ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹಾಗೂ ಆ್ಯಪಲ್ ಸಿಇಒ ಟಿಮ್ ಕುಕ್ ಸೇರಿದಂತೆ ಪ್ರಮುಖರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿವೆ.
ದಿ ವರ್ಜ್ ವರದಿ ಪ್ರಕಾರ, ಟೆಸ್ಲಾ ಸಿಇಒ ಅವರ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, 'ಕೊರೊನಾ ಹಿನ್ನೆಲೆ ಬಿಟಿಸಿ ಸಂಬಳ ದ್ವಿಗುಣಗೊಳಿಸಲಾಗುವುದು. ಬಿಟಿಸಿ ವಿಳಾಸಕ್ಕೆ ಸಂಬಳ ಪಾವತಿಸಲಾಗುವುದು. ಒಳ್ಳೆಯದಾಗಲಿ, ಸುರಕ್ಷಿತವಾಗಿರಿ' ಎಂದು ತಿಳಿಸಲಾಗಿದೆ. ಬಳಿಕ ಟ್ವೀಟ್ ಡಿಲಿಟ್ ಆಗಿದ್ದು, ಮತ್ತೊಂದು ನಕಲಿ ಟ್ವೀಟ್ ಮಾಡಲಾಗಿದೆ.
ಇದೇ ನಕಲಿ ಟ್ವೀಟ್ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಖಾತೆಯಲ್ಲೂ ಪೋಸ್ಟ್ ಆಗಿದೆ. ತದನಂತರ, ಆಪಲ್, ಉಬರ್ ಮತ್ತು ಕಾನ್ಯೆ ವೆಸ್ಟ್ ಅವರ ಖಾತೆಗಳನ್ನೂ ಸಹ ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರ್, ಈ ಬಗ್ಗೆ ನಾವು ತನಿಖೆ ನಡೆಸಿ, ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.