ETV Bharat / international

ಕಮಲಾ ಹ್ಯಾರಿಸ್ ಸ್ಫೂರ್ತಿಯ ಮೂಲ ಎಂದ ಪ್ರಧಾನಿ ಮೋದಿ: ಇಂದು ಬೈಡನ್ ಭೇಟಿ - ಕಮಲಾ ಹ್ಯಾರಿಸ್ ಸ್ಫೂರ್ತಿಯ ಮೂಲ

ಬೈಡನ್ ಅವರನ್ನು ಪ್ರಧಾನಿ ಮೋದಿ ಇಂದು ಶ್ವೇತಭವನದಲ್ಲಿ ಭೇಟಿಯಾಗಲಿದ್ದು, ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ವೈಯಕ್ತಿಕ ಸಭೆ ನಡೆಸಲಿದ್ದಾರೆ.

India, US natural partners with similar values, geopolitical interests: PM Modi
ಕಮಲಾ ಹ್ಯಾರಿಸ್ ಸ್ಫೂರ್ತಿಯ ಮೂಲ ಎಂದ ಪ್ರಧಾನಿ ಮೋದಿ: ಇಂದು ಬೈಡನ್ ಭೇಟಿ
author img

By

Published : Sep 24, 2021, 5:20 AM IST

ವಾಷಿಂಗ್ಟನ್, ಅಮೆರಿಕ: ಭಾರತ ಮತ್ತು ಅಮೆರಿಕ ಸಹಜ ಪಾಲುದಾರರು ಎಂದು ಪ್ರಧಾನಿ ಎಂದು ಹೇಳಿದ್ದು, ಎರಡೂ ದೇಶಗಳ ನಡುವೆ ಸಮನ್ವಯ ಮತ್ತು ಸಹಕಾರವೂ ಹೆಚ್ಚುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿಯೋಗ ಮಟ್ಟದ ಮಾತುಕತೆಗೆ ಮುಂಚಿತವಾಗಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಧಾನಿ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸುವ ವೇಳೆ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಅಮೆರಿಕ ಅತ್ಯಂತ ಹಳೆಯ ಪ್ರಜಾಪ್ರಭುತ್ವವನ್ನು ಹೊಂದಿವೆ. ಎರಡೂ ರಾಷ್ಟ್ರಗಳಲ್ಲಿ ಒಂದೇ ರೀತಿಯ ಮೌಲ್ಯಗಳು, ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿವೆ. ಎರಡೂ ದೇಶಗಳ ನಡುವಿನ ಸಮನ್ವಯ ಮತ್ತು ಸಹಕಾರವೂ ಹೆಚ್ಚುತ್ತಿದೆ.

ಅಮೆರಿಕದಲ್ಲಿ ಭಾರತೀಯ ಮೂಲದ 4 ಮಿಲಿಯನ್​​ಗೂ ಹೆಚ್ಚು ಜನರಿದ್ದಾರೆ. ಈ ಭಾರತೀಯ ಸಮುದಾಯವು ಎರಡು ದೇಶಗಳ ಸೇತುವೆಯಾಗಿದೆ. ಎರಡೂ ದೇಶಗಳ ಆರ್ಥಿಕತೆ ಮತ್ತು ಸಮಾಜಕ್ಕೆ ಅವರ ಕೊಡುಗೆ ನಿಜಕ್ಕೂ ಪ್ರಶಂಸನೀಯ ಎಂದು ಮೋದಿ ಹೇಳಿದರು.

ಕಮಲಾ ಹ್ಯಾರಿಸ್‌ರೊಂದಿಗೆ ಪ್ರಧಾನಿ ಮೋದಿಯವರ ಮೊದಲ ವೈಯಕ್ತಿಕ ಭೇಟಿ ಇದಾಗಿದ್ದು, ಕೋವಿಡ್ ಎರಡನೇ ಅಲೆಯ ವೇಳೆ ಅಮೆರಿಕ ನೀಡಿದ್ದ ಸಹಾಯವನ್ನು ಸ್ಮರಿಸಿದ್ದಾರೆ. ಇದನ್ನು ಭಾರತ ಎಂದಿಗೂ ನೆನೆಯುತ್ತಲೇ ಇರುತ್ತದೆ ಎಂದು ಅಮೆರಿಕಕ್ಕೆ ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

'ಕಮಲಾ ಹ್ಯಾರಿಸ್ ಸ್ಫೂರ್ತಿಯ ಮೂಲ'

ಅಮೆರಿಕದ ಉಪಾಧ್ಯಕ್ಷರ ಆಯ್ಕೆ ಒಂದು ಐತಿಹಾಸಿಕ ಘಟನೆ ಎಂದಿರುವ ಪ್ರಧಾನಿ ಮೋದಿ ಕಮಲಾ ಹ್ಯಾರಿಸ್ ಅವರನ್ನು ಸ್ಫೂರ್ತಿಯ ಮೂಲ ಎಂದಿದ್ದಾರೆ. ಪ್ರಪಂಚದಾದ್ಯಂತ ನೀವು ಸ್ಫೂರ್ತಿಯಾಗಿದ್ದೀರಿ. ಬೈಡನ್ ಮತ್ತು ನಿಮ್ಮ ನಾಯಕತ್ವದಲ್ಲಿ ನಮ್ಮ ದೇಶದ ದ್ವಿಪಕ್ಷೀಯ ಸಂಬಂಧಗಳು ಉನ್ನತ ಮಟ್ಟಕ್ಕೆ ಏರುತ್ತವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ನೀವು ಮತ್ತು ಬೈಡನ್ ಅತ್ಯಂತ ಸವಾಲಿನ ವೇಳೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದೀರಿ. ಕೋವಿಡ್ ನಿರ್ವಹಣೆ, ಹವಾಮಾನ ವೈಪರಿತ್ಯ ನಿರ್ವಹಣೆ ಜೊತೆಗೆ ಮತ್ತು ಕ್ವಾಡ್​​ನಂತಹ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದ ಅವರು ಹ್ಯಾರಿಸ್ ಅವರನ್ನು ಭಾರತಕ್ಕೆ ಆಹ್ವಾನಿಸಿದರು.

ಬೈಡನ್ ಅವರನ್ನು ಪ್ರಧಾನಿ ಮೋದಿ ಇಂದು ಶ್ವೇತಭವನದಲ್ಲಿ ಭೇಟಿಯಾಗಲಿದ್ದು, ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ವೈಯಕ್ತಿಕ ಸಭೆ ನಡೆಸಲಿದ್ದಾರೆ. ಇದಾದ ನಂತರ ಕ್ವಾಡ್ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರೂ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ''UNSC ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸುಧಾರಣೆಗಳು ಅಗತ್ಯ''- G4 ರಾಷ್ಟ್ರಗಳ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.