ವಾಷಿಂಗ್ಟನ್ (ಯುಎಸ್): ಯುಎಸ್ ಸರ್ಕಾರದ ಕಾರ್ಯಕ್ರಮ ಡಿಫೆರ್ಡ್ ಆಕ್ಷನ್ ಫಾರ್ ಚೈಲ್ಡ್ಹುಡ್ ಅರೈವಲ್ಸ್ (ಡಿಎಸಿಎ) ಅಡಿ ಉದ್ಯೋಗ ಪಡೆಯಲು ಬಯಸುವ ಸುಮಾರು 500 ಯುವ ವಲಸಿಗರ ಅರ್ಜಿ ಶುಲ್ಕವಾಗಿ 250,000 ಯುಎಸ್ ಡಾಲರ್ ಅನುದಾನವನ್ನು ದೇಣಿಗೆ ನೀಡುವುದಾಗಿ ಆಲ್ಫಾಬೆಟ್ ಇಂಕ್‌ನ ಗೂಗಲ್ ಬುಧವಾರ ತಿಳಿಸಿದೆ.
500ಕ್ಕೂ ಹೆಚ್ಚು ಯುವ ವಲಸಿಗರ ಡಿಎಸಿಎ ಅರ್ಜಿ ಶುಲ್ಕ ಸರಿದೂಗಿಸಲು ಗೂಗಲ್ ಡಾಟ್ ಆರ್ಗ್ ಯುನೈಟೆಡ್ ವಿ ಡ್ರೀಮ್ಗೆ 250,000 ಯುಎಸ್ ಡಾಲರ್ ಅನುದಾನ ನೀಡುತ್ತಿದೆ. ಈ ಅನುದಾನವು 35 ಮಿಲಿಯನ್ ಯುಎಸ್ ಡಾಲರ್ನಷ್ಟಿರುತ್ತದೆ. ಗೂಗಲ್ ಸಿಬ್ಬಂದಿ ಮತ್ತು ಗೂಗಲ್.ಆರ್ಗ್‌ನಿಂದ 1 ಮಿಲಿಯನ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಲಾಗಿದೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚು ಅಗತ್ಯವಿರುವ ಇತರ ಸುಧಾರಣೆಗಳನ್ನು ನೀಡಲು ಈ ಕ್ರಮ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದೆ.
ಮುಂಬರುವ ಯುಎಸ್ ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಆಡಳಿತವನ್ನು ಬೆಂಬಲಿಸಲು ಬದ್ಧರಾಗಿರುವ ಗೂಗಲ್‌ನ ಹಿರಿಯ ಉಪಾಧ್ಯಕ್ಷ ಕೆಂಟ್ ವಾಕರ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ, "ಉದ್ಯೋಗ ಆಧಾರಿತ ವೀಸಾ ಕಾರ್ಯಕ್ರಮಗಳನ್ನು ಸುಧಾರಿಸುವ ಸಮಗ್ರ ವಲಸೆ ಸುಧಾರಣೆಯನ್ನು ಜಾರಿಗೆ ತರಲು ಹೊಸ ಕಾಂಗ್ರೆಸ್ ಮತ್ತು ಆಡಳಿತದ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ. ಅದು ಅಮೆರಿಕದ ಸ್ಪರ್ಧಾತ್ಮಕತೆ ಹೆಚ್ಚಿಸುತ್ತದೆ, ವಲಸೆ ಕಾರ್ಮಿಕರು ಮತ್ತು ಉದ್ಯೋಗದಾತರಿಗೆ ಹೆಚ್ಚಿನ ಭರವಸೆ ನೀಡುತ್ತದೆ. ಉತ್ತಮ ಮತ್ತು ಹೆಚ್ಚು ಮಾನವೀಯ ವಲಸೆ ಪ್ರಕ್ರಿಯೆ ಮತ್ತು ಗಡಿ ಭದ್ರತಾ ಅಭ್ಯಾಸಗಳನ್ನು ಉತ್ತೇಜಿಸುತ್ತದೆ" ಎಂದಿದ್ದಾರೆ.