ETV Bharat / international

ಭಾರತವನ್ನು 'ಮಹಿಳಾ ನೇತೃತ್ವದ ಅಭಿವೃದ್ಧಿ ದೇಶ'ವನ್ನಾಗಿಸಿದ ಪ್ರಧಾನಿ ಮೋದಿ: ತಿರುಮೂರ್ತಿ ಶ್ಲಾಘನೆ

author img

By

Published : Mar 19, 2021, 9:50 AM IST

ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಪಿಎಂ ಮೋದಿ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿ ಕಾರ್ಯಕ್ರಮಗಳ ಸರಣಿಯನ್ನೇ ಜಾರಿಗೆ ತರುತ್ತಿದೆ ಎಂದು ತಿರುಮೂರ್ತಿ ಅವರು ಪ್ರಧಾನಿಯನ್ನು ಶ್ಲಾಘಿಸಿದ್ದಾರೆ.

TS Tirumurti
ತಿರುಮೂರ್ತಿ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು 'ಮಹಿಳಾ ಅಭಿವೃದ್ಧಿ'ಯಿಂದ 'ಮಹಿಳಾ ನೇತೃತ್ವದ ಅಭಿವೃದ್ಧಿ ದೇಶ'ವನ್ನಾಗಿ ಪರಿವರ್ತಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

ಮಹಿಳೆಯರ ಸ್ಥಿತಿಗತಿಗಳ ವಿಶ್ವಸಂಸ್ಥೆ ಆಯೋಗದ 65ನೇ ಅಧಿವೇಶನದ ನಿಮಿತ್ತ ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಮತ್ತು ಅಖಿಲ ಭಾರತ ಮಹಿಳಾ ಶಿಕ್ಷಣ ನಿಧಿ ಸಂಘ ನಿನ್ನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿರುಮೂರ್ತಿ ಮಾತನಾಡಿದರು. ಭಾರತೀಯ ಮಹಿಳೆಯರಾದ ಹನ್ಸಾ ಜೀವರಾಜ್ ಮೆಹ್ತಾ, ಲಕ್ಷ್ಮಿ ಮೆನನ್, ಬೇಗಂ ಶರೀಫಾ ಹಮೀದ್ ಅಲಿ, ವಿಜಯ ಲಕ್ಷ್ಮಿ ಪಂಡಿತ್ ಮತ್ತು ಇತರರ ಕೊಡುಗೆಯನ್ನು ನೆನಪಿಸಿಕೊಂಡರು.

ಇದನ್ನೂ ಓದಿ: ಈ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ: ವಿಶೇಷ ವರದಿ

ಲಿಂಗ ಸಮಾನತೆ ಸಾಧಿಸುವುದು ಭಾರತದ ಆದ್ಯತೆಯಾಗಿದೆ. ದಶಕಗಳಿಂದ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಮತ್ತು ಪ್ರತಿಪಾದಿಸುವಲ್ಲಿ ಭಾರತವು ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡಿದೆ. ಕೋವಿಡ್​ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಕುಟುಂಬಗಳು ಜೀವನೋಪಾಯ ಕಳೆದುಕೊಂಡ ವೇಳೆಯಲ್ಲಿ ಅದನ್ನು ಸರಿದೂಗಿಸುವಲ್ಲಿ ಮಹಿಳೆಯರ ಪಾತ್ರವು ಮುಖ್ಯವಾಗಿತ್ತು. ಅವರಿಗೆ ರಕ್ಷಣೆ, ಪರಿಹಾರ ನೀಡುವಲ್ಲಿ ಹಾಗೂ ಮಹಿಳಾ ಕೇಂದ್ರಿತ ಯೋಜನೆಗಳನ್ನು ಜಾರಿ ತರುವಲ್ಲಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿರುಮೂರ್ತಿ ಹೇಳಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ರಾಣಿ ಲಕ್ಷ್ಮೀಬಾಯಿಯಿಂದ ಇಲ್ಲಿಯವರೆಗೂ ಭಾರತೀಯ ರಾಜಕೀಯ ಜೀವನದಲ್ಲಿ ಮಹಿಳೆಯರು ಕೇಂದ್ರ ಬಿಂದುವಾಗಿದ್ದಾರೆ. ಭಾರತದಲ್ಲಿ ಇಂದು ತಳಮಟ್ಟದಿಂದ ಮೇಲ್ಮಟ್ಟದವರೆಗೆ 1.3 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳು ಸಾರ್ವಜನಿಕ ನೀತಿಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಪಿಎಂ ಮೋದಿ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿ ಕಾರ್ಯಕ್ರಮಗಳ ಸರಣಿಯನ್ನೇ ಜಾರಿಗೆ ತರುತ್ತಿದೆ ಎಂದು ತಿರುಮೂರ್ತಿ ಅವರು ಪ್ರಧಾನಿಯನ್ನು ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.