ETV Bharat / international

ಇಸ್ರೇಲ್ - ಪ್ಯಾಲೆಸ್ಟೈನ್ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕು: ಗಾಲ್ ಗಾಡೊಟ್

author img

By

Published : May 13, 2021, 5:25 PM IST

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಇತ್ತೀಚಿನ ಸಂಘರ್ಷದ ಹಿನ್ನೆಲೆ ಗಾಲ್ ಗಾಡೊಟ್ ಅವರು ಶಾಂತಿಯ ಸಂದೇಶ ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

gal-gadot-criticised-after-she-calls-for-solution-to-israel-palestine-conflict

ಲಾಸ್ ಏಂಜಲೀಸ್: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಇತ್ತೀಚಿನ ಘರ್ಷಣೆ ಹಿನ್ನೆಲೆ ಹಾಲಿವುಡ್ ತಾರೆ ಗಾಲ್ ಗಡೊಟ್ ಅವರು ಶಾಂತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಗಾಡೊಟ್ ಟ್ವಿಟರ್​ ನಲ್ಲಿ ಹೇಳಿಕೆ ನೀಡಿದ್ದು, ತನ್ನ "ದೇಶವು ಯುದ್ಧದಲ್ಲಿದೆ" ಎಂಬುದನ್ನು ನೋಡುವುದರಿಂದ ಹೃದಯ ಹೊಡೆದಂತೆ ಆಗುತ್ತದೆ ಎಂದು ಹೇಳಿದ್ದಾರೆ.

ನನ್ನ ಹೃದಯ ಒಡೆಯುತ್ತದೆ. ನನ್ನ ದೇಶವು ಯುದ್ಧದಲ್ಲಿದೆ. ನನ್ನ ಕುಟುಂಬಕ್ಕಾಗಿ, ನನ್ನ ಸ್ನೇಹಿತರಿಗಾಗಿ ನಾನು ಚಿಂತೆ ಮಾಡುತ್ತೇನೆ. ನನ್ನ ಜನರಿಗಾಗಿ ನಾನು ಚಿಂತೆ ಮಾಡುತ್ತೇನೆ. ಇದು ಬಹಳ ಹಿಂದಿನಿಂದಲೂ ನಡೆಯುತ್ತಿರುವ ಒಂದು ಕೆಟ್ಟ ಚಕ್ರ ಎಂದು ಬರೆದುಕೊಂಡಿದ್ದಾರೆ. ಇಸ್ರೇಲ್ ಮತ್ತು ಅದರ "ನೆರೆಹೊರೆಯವರು" "ಮುಕ್ತ ಮತ್ತು ಸುರಕ್ಷಿತ" ರಾಷ್ಟ್ರಗಳಾಗಿ ಬದುಕಲು ಅರ್ಹರು ಎಂದು ಹೇಳಿದ್ದಾರೆ.

ಬಲಿಪಶುಗಳು ಮತ್ತು ಅವರ ಕುಟುಂಬಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ, ಈ ಹಗೆತನ ಕೊನೆಗೊಳ್ಳಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನಮ್ಮ ನಾಯಕರು ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಆದ್ದರಿಂದ ನಾವು ಶಾಂತಿಯಿಂದ ಅಕ್ಕಪಕ್ಕದಲ್ಲಿ ಬದುಕಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​​​ನಲ್ಲಿ ಇವರ ಪೋಸ್ಟ್​ಗೆ ಭಾರಿ ಪ್ರತ್ಯುತ್ತರಗಳು ಬಂದಿವೆ. ಪ್ಯಾಲೆಸ್ಟೈನ್ ಎಂದು ಉಲ್ಲೇಖಿಸುವ ಬದಲು "ನೆರೆಹೊರೆಯವರು" ಎಂಬ ಪದವನ್ನು ಬಳಸಿದ್ದಕ್ಕಾಗಿ ಕೆಲವರು ಕಿಡಿ ಕಾರಿದ್ದಾರೆ ಈ ಎಲ್ಲ ಪ್ರತಿಕ್ರಿಯೆಗಳಿಂದ ಬೇಸರಗೊಂಡು ತಮ್ಮ ಕಾಮೆಂಟ್‌ಗಳ ವಿಭಾಗವನ್ನು ನಿಷ್ಕ್ರಿಯಗೊಳಿದ್ದಾರೆ.

ಬುಧವಾರದ ವೇಳೆಗೆ ಹಿಂಸಾಚಾರದಲ್ಲಿ ಕನಿಷ್ಠ 53 ಪ್ಯಾಲೆಸ್ಟೀನಿಯರು ಮತ್ತು ಆರು ಇಸ್ರೇಲಿಗಳು ಸಾವಿಗೀಡಾಗಿದ್ದಾರೆ. ಹಾಗೆ ಹಾಗೆ ಕರಾವಳಿ ಪ್ರದೇಶದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್​ನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನೂರಾರು ವೈಮಾನಿಕ ದಾಳಿ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.