ವಾಷಿಂಗ್ಟನ್(ಅಮೆರಿಕ) : ಕೊರೊನಾ ವೈರಸ್ನಿಂದಾಗಿ ಅಮೆರಿಕ ದೇಶವೂ ಸಹ ಬೆಚ್ಚಿ ಬಿದ್ದಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹಾಗೂ ಅಲ್ಲಿನ ಕೊರೊನಾ ವಾರಿಯರ್ಸ್ಗಳು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಿಲ್ಲಿ ಕೊರೊನಾ ವಾರಿಯರ್ಸ್ಗೆ ಧೈರ್ಯ ತುಂಬುವ ಹಾಗೂ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುವ ಸಲುವಾಗಿ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯ ಟ್ರಂಪ್ ಕೊರೊನಾ ವಾರಿಯರ್ಸ್ಗಳಿಗೆ ಭೋಜನ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿಯಾಗಿರುವ ಮೆಲಾನಿಯ ಟ್ರಂಪ್, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಅಗ್ನಿಶಾಮಕ ದಳ ಮತ್ತು ತುರ್ತು ವೈದ್ಯಕೀಯ ಸೇವೆಗಳ ಕಚೇರಿಗೆ ತೆರಳಿ, ಕೊರೊನಾ ತಂದೊಡ್ಡಿರುವ ಸಂಕಷ್ಟದಲ್ಲಿ ಸಮಾಜದ ಒಳತಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಯನ್ನು ಶ್ಲಾಘಿಸಿ, ತದ ನಂತರ ಅಮೆರಿಕದ ಶ್ವೇತ ಭವನದಲ್ಲಿ ತಯಾರಿಸಲಾಗಿದ್ದ ಊಟ ಮತ್ತು ಉಪಹಾರ, ಟೊಟೆ ಬ್ಯಾಗ್, ಮರುಬಳಕೆ ಮಾಡಬಹುದಾದ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ಗಳನ್ನು ನೀಡಿದರು.
ಈ ಮೊದಲು ಸಾರ್ವಜನಿಕ ಪ್ರದರ್ಶನಗಳು, ಶಾಲೆಗಳು, ಆಸ್ಪತ್ರೆ ಸೇರಿದಂತೆ ಇತರ ಸ್ಥಳಗಳಿಗೆ ನಿಯಮಿತವಾಗಿ ಮೆಲಾನಿಯ ಟ್ರಂಪ್ ಭೇಟಿ ನೀಡುತ್ತಿದ್ದರು. ಕೊರೊನಾ ವೈರಸ್ ಆಕ್ರಮಣದಿಂದಾಗಿ ಶಾಲೆಗಳನ್ನು ಮುಚ್ಚಿದ್ದು, ಆಸ್ಪತ್ರೆಗಳಲ್ಲಿಯೂ ಸಂದರ್ಶಕರಿಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ, ಕೊರೊನಾ ವಾರಿಯರ್ಗಳಿಗೆ ಶ್ವೇತಭವನದಲ್ಲಿ ತಯಾರಿಸಲಾದ ಅಡಿಗೆಗಳನ್ನು ನೀಡಿ ಸಂತಸ ಪಡುತ್ತಿದ್ದೇನೆ ಎಂದು ಮೆಲಾನಿಯಾ ಹೇಳಿದ್ದಾರೆ.
ನಮ್ಮ ನೆರೆಹೊರೆಯವರನ್ನು ಹಾಗೂ ಈ ಸಮಾಜದಲ್ಲಿನ ಜನರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಪ್ರತಿದಿನ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅಗ್ನಿಶಾಮಕ ದಳ, ಪೊಲೀಸರು, ಇಎಂಎಸ್ ಸಿಬ್ಬಂದಿ, ವೈದ್ಯರು ಸೇರಿ ಹಲವರು ಶ್ರಮಿಸುತ್ತಾರೆ. ಸಮಾಜದ ಒಳಿತಿಗಾಗಿ ಶ್ರಮಿಸುವವರಿಗೆ ಅಧ್ಯಕ್ಷರು ಮತ್ತು ನಾನು ಬೆಂಬಲ ನೀಡುತ್ತೇವೆ ಎಂದು ಶ್ರೀಮತಿ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಒಂದು ವಾರದ ಹಿಂದಿನಿಂದಲೂ, ದಿ ಮೇರಿ ಎಲಿಜಬೆತ್ ಹೌಸ್ ಹಾಗೂ ಇನ್ನಿತರ ಕೊರೊನಾ ವಾರಿಯರ್ಸ್ಗಳಿಗೆ, ಟೊಟೆ ಬ್ಯಾಗ್, ಉಪಹಾರ ಮತ್ತು ಇತರ ವಸ್ತುಗಳನ್ನು ನೀಡಲು ಪ್ರಥಮ ಮಹಿಳೆಯಾದ ಮೆಲಾನಿಯ ಟ್ರಂಪ್ ಶ್ವೇತಭವನದಿಂದ ತೆರಳುತ್ತಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರಕ್ಕೆ ಕೆಲ ತಿಂಗಳ ಹಿಂದೆ ಭೇಟಿ ನೀಡಿದ ಟ್ರಂಪ್ ಹಾಗೂ ಮೆಲಾನಿಯ, ಆ ಪ್ರದೇಶದಲ್ಲಿ ಮಾಸ್ಕ್ ಧರಿಸಿದವರಿಗೆ ಜಾಗೃತಿ ಮೂಡಿಸಿ, ಕಡ್ಡಾಯವಾಗಿ ಮುಖಗವಸುಗಳನ್ನು ಧರಿಸುವಂತೆ ಮನವಿ ಮಾಡಿದ್ದರು.
ಇನ್ನು, ಮೇ ತಿಂಗಳಿನಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿರುವ ಚಿಲ್ಡ್ರನ್ಸ್ ಇನ್ನಲ್ಲಿ ದಾಖಲಾಗಿರುವ ರೋಗಿಗಳಿಗಾಗಿ 150 ಬಾಕ್ಸ್ ಚಿಕನ್ ಮತ್ತು ಚೀಸ್ ಹಾಗೂ ಫ್ಲೋರೆಟ್‌ಗಳನ್ನೊಳಗೊಂಡ ಊಟವನ್ನು ಶ್ವೇತಭವನದ ನಿರ್ವಹಣಾ ಅಧಿಕಾರಿಗಳ ಮೂಲಕ ಮೆಲಾನಿಯ ಟ್ರಂಪ್ ಕಳಿಸಿಕೊಟ್ಟಿದ್ದರು.