ಟಕ್ಸನ್ (ಯು.ಎಸ್): ಸ್ಥಳಾಂತರಿಸುವ ಸೂಚನೆಯಡಿ ನೂರಾರು ಅರಿಝೋನಾ ನಿವಾಸಿಗಳಿಗೆ ಮನೆಗೆ ಮರಳಲು ಅನುಮತಿ ನೀಡಲಾಯಿತು.
ಆದರೆ, ಟಕ್ಸನ್ ಬಳಿಯ ರಾಷ್ಟ್ರೀಯ ಅರಣ್ಯದಲ್ಲಿ ಕಾಳ್ಗಿಚ್ಚು ಹಬ್ಬಿರುವ ಕಾರಣ ಸೂಚನೆ ಬಂದಲ್ಲಿ ಕೂಡಲೇ ಹೊರಡಲು ಸಿದ್ಧರಾಗಿರಲು ತಿಳಿಸಲಾಯಿತು.
ರಾಷ್ಟ್ರೀಯ ಹವಾಮಾನ ಸೇವೆಯ ಮುನ್ಸೂಚಕರು, ಈ ಪ್ರದೆಶದಲ್ಲಿ ವಾರಾಂತ್ಯದಲ್ಲಿ ತಾಪಮಾನವು ಮೂರು ಅಂಕಿಗಳಲ್ಲಿ ಉಳಿಯುವ ನಿರೀಕ್ಷೆ ಇದೆ ಎಂದಿದ್ದಾರೆ.
ಅಗ್ನಿಶಾಮಕ ದಳದವರು ಬೆಂಕಿ ಕಣಿವೆ ಪ್ರದೇಶದೆಡೆಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.