ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರ್ಸೀವರೆನ್ಸ್ ರೋವರ್ ನೌಕೆ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ಇದರ ನೇತೃತ್ವ ವಹಿಸಿದ್ದು ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಆಗಿರುವ ಸ್ವಾತಿ ಮೋಹನ್.
ರೋವರ್ ಯಶಸ್ವಿಯಾಗಿ ಲ್ಯಾಂಡ್ ಆಗಿರುವುದನ್ನು ಖಚಿತಪಡಿಸಿದ ಸ್ವಾತಿ ಮೋಹನ್, ಪರ್ಸೀವರೆನ್ಸ್ ಮಂಗಳ ಗ್ರಹದ ಮೇಲ್ಮೈಯಲ್ಲಿ ಸುರಕ್ಷಿತವಾಗಿರುತ್ತದೆ ಮತ್ತು ಕೆಲ ಕುರುಹುಗಳನ್ನು ಹುಡುಕಲು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
-
Touchdown confirmed. The #CountdownToMars is complete, but the mission is just beginning. pic.twitter.com/UvOyXQhhN9
— NASA (@NASA) February 18, 2021 " class="align-text-top noRightClick twitterSection" data="
">Touchdown confirmed. The #CountdownToMars is complete, but the mission is just beginning. pic.twitter.com/UvOyXQhhN9
— NASA (@NASA) February 18, 2021Touchdown confirmed. The #CountdownToMars is complete, but the mission is just beginning. pic.twitter.com/UvOyXQhhN9
— NASA (@NASA) February 18, 2021
ಸ್ವಾತಿ ನಾಸಾದೊಂದಿಗಿನ ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಅನೇಕ ಕಾರ್ಯಗಳು ಹಾಗೂ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.
ಸದ್ಯ ಅನ್ವೇಷಣಾ ಕಾರ್ಯಕ್ರಮದ ಭಾಗವಾಗಿ ಮಂಗಳ ಗ್ರಹಕ್ಕೆ ಕಳುಹಿಸಿರುವ ಪರ್ಸೀವರೆನ್ಸ್ ರೋವರ್ ಮಂಗಳನ ಅಂಗಳಕ್ಕೆ ಇಳಿಯುವ ಮೂಲಕ ನಾಸಾದ ಯೋಜನೆ ಒಂದು ಹಂತದ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ರೋವರ್ ಮಂಗಳ ಗ್ರಹದ ಮೇಲ್ಮೈನಲ್ಲಿರುವ ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.