ಸಾಮಾಜಿಕ ಜಾಲತಾಣಗಳಲ್ಲಿ ನಾಯಿಗಳ ಮೋಜು-ಮಸ್ತಿಯ ವಿಡಿಯೋಗಳಿಗೆ ಲೆಕ್ಕವಿಲ್ಲ. ಇವುಗಳ ಸಾಲಿಗೆ ಲೇಟೆಸ್ಟ್ ಆಗಿ ಸೇರಿಕೊಂಡಿರುವ ವಿಡಿಯೋದಲ್ಲಿ ನಾಯಿಯೊಂದು ತನ್ನ ಸೋಮಾರಿತನದಿಂದಲೇ ಮನರಂಜನೆ ನೀಡಿದೆೆ. ಅದು ಹೇಗೆ ಗೊತ್ತೇ?
ಅಮೆರಿಕದ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋ ನೋಡಿ..
-
Some doggos aren’t built for the obstacle course. Wait for it… pic.twitter.com/M50Y3jOBFc
— Rex Chapman🏇🏼 (@RexChapman) July 21, 2021 " class="align-text-top noRightClick twitterSection" data="
">Some doggos aren’t built for the obstacle course. Wait for it… pic.twitter.com/M50Y3jOBFc
— Rex Chapman🏇🏼 (@RexChapman) July 21, 2021Some doggos aren’t built for the obstacle course. Wait for it… pic.twitter.com/M50Y3jOBFc
— Rex Chapman🏇🏼 (@RexChapman) July 21, 2021
ಚಾಪ್ಮನ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ತನ್ನ ನಾಯಿಗೆ ಅಡೆತಡೆಯ (Obstacles) ದಾಟುವಿಕೆಯ ತರಬೇತಿ ನೀಡುತ್ತಾ ಸಾಗುತ್ತಾರೆ. ಸ್ವಲ್ಪ ದೂರದವರೆಗೆ ತನ್ನ ಮಾಲೀಕನನ್ನು ಹಿಂಬಾಲಿಸುವ ನಾಯಿ, ಒಮ್ಮೆಲೆ ಮೈಗಳ್ಳತನ ತೋರಿಸುತ್ತೆ. ಅಡೆತಡೆ ದಾಟಿ ಸಾಗಬೇಕಿರುವ ಶ್ವಾನ ಕುಸಿದು ಸುಮ್ಮನೆ ಸ್ವಲ್ಪಹೊತ್ತು ಮಾಲೀಕನ ಸಹಾಯ ನಿರೀಕ್ಷಿಸುತ್ತದೆ. ಮಾಲೀಕ ತನ್ನನ್ನು ಎಬ್ಬಿಸಬಹುದು ಎಂದು ಕಾಯುತ್ತದೆ. ಆದರೆ, ಚಾಪ್ಮನ್ ಸ್ವತಃ ನಾಯಿಯೇ ಮೇಲೇಳಲಿ ಎಂದು ಸುಮ್ಮನಾಗುತ್ತಾರೆ. ಈ ಸನ್ನಿವೇಶ ನಗು ತರಿಸುತ್ತದೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ರೆಕ್ಸ್ ಚಾಪ್ಮನ್, 'ಕೆಲವು ನಾಯಿಮರಿಗಳನ್ನು ಈ ರೀತಿಯ ಕೋರ್ಸ್‌ಗಾಗಿ ರೆಡಿ ಮಾಡಿಲ್ಲ' ತಿಳಿ ಹಾಸ್ಯ ಮಾಡಿದ್ದಾರೆ.
ನೆಟ್ಟಿಗರನ್ನು ಆಕರ್ಷಿಸಿರುವ ಈ ವಿಡಿಯೋ ಸುಮಾರು 3.8 ಮಿಲಿಯನ್ ವೀಕ್ಷಣೆ ಗಳಿಸಿದೆ. 20,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮತ್ತು 1,25,500 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ಗೆ ಅಧಿಕೃತ ಚಾಲನೆ: ಭಾರತ ಮುನ್ನಡೆಸಿದ ಮೇರಿ ಕೋಮ್- ಮನ್ಪ್ರೀತ್