ETV Bharat / international

ಗುಂಡಿನ ದಾಳಿ: ಕೆಲಕಾಲ ಅಮೆರಿಕ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್ ಬಂದ್​ - gunshot firing near Pentagon

ವಿಶ್ವದ ಹಲವು ದೇಶಗಳಲ್ಲಿ ಅಮೆರಿಕ ಸೇನೆಯ ಕಾರ್ಯಾಚರಣೆ ನಿರ್ವಹಿಸುವ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಬಳಿ ಗುಂಡಿನ ಸದ್ದು ಕೇಳಿಬಂದಿದೆ.

gunshot-firing-in-pentagon-usa-subway-metro-station
ಪೆಂಟಗನ್ ಬಳಿ ಗುಂಡಿನ ದಾಳಿ
author img

By

Published : Aug 4, 2021, 12:02 AM IST

Updated : Aug 4, 2021, 12:11 AM IST

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್ ಬಳಿಯ ಮೆಟ್ರೋ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಘಟನೆ ಬಳಿಕ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯನ್ನು ಬಂದ್​ ಮಾಡಲಾಗಿತ್ತು.

  • The scene of the incident is secure. It is still an active crime scene. We request that everyone stay away from the Metro rail entrance and bus platform area. Transportation at the Pentagon is diverted to Pentagon City.

    — Pentagon Force Protection Agency (Official) (@PFPAOfficial) August 3, 2021 " class="align-text-top noRightClick twitterSection" data=" ">

ಪೆಂಟಗನ್ ಟ್ರಾನ್ಸಿಟ್​ ಸೆಂಟರ್​ನ ಭಾಗವಾಗಿರುವ ಮೆಟ್ರೊ ಬಸ್ ಪ್ಲಾಟ್​ಫಾರ್ಮ್​ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದಲ್ಲಿ ಕೆಲ ಗಂಟೆಗಳ ಕಾಲ ಲಾಕ್​ಡೌನ್​ ಘೋಷಿಸಲಾಗಿತ್ತು. ಮೆಟ್ರೊ ಸಬ್​ವೇ ರೈಲುಗಳಿಗೂ ಪೆಂಟಗನ್ ನಿಲ್ದಾಣದಲ್ಲಿ ನಿಲುಗಡೆ ನಿಷೇಧಿಸಲಾಗಿದೆ.

ಪೆಂಟಗನ್ ಸಮೀಪವೇ ಇದ್ದ ಅಸೋಸಿಯೇಟೆಡ್​ ಪ್ರೆಸ್​ (ಎಪಿ) ಸುದ್ದಿಸಂಸ್ಥೆಯ ವರದಿಗಾರ ಗುಂಡಿನ ದಾಳಿ ನಡೆದಿರುವ ಬಗ್ಗೆ ದೃಢಪಡಿಸಿದ್ದಾರೆ.

  • The Pentagon has lifted the lock down and has reopened. Corridor 2 and the Metro entrance remains closed. Corridor 3 is open for pedestrian traffic.

ಘಟನೆ ನಡೆದ ಕೆಲ ಗಂಟೆಗಳ ಬಳಿಕ ಪೆಂಟಗನ್ ರಕ್ಷಣಾ ದಳ ಟ್ವೀಟ್ ಮಾಡಿದ್ದು, ಪೆಂಟಗನ್ ಲಾಕ್​ಡೌನ್ ತೆರವುಗೊಳಿಸಿ, ಮತ್ತೆ ತೆರೆಯಲಾಗಿದೆ. ಕಾರಿಡಾರ್-2 ಮತ್ತು ಮೆಟ್ರೋ ಪ್ರವೇಶದ್ವಾರವನ್ನು ಬಂದ್​ ಮಾಡಲಾಗಿದೆ. ಕಾರಿಡಾರ್-3 ಪಾದಚಾರಿ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ನಾಳೆ ಬೆಳಗ್ಗೆ ಶುಭ ಸುದ್ದಿ: ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ ಬೊಮ್ಮಾಯಿ

Last Updated : Aug 4, 2021, 12:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.