ETV Bharat / international

2020 ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಗ್ರೇಟಾ ಥನ್ಬರ್ಗ್​

ಪ್ರಪಂಚವನ್ನೆ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಪುಟ್ಟ ಪರಿಸರ ಹೊರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ.

greta-thunberg
ಗ್ರೇಟಾ ಥನ್ಬರ್ಗ್​
author img

By

Published : Jan 31, 2020, 3:10 PM IST

ಸ್ಟಾಕ್ಹೋಮ್ : ಬಾಲ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ಅವರ 'ಪ್ಯೂಚರ್​ ಫಾರ್​ ಫ್ರೈಡೇ' ಅಭಿಯಾನವನ್ನು 2020 ನೊಬೆಲ್​ ಶಾಂತಿ ಪ್ರಶಸ್ತಿಗಾಗಿ ಸ್ವೀಡಿಷ್​ ಶಾಸಕರಿಬ್ಬರು ಸೂಚಿಸಿದ್ದಾರೆ.

ವಿಶ್ವವನ್ನೆ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಪುಟ್ಟ ಪರಿಸರ ಹೊರಾಟಗಾರ್ತಿಯ ಹೆಸರನ್ನು ಸದ್ಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಚಿಕ್ಕ ವಯಸ್ಸಿನಿಂದ ಹವಾಮಾನ ಬಿಕ್ಕಟ್ಟಿನ ಕುರಿತು ದಿಟ್ಟ ಹೆಜ್ಜೆ ಇಟ್ಟು ವಿಶ್ವದ ದೊಡ್ಡಣ್ಣನ ಕಣ್ಣು ತೆರೆಸುವಂತೆ ಮಾಡಿದ ಅವಳ ಸಾಧನೆಯನ್ನು ಗುರುತಿಸಿ ಎಡ ಪಕ್ಷದ (Left Party parliamentarians) ಸಂಸದರಾದ ಜೆನ್ಸ್ ಹೋಲ್ಮ್ ಮತ್ತು ಹಕನ್ ಸ್ವೆನೆಲಿಂಗ್ ನಾರ್ವೇಜಿಯನ್ ನೊಬೆಲ್ ಸಮಿತಿಗೆ ಪತ್ರ ಬರೆದಿದ್ದಾರೆ.

ಒಂದು ವೇಳೆ ಗ್ರೇಟಾ ಥನ್ಬರ್ಗ್​ ಈ ಬಗ್ಗೆ ಯೋಚನೆ ಮಾಡದೇ ಇದ್ದಿದ್ದರೆ ಸಾವಿರಾರು ಯುವ ಪೀಳಿಗೆಗೆ ಪರಿಸರ ಕುರಿತು ಜಾಗೃತ ಭಾವನೆ ಬರುತ್ತಿರಲಿಲ್ಲ ಎಂದು ನಾಮ ನಿರ್ದೇಶನಕ್ಕೆ ಸಮರ್ಥನೆ ನೀಡಿದ್ದಾರೆ. ತನ್ನ ಮೊದಲ ಹೋರಾಟವನ್ನು ಆಗಸ್ಟ್ 2018 ರಲ್ಲಿ ತನ್ನ "ಸ್ಕೂಲ್ ಸ್ಟ್ರೈಕ್ ಫಾರ್ ದಿ ಕ್ಲೈಮೇಟ್" ಮೂಲಕ ಸ್ವೀಡಿಷ್ ಸಂಸತ್ತಿ ಹೊರಗೆ ಪ್ರಾರಂಭಿಸಿದ ಬಾಲಕಿ ಅಂದಿನಿಂದ ಪರಿಸರ ಸಂರಕ್ಷಣೆಗಾಗಿ ಯುವಜನರನ್ನು ಪ್ರೇರೇಪಿಸುತ್ತಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.