ಮೆಕ್ಸಿಕೋ ಸಿಟಿ: ಡ್ರಗ್ ಗ್ಯಾಂಗ್ವೊಂದರ ಬಂದೂಕುಧಾರಿಗಳು ಸೆಂಟ್ರಲ್ ಮೆಕ್ಸಿಕೊದ ಪೊಲೀಸ್ ಬೆಂಗಾವಲು ಪಡೆ ಮೇಲೆ ಹೊಂಚು ಹಾಕಿ ಗುಂಡಿನ ಮಳೆಗೆರೆದಿದೆ. ಈ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಮತ್ತು ಐವರು ಪ್ರಾಸಿಕ್ಯೂಷನ್ ತನಿಖಾಧಿಕಾರಿಗಳು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.
ಮೆಕ್ಸಿಕೊದಲ್ಲಿ ನಡೆದ ಈ ಹತ್ಯಾಕಾಂಡ 2019 ರ ನಂತರ ನಡೆದ ಅತಿದೊಡ್ಡ ದುಷ್ಕೃತ್ಯ ಇದಾಗಿದೆ. 2019 ಅಕ್ಟೋಬರ್ನಲ್ಲಿ ಕಾರ್ಟೆಲ್ ಬಂದೂಕುಧಾರಿಗಳು 14 ಪೊಲೀಸ್ ಅಧಿಕಾರಿಗಳನ್ನು ಹೊಂಚು ಹಾಕಿ ಕೊಂದು ಹಾಕಿದ್ದರು. ಮೆಕ್ಸಿಕೊ ನಗರದ ನೈರುತ್ಯ ದಿಕ್ಕಿನಲ್ಲಿರುವ ಗ್ರಾಮೀಣ ಭಾಗದಲ್ಲಿ ಪೊಲೀಸರನ್ನು ಕೊಂದು ಹಾಕಿದ ಡ್ರಗ್ಸ್ ಗ್ಯಾಂಗ್ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಓದಿ: ಹೆಚ್ಚಿನ ಕೊರೊನಾ ಕೇಸ್: ಅಮೃತಸರದಲ್ಲಿ ನೈಟ್ ಕರ್ಫ್ಯೂ ಜಾರಿ... ಕರ್ನಾಟಕದಲ್ಲಿ ಎಂದು?
ಇಂತಹ ಅತಿದೊಡ್ಡ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ದುಷ್ಕರ್ಮಿಗಳ ಬಂಧನಕ್ಕಾಗಿ ಬಲೆ ಬೀಸಿದೆ. ಸೈನಿಕರು, ನೌಕಾಪಡೆ ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳು ದುಷ್ಕರ್ಮಿಗಳ ಹೆಡೆಮುರಿ ಕಟ್ಟಲು ಸನ್ನದ್ಧರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.