ETV Bharat / international

'1959-ಸಮಸ್ಯೆ' ಬಗೆಹರಿಸಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ನಿಖಿಲ್ ಶ್ರೀವಾಸ್ತವ - 1959 ಸಮಸ್ಯೆ

'1959-ಸಮಸ್ಯೆ' ಬಗೆಹರಿಸಿದಕ್ಕಾಗಿ ಭಾರತೀಯ ಮೂಲದ ಗಣಿತಶಾಸ್ತ್ರಜ್ಞ ನಿಖಿಲ್ ಶ್ರೀವಾಸ್ತವ ಜೊತೆಗೆ ಮತ್ತಿಬ್ಬರು ಪ್ರಿಯನ್ ಫೊಯಾಸ್ ಪ್ರಶಸ್ತಿ ಗೆದ್ದಿದ್ದಾರೆ..

Nikhil Srivastava
ನಿಖಿಲ್ ಶ್ರೀವಾಸ್ತವ
author img

By

Published : Dec 4, 2021, 1:49 PM IST

ವಾಷಿಂಗ್ಟನ್ (ಅಮೆರಿಕ) : ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಭಾರತೀಯ-ಅಮೆರಿಕನ್ ಗಣಿತಶಾಸ್ತ್ರಜ್ಞ ಪ್ರೊ.ನಿಖಿಲ್ ಶ್ರೀವಾಸ್ತವ ಅವರು ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿ ನೀಡುವ 'ಸಿಪ್ರಿಯನ್ ಫೊಯಾಸ್ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.

'1959-ಸಮಸ್ಯೆ' ಬಗೆಹರಿಸಿದಕ್ಕಾಗಿ ನಿಖಿಲ್ ಶ್ರೀವಾಸ್ತವ ಜೊತೆಗೆ ಆ್ಯಡಮ್ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮನ್ ಕೂಡ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.

ಆ್ಯಡಮ್ ಮಾರ್ಕಸ್ ಅವರು ಸ್ವಿಟ್ಜರ್ಲೆಂಡ್‌ನ ಉನ್ನತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡೇನಿಯಲ್ ಸ್ಪೀಲ್ಮನ್ ಅವರು ಕಂಪ್ಯೂಟರ್ ಸೈನ್ಸ್‌ ಹಾಗೂ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.

ಇದನ್ನೂ ಓದಿ: 13,500 ಅಡಿ ಎತ್ತರದಲ್ಲಿ ಗಾಳಿಯಲ್ಲೇ ಸ್ಕೈ ಸರ್ಫಿಂಗ್​ ಡೈವ್ ಮಾಡಿ ವಿಶ್ವದಾಖಲೆ ಬರೆದ ವೀರ!

ಈ ಮೂವರಿಗೆ ಜನವರಿ 5, 2022ರಂದು ಸಿಯಾಟಲ್‌ನಲ್ಲಿ ನಡೆಯಲಿರುವ ವಿಶ್ವದ ಅತಿದೊಡ್ಡ ಗಣಿತ ಕೂಟ ಎಂದು ಪರಿಗಣಿಸಲಾಗಿರುವ ಜಂಟಿ ಗಣಿತ ಮೇಳದಲ್ಲಿ ಪ್ರಶಸ್ತಿ ನೀಡಲಾಗುವುದು.

ಸಿಪ್ರಿಯನ್ ಫೊಯಾಸ್ ಪ್ರಶಸ್ತಿಯು ನಿಖಿಲ್ ಶ್ರೀವಾಸ್ತವ ಅವರು ಗೆದ್ದ ಮೂರನೇ ಪ್ರಮುಖ ಬಹುಮಾನವಾಗಿದೆ. ಅವರು 2014ರಲ್ಲಿ ಜಾರ್ಜ್ ಪಾಲಿಯಾ ಪ್ರಶಸ್ತಿ ಹಾಗೂ 2021ರಲ್ಲಿ ಹೆಲ್ಡ್​ ಅವಾರ್ಡ್​ ಪಡೆದಿದ್ದರು.

ಏನಿದು 1959-ಸಮಸ್ಯೆ?

1959ರಲ್ಲಿ ಅಮೆರಿಕದ ಖ್ಯಾತ ಗಣಿತಶಾಸ್ತ್ರರಾದ ರಿಚರ್ಡ್ ಕ್ಯಾಡಿಸನ್ ಮತ್ತು ಇಸಡೋರ್ ಸಿಂಗರ್ ಅವರು ರಚಿಸಿದ್ದ ಆಪರೇಟರ್ ಥಿಯರಿಯಲ್ಲಿ ಬರುವ ಪೇವಿಂಗ್ ಸಮಸ್ಯೆ ಇದಾಗಿದೆ. ಇದೀಗ ಈ ಸಮಸ್ಯೆಯನ್ನು ನಿಖಿಲ್ ಶ್ರೀವಾಸ್ತವ, ಆ್ಯಡಮ್ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮನ್ ಬಗೆಹರಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.