ETV Bharat / international

ಟೆಕ್ಸಾಸ್‌ ಒತ್ತೆಯಾಳು ಪ್ರಕರಣಕ್ಕೆ ನಡುಗಿದ ಅಮೆರಿಕ, ಇಸ್ರೇಲ್‌: ಇಷ್ಟಕ್ಕೂ ಪಾಕ್‌ನ ಆಫಿಯಾ ಸಿದ್ದಿಕಿ ಯಾರು? ಈಕೆಗೇಕೆ 86 ವರ್ಷ ಶಿಕ್ಷೆ? - ಪಾಕ್ ನರವಿಜ್ಞಾನಿ ಆಫಿಯಾ ಸಿದ್ದಿಕಿ

ಈಗ ಬಿಡುಗಡೆಗೆ ಒತ್ತಾಯಿಸಲಾದ ಆಫಿಯಾ ಸಿದ್ದಿಕಿ ಪಾಕಿಸ್ತಾನ ಮೂಲದ ನರ ವಿಜ್ಞಾನಿ. ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಬ್ರಾಂಡಿಸ್ ವಿಶ್ವವಿದ್ಯಾಲಯ ಮತ್ತು ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದವರು. ಆಕೆಗೂ ಮತ್ತು ಆಲ್​ಖೈದಾಗೂ ಸಂಬಂಧವಿದೆ ಎಂಬುದು ನ್ಯಾಯಾಲಯದಿಂದ ದೃಢಪಟ್ಟಿದೆ.

all-hostages-safely-released-from-standoff-at-texas-synagogue
ಟೆಕ್ಸಾಸ್​ನ ಪ್ರಾರ್ಥನಾ ಮಂದಿರದ ಒತ್ತೆಯಾಳುಗಳು ಬಿಡುಗಡೆ: ಯಾರು ಈ ಆಫಿಯಾ ಸಿದ್ದಿಕಿ?
author img

By

Published : Jan 16, 2022, 10:18 AM IST

Updated : Jan 16, 2022, 10:37 AM IST

ವಾಷಿಂಗ್ಟನ್(ಅಮೆರಿಕ): ವಿಶ್ವ ವಾಣಿಜ್ಯ ಕಚೇರಿ ಮತ್ತು ಪೆಂಟಗಾನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಇತಿಹಾಸ. ಇದಾದ ನಂತರ ಅಮೆರಿಕದಲ್ಲಿ ಅತ್ಯಂತ ಪ್ರಚಲಿತಕ್ಕೆ ಬಂದಿದ್ದು ಪಾಕಿಸ್ತಾನ ಮೂಲದ ಮಹಿಳೆ ಹಾಗೂ ನರವಿಜ್ಞಾನಿ ಆಫಿಯಾ ಸಿದ್ದಿಕಿ ಪ್ರಕರಣ.

ನಿನ್ನೆ ಟೆಕ್ಸಾಸ್ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಧರ್ಮಗುರು ಸೇರಿದಂತೆ ನಾಲ್ವರನ್ನು ಒತ್ತೆಯಾಳಾಗಿ ಇರಿಸಿಕೊಂಡ ವ್ಯಕ್ತಿಯೋರ್ವ ಈ ನರವಿಜ್ಞಾನಿಯ ಬಿಡುಗಡೆಗೆ ಬೇಡಿಕೆಯಿಟ್ಟಿದ್ದ. ಆಫಿಯಾ ಸಿದ್ದಿಕಿ ಈಗ ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಶಿಕ್ಷೆಗೆ ಒಳಗಾಗಿದ್ದಾರೆ. ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ನೆಲೆಯೂರಿದ್ದಾಗ ಅಲ್ಲಿನ ಅಮೆರಿಕನ್ ಸೇನಾಧಿಕಾರಿಗಳನ್ನು ಹತ್ಯೆ ಮಾಡಲು ಯತ್ನಿಸಿದ ಗಂಭೀರ ಆರೋಪ ಸಿದ್ದಿಕಿ ಮೇಲಿದೆ.

2008ರಲ್ಲಿ ಇವರನ್ನು ಅಫ್ಘಾನಿಸ್ತಾನದಲ್ಲಿ ಬಂಧಿಸಲಾಗಿತ್ತು. ಇದಾದ ಬಳಿಕ ಸುದೀರ್ಘ ವಿಚಾರಣೆ ನಡೆದು 2010ರಲ್ಲಿ ಮ್ಯಾನ್​ಹಟನ್ ನ್ಯಾಯಾಲಯದಲ್ಲಿ ಈಕೆಯ ಮೇಲಿದ್ದ ಆರೋಪಗಳು ಸಾಬೀತಾಗಿದ್ದವು. ಇದರ ಪರಿಣಾಮ, ನ್ಯಾಯಾಲಯ ಸುಮಾರು 86 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಇದೇ ನರವಿಜ್ಞಾನಿಯನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಟೆಕ್ಸಾನ್‌ ಯಹೂದಿ ಪ್ರಾರ್ಥನಾಲಯಕ್ಕೆ ನುಗ್ಗಿದ ಶಸ್ತ್ರಸಜ್ಜಿತ ವ್ಯಕ್ತಿ ನಾಲ್ವರನ್ನು ಒತ್ತೆಯಾಳಾಗಿರಿಸಿಕೊಂಡು ಬೇಡಿಕೆ ಇಟ್ಟಿದ್ದ.

ಆಫಿಯಾ ಸಿದ್ದಿಕಿ ಹಿನ್ನೆಲೆ:

ಈಗ ಬಿಡುಗಡೆಗೆ ಒತ್ತಾಯಿಸಲಾದ ಆಫಿಯಾ ಸಿದ್ದಿಕಿ ಪಾಕಿಸ್ತಾನ ಮೂಲದ ನರ ವಿಜ್ಞಾನಿ. ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಬ್ರಾಂಡಿಸ್ ವಿಶ್ವವಿದ್ಯಾಲಯ ಮತ್ತು ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದವರು. ಆಕೆಗೂ ಮತ್ತು ಆಲ್​ಖೈದಾಗೂ ಸಂಬಂಧವಿದೆ ಎಂಬುದು ನ್ಯಾಯಾಲಯದಿಂದ ದೃಢಪಟ್ಟಿದೆ.

ಆಫಿಯಾ ಸಿದ್ದಿಕಿ ಮತ್ತು ಆಲ್​ಖೈದಾಗೂ ಸಂಬಂಧವಿದೆ ಎಂಬುದನ್ನು ತಿಳಿಯಲು ಮತ್ತಷ್ಟು ವರ್ಷಗಳ ಹಿಂದಿನ ಘಟನಾವಳಿಗಳನ್ನು ಗಮನಿಸಬೇಕಾಗುತ್ತದೆ.

2001ರಲ್ಲಿ ವಿಶ್ವ ವಾಣಿಜ್ಯ ಕಚೇರಿ, ಪೆಂಟಗಾನ್ ಮತ್ತು ಇತರ ಸ್ಥಳಗಳ ಮೇಲೆ ಆಲ್​ ಖೈದಾ ದಾಳಿ ನಡೆಸಿದ ನಂತರ ಅಮೆರಿಕದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು. ಅಲ್ಲಿನ ತನಿಖಾ ಸಂಸ್ಥೆ ಎಫ್​ಬಿಐ ಮತ್ತು ನ್ಯಾಯ ಇಲಾಖೆ ಕೂಡಾ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದವು.

2004ರ ಮೇ ತಿಂಗಳಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಲ್​ಖೈದಾ ಮುಂದಿನ ತಿಂಗಳಲ್ಲಿ ಅಂದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಮತ್ತೊಂದು ದಾಳಿಗೆ ಸಜ್ಜಾಗಿದೆ ಎಂಬ ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಆಧಾರದಲ್ಲಿ ಎಫ್​ಬಿಐ ಮತ್ತು ನ್ಯಾಯ ಇಲಾಖೆ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ರವಾನಿಸಲಾಗಿತ್ತು.

ಅಮೆರಿಕ ಸೈನಿಕರ ಮೇಲೆ ಗುಂಡು ಹಾರಿಸಿದ್ದಳು:

ಆಲ್​ಖೈದಾ ವಿರುದ್ಧ ಹಲವು ಕಾರ್ಯಾಚರಣೆಗಳ ನಂತರ 2008ರಲ್ಲಿ ಆಫಿಯಾ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ಆಕೆಯ ಬಳಿ ಬಾಂಬ್‌ಗಳ ತಯಾರಿಕೆ ಕುರಿತು ಬರೆಯಲಾಗಿದ್ದು ಕೈಬರಹದ ಟಿಪ್ಪಣಿಗಳು ಕಂಡು ಬಂದಿದ್ದವು. ಅಷ್ಟೇ ಅಲ್ಲದೇ ಸಾಮೂಹಿಕವಾಗಿ ದಾಳಿ ನಡೆಸಲು 'ಅನುಕೂಲವಾಗಿರುವ' ಅಮೆರಿಕದ ಸ್ಥಳಗಳನ್ನು ಆಕೆ ಪಟ್ಟಿ ಮಾಡಿದ್ದಳು.

ಬಂಧಿಸುವ ಮೊದಲು ಆಕೆಯ ಕೊಠಡಿಗೆ ಪರಿಶೀಲನೆಗೆ ತೆರಳಿದ್ದ ಅಮೆರಿಕ ಸೈನಿಕನಿಂದ M-4 ರೈಫಲ್ ಕಸಿದುಕೊಂಡ ಆಫಿಯಾ, ಆ ತಂಡದ ಮೇಲೆ ಗುಂಡು ಹಾರಿಸಿದ್ದಳು. ಈ ಆರೋಪವೂ ಕೂಡಾ ಅಮೆರಿಕದ ನ್ಯಾಯಾಲಯದಲ್ಲಿ ಸಾಬೀತಾಗಿತ್ತು.

ಮಾನಸಿಕ ಅಸ್ವಸ್ಥಳೆಂದು ಹೇಳಿಕೆ..

2010ರಲ್ಲಿ ಆಫಿಯಾಗೆ ಶಿಕ್ಷೆ ವಿಧಿಸಲಾಗಿತ್ತು. ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರಲ್ಲ ಈಕೆ ಕ್ಷಮಾಪಣೆ ಕೋರಿದ್ದಳು. ಇದರ ಜೊತೆಗೆ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಶಿಕ್ಷೆಯಿಂದ ವಿನಾಯಿತಿ ನೀಡಬೇಕೆಂದು ಆಕೆಯ ವಕೀಲ ವಾದ ಮಂಡನೆ ಮಾಡಿದ್ದರು. ಆದರೂ, ಮ್ಯಾನ್​ಹಟನ್ ನ್ಯಾಯಾಲಯ ತನಿಖೆ ನಡೆಸಿ, ಸುಮಾರು 86 ವರ್ಷಗಳ ಶಿಕ್ಷೆ ವಿಧಿಸಿತ್ತು. ಇನ್ನೊಂದೆಡೆ, ಈ ಕುರಿತು ಸ್ಪಷ್ಟನೆ ನೀಡಿರುವ ಆಫಿಯಾ, ತಾನು ಮಾನಸಿಕ ಅಸ್ವಸ್ಥೆಯಲ್ಲ ಎಂದೂ ಸ್ಪಷ್ಟಪಡಿಸಿದ್ದಾಳೆ.

ಆಫಿಯಾ ಸಿದ್ದಿಕಿಗೆ ಶಿಕ್ಷೆಯಾದ ನಂತರ..

ಅಮೆರಿಕದ ಮ್ಯಾನ್​ಹಟನ್ ಕೋರ್ಟ್​ನಲ್ಲಿ ಆಕೆಗೆ ಶಿಕ್ಷೆಯಾದ ನಂತರ, ಪಾಕಿಸ್ತಾನದ ಅನೇಕ ನಗರಗಳಲ್ಲಿ ಅಮೆರಿಕದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಪಾಕ್ ಮಾಧ್ಯಮಗಳಲ್ಲಿ ಅಮೆರಿಕ ಮತ್ತು ಅಮೆರಿಕ ಸೇನೆಯ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.

ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ಆಫಿಯಾ ಸಿದ್ದಿಕಿಯನ್ನು 'ರಾಷ್ಟ್ರದ ಮಗಳು' ಎಂದು ಕರೆದದ್ದು ಮಾತ್ರವಲ್ಲದೇ, ಅಮೆರಿಕ ಜೈಲಿನಿಂದ ಆಕೆಯನ್ನು ಬಿಡುಗಡೆಗೊಳಿಸುವುದಾಗಿ ಬಹಿರಂಗವಾಗಿ ಹೇಳಿಕೆಗಳನ್ನೂ ನೀಡಿದ್ದರು.

ಈಗ ಆಫಿಯಾ ಎಲ್ಲಿದ್ದಾರೆ? ಹೇಗಿದ್ದಾರೆ?

ಶಿಕ್ಷೆ ಅನುಭವಿಸುತ್ತಿರುವ ಆಫಿಯಾರನ್ನು ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಫೆಡರಲ್ ಜೈಲಿನಲ್ಲಿ ಇರಿಸಲಾಗಿದೆ. 49 ವರ್ಷದ ಆಫಿಯಾ ಮೇಲೆ ಜೈಲಿನಲ್ಲಿಯೂ ಕೂಡಾ ಹಲ್ಲೆ ನಡೆಸಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಹಿಂದಿನ ವರ್ಷ ಜುಲೈನಲ್ಲಿ ಆಫಿಯಾ ಮೇಲೆ ಜೈಲಿನಲ್ಲಿದ್ದ ಮತ್ತೊಬ್ಬ ಕೈದಿ ಹಲ್ಲೆ ಮಾಡಿದ್ದನು. ಆಕೆಗೆ ಗಂಭೀರವಾದ ಗಾಯಗಳಾಗಿತ್ತು.

ಸಿದ್ದಿಕಿ ವಕೀಲರು ಹೇಳುವಂತೆ, ಜೈಲಿನ ಮತ್ತೊಬ್ಬ ಮಹಿಳಾ ಕೈದಿ, ಬಿಸಿ ಕಾಫಿಯನ್ನು ಆಫಿಯಾ ಮೇಲೆ ಎಸೆದಿದ್ದಳು. ಇಷ್ಟೇ ಅಲ್ಲದೇ ಆಕೆಯನ್ನು ನೆಲದಲ್ಲಿ ಉರುಳಿಸಿ, ಒದೆಯಲಾಗಿತ್ತು. ಗಂಭೀರವಾಗಿ ಗಾಯಗೊಂಡ ಆಕೆಯನ್ನು ವ್ಹೀಲ್ ಚೇರ್ ಮೂಲಕವೇ ಮೆಡಿಕಲ್ ಯೂನಿಟ್​ಗೆ ಕರೆದೊಯ್ಯಲಾಗಿತ್ತು.

ಈ ಘಟನೆಯ ವೇಳೆ ಆಫಿಯಾಳ ಎಡಗಣ್ಣಿನ ಬಳಿ ಸುಟ್ಟಗಾಯಗಳಾಗಿವೆ. ಕೈ, ಕಾಲುಗಳು ಮತ್ತು ಕೆನ್ನೆಯ ಮೇಲೂ ಗಾಯದ ಗುರುತುಗಳಿವೆ ಎಂದು ವಕೀಲರು ಹೇಳಿದ್ದರು.

ತಣ್ಣಗಾದ ಹೋರಾಟ:

ಈಗ ಆಫಿಯಾಳನ್ನು ಬಿಡುಗಡೆಗೊಳಿಸಬೇಕೆಂಬ ಪಾಕಿಸ್ತಾನದ ಒತ್ತಾಯವೂ ಬಹುತೇಕ ತಣ್ಣಗಾಗಿದೆ. ಆಗಾಗ ಕೆಲವು ಮುಸ್ಲಿಂ ಸಂಘಟನೆಗಳು ಬಿಡುಗಡೆಗೆ ಆಗ್ರಹಿಸಿ, ಪ್ರತಿಭಟನೆ ಮಾಡುತ್ತಿದ್ದು, ಅವುಗಳ ಪ್ರಾಬಲ್ಯವೂ ಕಡಿಮೆಯಾಗಿದೆ. ಈ ಬೆನ್ನಲ್ಲೇ ಟೆಕ್ಸಾಸ್​ನಲ್ಲಿ ವ್ಯಕ್ತಿಯೋರ್ವ ಕೆಲವರನ್ನು ಒತ್ತೆಯಾಳಾಗಿಸಿ, ಬಿಡುಗಡೆಗೆ ಬೇಡಿಕೆಯಿಟ್ಟಿದ್ದು, ಮತ್ತೆ ಆಫಿಯಾ ಪರ ಹೋರಾಟಗಳು ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

Last Updated : Jan 16, 2022, 10:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.