ನ್ಯೂಯಾರ್ಕ್: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಗೆ 2022-24ರ ಅವಧಿಗೆ ಭಾರತ ಆಯ್ಕೆಯಾಗಿದೆ.
ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಸಂಸ್ಥೆಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಕೂಡ ಒಂದಾಗಿದ್ದು, ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಿ, ಸದಸ್ಯ ರಾಷ್ಟ್ರಗಳಿಗೆ ನೀತಿ ಶಿಫಾರಸುಗಳನ್ನು ರೂಪಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
-
I thank all Member States of the @UN for their vote of confidence in India for #ECOSOC https://t.co/vIDILvt1I0
— PR/Amb T S Tirumurti (@ambtstirumurti) June 8, 2021 " class="align-text-top noRightClick twitterSection" data="
">I thank all Member States of the @UN for their vote of confidence in India for #ECOSOC https://t.co/vIDILvt1I0
— PR/Amb T S Tirumurti (@ambtstirumurti) June 8, 2021I thank all Member States of the @UN for their vote of confidence in India for #ECOSOC https://t.co/vIDILvt1I0
— PR/Amb T S Tirumurti (@ambtstirumurti) June 8, 2021
ಒಟ್ಟು 54 ದೇಶಗಳನ್ನು ಮೂರು ವರ್ಷಗಳ ಅವಧಿಗೆ ECOSOC ಸದಸ್ಯ ರಾಷ್ಟ್ರಗಳನ್ನಾಗಿ ಆಯ್ಕೆಮಾಡಲಾಗುತ್ತದೆ. ಪ್ರಸ್ತುತ 2019 ರಿಂದ 2021ರ ವರೆಗಿನ ಅವಧಿ ಡಿಸೆಂಬರ್ಗೆ ಮುಕ್ತಾಯಗೊಳ್ಳಲಿದ್ದು, 2022-24ರ ಅವಧಿಗೆ ಯುನ್ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಭಾರತ ಆಯ್ಕೆಯಾಗಿದೆ.
ಈ ವಿಚಾರವನ್ನು ಟ್ವೀಟ್ ಮಾಡಿ ಖಚಿತಪಡಿಸಿರುವ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು, ಭಾರತದ ಪರ ವಿಶ್ವಾಸ ಮತ ಚಲಾಯಿಸಿದ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.