎಂದು ಹೇಳಿದೆ.
-
On Mahatma Gandhi statue in New York City being defaced:@MEAIndia @IndianEmbassyUS @DrSJaishankar @NYCMayor @NYPDPC @globalnyc pic.twitter.com/Sr0Q2RQIWn
— India in New York (@IndiainNewYork) February 5, 2022 " class="align-text-top noRightClick twitterSection" data="
">On Mahatma Gandhi statue in New York City being defaced:@MEAIndia @IndianEmbassyUS @DrSJaishankar @NYCMayor @NYPDPC @globalnyc pic.twitter.com/Sr0Q2RQIWn
— India in New York (@IndiainNewYork) February 5, 2022On Mahatma Gandhi statue in New York City being defaced:@MEAIndia @IndianEmbassyUS @DrSJaishankar @NYCMayor @NYPDPC @globalnyc pic.twitter.com/Sr0Q2RQIWn
— India in New York (@IndiainNewYork) February 5, 2022
ಈ ಹೇಯ ಕೃತ್ಯ ಮಾಡಿದ್ದು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ನ್ಯೂಯಾರ್ಕ್ನಲ್ಲಿರುವ ಭಾರತೀಯ ಕಚೇರಿ ತಿಳಿಸಿದೆ. ಈ ಕೃತ್ಯದ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಇಮ್ರಾನ್ ಖಾನ್ ರಷ್ಯಾಕ್ಕೆ ಭೇಟಿ ನೀಡುವ ಸಾಧ್ಯತೆ!
ಈ ದುಷ್ಕೃತ್ಯದ ವಿರುದ್ಧ ಭಾರತೀಯ ಅಮೆರಿಕನ್ನರು ತೀವ್ರವಾಗಿ ಖಂಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2020ರ ಡಿಸೆಂಬರ್ನಲ್ಲಿ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ಇದೀಗ ಮತ್ತೊಂದು ಇಂತಹದ್ದೇ ಘಟನೆ ಅಮೆರಿಕದಲ್ಲಿರುವ ಭಾರತೀಯರನ್ನು ಕೆರಳುವಂತೆ ಮಾಡಿದೆ.